Friday, November 22, 2024
Homeರಾಜ್ಯಕರ್ನಾಟಕದ 5 ಮಂದಿ ಗಣ್ಯರಿಗೆ ಪದ್ಮಶ್ರೀ ಪ್ರದಾನ

ಕರ್ನಾಟಕದ 5 ಮಂದಿ ಗಣ್ಯರಿಗೆ ಪದ್ಮಶ್ರೀ ಪ್ರದಾನ

ನವದೆಹಲಿ: 2024ನೇ ಸಾಲಿನ ಪದ್ಮಶ್ರೀ ಪ್ರಶಸ್ತಗೆ ಆಯ್ಕೆಯಾದ ಕರ್ನಾಟಕದ 9 ಮಂದಿಯ ಪೈಕಿ 5 ಮಂದಿಗೆ ನಿನ್ನೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಪದ ಪ್ರಶಸ್ತಿಗಳನ್ನು 2024ರ ಜ.26ರ ಗಣರಾಜ್ಯೋತ್ಸವದ ವೇಳೆ ಘೋಷಿಸಲಾಗಿತ್ತು. ಇದರ ಹಿನ್ನೆಲೆಯಲ್ಲಿ ನಿನ್ನೆ ಕೆಲವರಿಗೆ ರಾಷ್ಟ್ರಪತಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಪ್ರಮುಖವಾಗಿ ಕರ್ನಾಟಕದ 5 ಮಂದಿ ಪೈಕಿ ಕಲಾ ಕ್ಷೇತ್ರದಲ್ಲಿ ಬೊಂಬೆಯಾಟದ ಗುರು ಮತ್ತು ಬೆಂಗಳೂರಿನಲ್ಲಿ ಧಾಟು ಬೊಂಬೆ ಥಿಯೇಟರ್‌ನ ಸಂಸ್ಥಾಪಕ ನಿರ್ದೇಶಕಿ ಹಾಗೂ ತೊಗಲು ಗೊಂಬೆಯಾಟದ ಸಂಯೋಜಿತ ಕಲಾ ಪ್ರಕಾರದ ತಮ ವ್ಯಾಪಕ ಸೇವೆಸಲ್ಲಿದ ಅನುಪಮಾ ಹೊಸ್ಕೆರೆ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.

ಶಿಕ್ಷಕರು, ಸಂಶೋಧಕರು, ಶಿಕ್ಷಣ ನೀತಿ ತಜ್ಞರು ಮತ್ತು ಭಾರತೀಯ ತತ್ವ ಮತ್ತು ಮೌಲ್ಯಗಳು ಆಳವಾಗಿ ಬೇರೂರಿವುವ ಸಂಸ್ಥೆಗಳ ಸಂಸ್ಥಾಪಕರಾಗಿ ಕಾರ್ಯನಿರ್ವಹಿಸಿದ ಪೊ.ಶ್ರೀಧರ್‌ ಮಾಕಂ ಕೃಷ್ಣಮೂರ್ತಿ ಅವರಿಗೆ ತಮ ಸಾಹಿತ್ಯ ಕ್ಷೇತ್ರದ ಸಾಧನೆ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿತ್ತು. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಇವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ.ಕೆ.ಎಸ್‌‍. ರಾಜಣ್ಣ, ಸೋಮಣ್ಣ ಹಾಗೂ ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿ ಕೊಡುಗೆ ನೀಡಿದ ಶಶಿ ಸೋನಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ತೆಲುಗು ನಟ ಚಿರಂಜೀವಿ ಹಾಗೂ ನಟಿ ವೈಜಂಯತಿ ಅವರಿಗೆ ಪದ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.ಪದ್ಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್‌ ಶಾ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

RELATED ARTICLES

Latest News