Friday, November 22, 2024
Homeಅಂತಾರಾಷ್ಟ್ರೀಯ | Internationalಜೈಲಿನಿಂದ ಕೇಜ್ರಿವಾಲ್‌ ಬಿಡುಗಡೆ, ಪಾಕಿಸ್ತಾನದಲ್ಲಿ ಸಂಭ್ರಮ

ಜೈಲಿನಿಂದ ಕೇಜ್ರಿವಾಲ್‌ ಬಿಡುಗಡೆ, ಪಾಕಿಸ್ತಾನದಲ್ಲಿ ಸಂಭ್ರಮ

ಇಸ್ಲಾಮಾಬಾದ್‌,ಮೇ11- ಅರವಿಂದ್‌ ಕೇಜ್ರಿವಾಲ್‌ ಅವರು ಜೈಲಿನಿಂದ ಬಿಡುಗಡೆಯಾದ ಬಗ್ಗೆ ಪಾಕಿಸ್ತಾನದ ಮಾಜಿ ಸಚಿವ ವಾದ್‌ ಚೌಧರಿ ಸಂತಸ ವ್ಯಕ್ತಪಡಿಸಿದ್ದು, ಮೋದಿ ಮತ್ತೊಂದು ಯುದ್ಧದಲ್ಲಿ ಸೋತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕೇಜ್ರಿವಾಲ್‌ ಬಿಡುಗಡೆ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್‌ ಹಾಕಿರುವ ಚೌದರಿ, ಮೋದಿ ಜೀ ಅವರಿಗೆ ಮತ್ತೊಂದು ಯುದ್ಧದಲ್ಲಿ ಸೋಲಾಗಿದೆ. ಕೇಜ್ರಿವಾಲ್‌ ಬಿಡುಗಡೆಯು ಭಾರತದ ಜನತೆಗೆ ಒಳ್ಳೆಯ ಸಂದೇಶ ಎಂದು ತಿಳಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಽಸಿದಂತೆ 2024 ರ ಮಾರ್ಚ್‌ 21 ರಂದು ಜಾರಿ ನಿರ್ದೇಶನಾಲಯವು ಕೇಜ್ರಿವಾಲ್‌ ಅವರನ್ನು ಬಂಧಿಸಿತ್ತು. 50 ದಿನಗಳ ನಂತರ ಕೇಜ್ರಿವಾಲ್‌ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಹಲವು ಷರತ್ತುಗಳನ್ನು ವಿಧಿಸಿ ಕೇಜ್ರಿವಾಲ್‌ ಅವರಿಗೆ ಸುಪ್ರೆಂ ಕೋರ್ಟ್‌ ಮಧ್ಯಂತರ ಜಾಮೀನು ನೀಡಿದೆ. ಜೂ.2 ರಂದು ಮತ್ತೆ ಪೊಲೀಸರ ಮುಂದೆ ಶರಣಾಗುವಂತೆ ದೆಹಲಿ ಸಿಎಂಗೆ ಸುಪ್ರೆಂ ಸೂಚನೆ ನೀಡಿದೆ.

ಇದಕ್ಕೂ ಮುನ್ನ, ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌‍ ಅಧಿಕಾರಕ್ಕೆ ಬಂದರೆ ಸಂಪತ್ತಿನ ಮರುಹಂಚಿಕೆ ಸಮೀಕ್ಷೆಯನ್ನು ನಡೆಸುವುದಾಗಿ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದನ್ನು ಚೌಧರಿ ಶ್ಲಾಸಿದ್ದರು. ರಾಹುಲ್‌ ಗಾಂಧಿಯನ್ನು ಮುತ್ತಜ್ಜ ಮತ್ತು ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರೊಂದಿಗೆ ಹೋಲಿಸಿ, ಇಬ್ಬರೂ ಸಮಾಜವಾದಿಗಳು ಎಂದು ಚೌಧರಿ ಬಣ್ಣಿಸಿದ್ದರು.

RELATED ARTICLES

Latest News