ಬೆಂಗಳೂರು, ಡಿ.26- ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರದಲ್ಲಿರುವ ಪಾರ್ಕ್, ಉದ್ಯಾನವರ, ಕೆರೆಗಳಿಗೆ ಎಂಟ್ರಿ ನಿಷೇಧಿಸಲಾಗಿದೆ.ಡಿ. 31 ರ ಸಂಜೆ 6 ರಿಂದ ಬೆಳಗಿನ ಜಾವ 6ರವರೆಗೆ ಜಿಬಿಎ ವ್ಯಾಪ್ತಿಯ ಪಾರ್ಕ್‌ಗಳು, ಉದ್ಯಾನವನಗಳು, ಕೆರೆಗಳಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಆದೇಶ ಹೊರಡಿಸಿದ್ದಾರೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದು ಎಂಬ ಉದ್ದೇಶದಿಂದ ಇಂತಹ ತೀರ್ಮಾನ ಕೈಗೊಳ್ಳಲಾಗಿದ್ದು ನಾಗರೀಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
