Friday, November 22, 2024
Homeರಾಷ್ಟ್ರೀಯ | Nationalಕೇಜ್ರಿವಾಲ್ ಜೈಲು ಪಾಲಾದ ನಂತರ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ : ಚೌಹಾಣ್

ಕೇಜ್ರಿವಾಲ್ ಜೈಲು ಪಾಲಾದ ನಂತರ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ : ಚೌಹಾಣ್

ವಿದಿಶಾ, ಮೇ12- ಜೈಲು ಸೇರಿದ ನಂತರ ಅರವಿಂದ್ ಕೇಜ್ರಿವಾಲ್ ಅವರು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಲೇವಡಿ ಮಾಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಜೈಲು ಸೇರಿದ ನಂತರ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಇದೀಗ ಅವರು ಜಾಮೀನಿನ ಮೇಲೆ ಇದ್ದಾರೆ ಮತ್ತು ಅದು ಕೂಡ ಚುನಾವಣೆಯವರೆಗೆ ಮಾತ್ರ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ರಾಜಕೀಯವು ಸ್ಥಾನ ಪಡೆಯಲು ಅಥವಾ ಸ್ವಹಿತಾಸಕ್ತಿಗಳನ್ನು ಸಾಧಿಸುವ ಮಾಧ್ಯಮವಲ್ಲ ಎಂದಿದ್ದಾರೆ.

ನಾವು ದೇಶಕ್ಕೆ ಸೇವೆ ಸಲ್ಲಿಸಲು ರಾಜಕೀಯ ಮಾಡಿ ಮತ್ತು ಜನರ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ನಾವು ಕೆಲಸ ಮಾಡುತ್ತೇವೆ, ಪಕ್ಷವು ನಮಗೆ ಯಾವುದೇ ಕೆಲಸ ನೀಡಿದರೂ ಅದನ್ನು ನಾವು ಸಂಪೂರ್ಣ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತೇವೆ ಎಂದು ಚೌಹಾಣ್ ಹೇಳಿದರು.

ನನ್ನ ಸ್ಥಾನವನ್ನು ಹೊರತುಪಡಿಸಿ, ನಾನು ಮಧ್ಯಪ್ರದೇಶದ ಹಲವು ಲೋಕಸಭಾ ಕ್ಷೇತ್ರಗಳಿಗೆ ಹೋಗಿ ಪಕ್ಷದ ಪ್ರಚಾರ ಮಾಡಿದ್ದೇನೆ. ನಾವೆಲ್ಲರೂ ಪ್ರಧಾನಿ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ಭ್ರಷ್ಟಾಚಾರ ತೊಲಗಿಸುವ ಬಗ್ಗೆ ಮಾತನಾಡುವ ಮೂಲಕ ಅ„ಕಾರಕ್ಕೆ ಬಂದ ಕೇಜ್ರಿವಾಲ, ಇಂದು ಅವರೇ ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಎಎಪಿ ರಾಷ್ಟ್ರೀಯ ಸಂಚಾಲಕರು ಪ್ರಧಾನಿ ಮೋದಿ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಧಾನಿಯಾಗಿಸಲು ದಾರಿ ಮಾಡಿಕೊಡುತ್ತಿದ್ದಾರೆ ಎಂದು ಹೇಳಿದ್ದರು.
ತಮ್ಮ ಸರ್ಕಾರ ರಚನೆಯಾದರೆ ಮೊದಲು ಯೋಗಿ ಆದಿತ್ಯನಾಥ್ ಅವರನ್ನು ಕಿತ್ತೊಗೆದು ನಂತರ ಅಮಿತ್ ಶಾ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡುತ್ತಾರೆ. ಪ್ರಧಾನಿ ಮೋದಿ ಅಮಿತ್ ಶಾಗೆ ಮತ ಕೇಳುತ್ತಿದ್ದಾರೆ. ಅಮಿತ್ ಶಾ ಮೋದಿ ಭರವಸೆ ಈಡೇರಿಸುತ್ತಾರಾ? ಎಂದು ಪ್ರಶ್ನಿಸಿದ್ದರು.

RELATED ARTICLES

Latest News