ಬೆಂಗಳೂರು, ಮೇ 16- ಐಶ್ವರ್ಯ, ಐಶ್ವರ್ಯ ನೀ ನನ್ನ ಉಸಿರು ಕಾಣೆ ಎನ್ನುತ್ತಾ ಸೂಪರ್ ಸ್ಟಾರ್ ಉಪೇಂದ್ರ ರೊಂದಿಗೆ ಐಶ್ವರ್ಯ' ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟು, ನಂತರ ಬಾಲಿವುಡ್ ಬಾದ್‍ಶಾ ಶಾರುಖ್‍ಖಾನ್ ನಟನೆಯ
ಓಂ ಶಾಂತಿ ಓಂ’ ಸಿನಿಮಾದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ನಂಬರ್ 1 ನಟಿಯಾಗಿದ್ದ ದೀಪಿಕಾ ಪಡುಕೋಣೆ ಸುದೀರ್ಘ ಕಾಲದ ನಂತರ ಕನ್ನಡ ಚಿತ್ರರಂಗಕ್ಕೆ ಮರು ಎಂಟ್ರಿ ಕೊಟ್ಟಿದ್ದಾರೆ.
ಅರೆ…. ದೀಪಿಕಾ ಸ್ಯಾಂಡಲ್‍ವುಡ್‍ಗೆ ಮರುಪ್ರವೇಶ ಮಾಡುತ್ತಾರಾ ಎಂದು ಅಂದಾಜಿಸಿದ್ದರೆ ನಿಮ್ಮ ಊಹೆ ನಿಜಕ್ಕೂ ತಪ್ಪು. ಹಾಗಾದರೆ ದೀಪಿಕಾ ಪಡುಕೋಣೆ ಹೇಗೆ ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಾರೆ ಎಂಬ ಅಂಶ ನಿಮ್ಮನ್ನು ಕಾಡದಿರದು.
ಬಾಲಿವುಡ್‍ನಲ್ಲಿ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುತ್ತಿರುವ ದೀಪಿಕಾಪಡುಕೋಣೆ ಅವರು ಪ್ರಭಾಸ್ ನಟನೆಯ ಕಲ್ಕಿ 2898 ಎಡಿ' ಚಿತ್ರದಲ್ಲಿ ನಟಿಸುತ್ತಿದ್ದು, ಇದೊಂದು ಫ್ಯಾನ್ ಇಂಡಿಯಾ ಆಗಿರುವ ಈ ಸಿನಿಮಾವು ಹಿಂದಿ, ತೆಲುಗು, ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಡಬ್ ಆಗಲಿವೆ. ಪ್ರಖ್ಯಾತ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಅವರ ಪುತ್ರಿಯಾಗಿರುವ ದೀಪಿಕಾ ಪಡುಕೋಣೆ ತಮ್ಮ ಬಾಲ್ಯದ ಬಹುತೇಕ ಜೀವನ ವನ್ನು ಬೆಂಗಳೂರಿನಲ್ಲೇ ಕಳೆದಿದ್ದು, ಕನ್ನಡವನ್ನು ತುಂಬಾ ಚೆನ್ನಾಗಿಯೇ ಬಲ್ಲವರಾಗಿದ್ದು ,
ಕಲ್ಕಿ 2898 ಎಡಿ’ ಚಿತ್ರದ ಕನ್ನಡ ಅವತರಿಣಿಕೆಯ ಡಬ್ಬಿಂಗ್‍ನಲ್ಲಿ ತಮ್ಮ ಪಾತ್ರಕ್ಕೆ ಅವರೇ ಧ್ವನಿ ಯಾಗಿದ್ದಾರೆ.
ಈ ಫ್ಯಾನ್ ಇಂಡಿಯಾ ಸಿನಿಮಾದಲ್ಲಿ ಪ್ರಭಾಸ್, ದೀಪಿಕಾಪಡುಕೋಣೆ ಜೊತೆಗೆ ದಕ್ಷಿಣ ಭಾರತದ ಖ್ಯಾತ ನಟರಾದ ಅಮಿತಾಬ್‍ಬಚ್ಚನ್, ಕಮಲಹಾಸನ್, ದಿಶಾ ಪಟಾನಿ ಮುಂತಾದವರು ನಟಿಸುತ್ತಿದ್ದಾರೆ.
ಸೂಪರ್‍ಸ್ಟಾರ್ ಉಪೇಂದ್ರ ಜೊತೆಗೆ ಅಭಿನಯಿಸಿದ್ದ `ಐಶ್ವರ್ಯ’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರ ಪಾತ್ರಕ್ಕೆ ಲಕ್ಷ್ಮಿ ಮೋಹನ್ ಅವರು ಡಬ್ಬಿಂಗ್ ನೀಡಿದ್ದು , ಇದೇ ಮೊದಲ ಬಾರಿ ದೀಪಿಕಾ ಪಡುಕೋಣೆ ಕನ್ನಡದಲ್ಲಿ ಡಬ್ಬಿಂಗ್ ಮಾಡುತ್ತಿರುವುದು ವಿಶೇಷವಾಗಿದೆ.