Saturday, December 27, 2025
Homeರಾಜ್ಯKEA : ಜ.10 ಮತ್ತು 12ರಂದು ನಡೆಯಬೇಕಿದ್ದ ನೇಮಕಾತಿ ಪರೀಕ್ಷೆ ಜ.18ಕ್ಕೆ ಮುಂದೂಡಿಕೆ

KEA : ಜ.10 ಮತ್ತು 12ರಂದು ನಡೆಯಬೇಕಿದ್ದ ನೇಮಕಾತಿ ಪರೀಕ್ಷೆ ಜ.18ಕ್ಕೆ ಮುಂದೂಡಿಕೆ

KEA: Recruitment test scheduled for Jan. 10 and 12 postponed to Jan. 18

ಬೆಂಗಳೂರು, ಡಿ.27-ಕೆ.ಎಸ್‌‍.ಡಿ.ಎಲ್‌. ಮತ್ತು ಕೃಷಿ ಮಾರಾಟ ಇಲಾಖೆಯ ವಿವಿಧ ಹುದ್ದೆಗಳಿಗೆ ಜನವರಿ 10 ಮತ್ತು 12ರಂದು ನಡೆಸಬೇಕಿದ್ದ ನೇಮಕಾತಿ ಲಿಖಿತ ಪರೀಕ್ಷೆಯನ್ನು ಜನವರಿ 18ಕ್ಕೆ ಮುಂದೂಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಕೃಷಿ ಮಾರಾಟ ಇಲಾಖೆಯ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗೆ ಜನವರಿ 10ರಂದು ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿಮಿಟೆಡ್‌ನ ಕಿರಿಯ ಅಧಿಕಾರಿ (ಉತ್ಪಾದನೆ ಮತ್ತು ನಿರ್ವಹಣೆ), ಕಿರಿಯ ಅಧಿಕಾರಿ (ಸಾಮಗ್ರಿ ಮತ್ತು ಉಗ್ರಾಣ) ಹುದ್ದೆಗಳಿಗೆ ಜನವರಿ 12ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಈ ದಿನಾಂಕಗಳ ಬದಲಿಗೆ ಜನವರಿ 18 ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೆಇಎ ಸ್ಪಷ್ಟಪಡಿಸಿದೆ.

ಉಳಿದ ನೇಮಕಾತಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ನಿಗದಿಪಡಿಸಿದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೆಚ್ಚಿನ ವಿವರಗಳಿಗೆ ಕೆಇಎ ವೆಬ್‌ ಸೈಟ್‌ ನೋಡಬಹುದಾಗಿದೆ.

RELATED ARTICLES

Latest News