ಟೆಲ್‍ಅವಿವ್,ಅ.14- ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿರುವ ಭೀಕರ ಕಾಳಗದಲ್ಲಿ ವಿಶ್ವದ ಪ್ರತಿಷ್ಠಿತ ರಾಯ್ಟರ್ಸ್ ಸುದ್ದಿಸಂಸ್ಥೆಯ ಪತ್ರಕರ್ತ ಹತ್ಯೆಗೀಡಾಗಿದ್ದಾನೆ. ಯುದ್ಧಪೀಡಿತ ಪ್ಯಾಲೆಸ್ತೇನ್‍ಗೆ ವರದಿ ಮಾಡಲು ರಾಯ್ಟರ್ಸ್ ಸುದ್ದಿಸಂಸ್ಥೆಯ ಪತ್ರಕರ್ತ ಇಸಾಂ ಅಬ್ದುಲ್ ಅವರು ಇಸ್ರೇಲ್ ಕಡೆಯಿಂದ ಹಾರಿದ ಕ್ಷಿಪಣಿಗೆ ಬಲಿಯಾಗಿದ್ದಾರೆ.
ಘಟನೆಯಲ್ಲಿ ವಿವಿಧ ಸುದ್ದಿಸಂಸ್ಥೆಗಳ ಆರು ಮಂದಿ ಪತ್ರಕರ್ತರು ಗಂಭೀರವಾಗಿ ಗಾಯಗೊಂಡಿದ್ದು, ಎಲ್ಲರನ್ನೂ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ ರಾಯ್ಟರ್ಸ್ ವಿಡಿಯೋ ಜರ್ನಲಿಸ್ಟ್ ಅಬ್ದುಲ್ಲ ಸಾವನ್ನಪ್ಪಿದ್ದಾರೆ. ಈ ಸುದ್ದಿಯನ್ನು ಅತ್ಯಂತ ವಿಶಾದದಿಂದ ಹೇಳುತ್ತಿದ್ದೇವೆ. ಅವರಿಗೆ ನಮ್ಮ ಅಂತಿಮ ನಮನಗಳು ಎಂದು ಹೇಳಿದೆ. ಘಟನೆಯಲ್ಲಿ ಫ್ರಾನ್ಸ್‍ನ ಆರು ಮಂದಿ ಪತ್ರಕರ್ತರು ಗಾಯಗೊಂಡಿದ್ದು, ಆಂಬುಲೆನ್ಸ್‍ಗಳಲ್ಲಿ ವಿವಿಧ ಕಡೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ಪಾರ್ವತಿಕುಂಡ್, ಜಾಗೇಶ್ವರ ದೇವಾಲಯಗಳ ಬಗ್ಗೆ ಮೋದಿ ಶ್ಲಾಘನೆ
ಯುದ್ಧಪೀಡಿತ ಪ್ಯಾಲೆಸ್ತೇನ್ ಮತ್ತು ಇಸ್ರೇಲ್‍ಗೆ ಹೊಂದಿಕೊಂಡಿರುವ ಅಲ್ಮ ಅಲ್-ಶಾಬ್ ಬಳಿ ಪತ್ರಕರ್ತರ ಗುಂಪು ಕಾರ್ಯ ನಿರ್ವಹಣೆ ಮಾಡುತ್ತಿತ್ತು. ಈ ಸ್ಥಳದಲ್ಲಿ ಇಸ್ರೇಲ್ ಮಿಲಿಟರಿ ಮತ್ತು ಲೆಮೆನಾನ್‍ನ ಮಿಲೇಶಿಯ ಹಿಜ್ಬುಲ್ಲಾ ಗುಂಪಿನ ನಡುವೆ ಭೀಕರ ರಣಕಾಳಗ ನಡೆಯುತ್ತಿದೆ. ಈ ವೇಳೆ ಕ್ಷಿಪಣಿಯಿಂದ ತೂರಿಬಂದು ಅಪ್ಪಳಿಸಿದ್ದರಿಂದ ರಾಯ್ಟರ್ಸ್ ಸುದ್ದಿಸಂಸ್ಥೆಯ ಪತ್ರಕರ್ತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.