Friday, October 18, 2024
Homeರಾಷ್ಟ್ರೀಯ | Nationalಕಾಂಗ್ರೆಸ್‌ ಮತ್ತು ಇಂಡಿ ಮೈತ್ರಿಕೂಟ ಭ್ರಷ್ಟಾಚಾರಿಗಳ ಕೂಪ : ಮೋದಿ ವಾಗ್ದಾಳಿ

ಕಾಂಗ್ರೆಸ್‌ ಮತ್ತು ಇಂಡಿ ಮೈತ್ರಿಕೂಟ ಭ್ರಷ್ಟಾಚಾರಿಗಳ ಕೂಪ : ಮೋದಿ ವಾಗ್ದಾಳಿ

ಜೆಮ್‌ಶೆಡ್‌ಪುರ, ಮೇ 19- ಕಾಂಗ್ರೆಸ್‌ ಪಕ್ಷ ಭ್ರಷ್ಟಾಚಾರಿಗಳ ಕೂಪ ಎಂದು ತಿಳಿದಿರುವ ಪ್ರಧಾನಿ ನರೇಂದ್ರ ಮೋದಿ ಜನರಿಂದ ಲೂಟಿ ಮಾಡಿರುವ ಹಣವನ್ನು ವಸೂಲಿ ಮಾಡದೆ ಬಿಡುವುದಿಲ್ಲ ಎಂದು ಇಂದಿಲ್ಲಿ ಗುಡುಗಿದ್ದಾರೆ.

ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲ್ಲಿದ್ದಲು ಹಗರಣ, 2ಜಿ ಹಗರಣ ಸೇರಿದಂತೆ ಹಲವಾರು ಅವ್ಯವಹಾರಗಳಲ್ಲಿ ತೊಡಗಿಕೊಂಡು ಜನರ ಹಣವನ್ನು ಲೂಟಿ ಮಾಡಿರುವವರನ್ನು ಈಗಾಗಲೇ ನಾವು ಜೈಲಿಗಟ್ಟುವ ಕೆಲಸ ಮಾಡುತ್ತಿದ್ದೇವೆ. ಇದೆಲ್ಲವನ್ನೂ ವಸೂಲಿ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸಿಗರು ಹಾಗೂ ಅದರ ನಾಯಕ ರಾಹುಲ್‌ ಮಾತನಾಡುವುದನ್ನು ನೋಡಿದರೆ ಅವರು ಆಳುತ್ತಿರುವ ರಾಜ್ಯಗಳಲ್ಲಿ ಕೈಗಾರಿಕೋದ್ಯಮಿಗಳು ಬಂಡವಾಳ ಹೂಡಲು 50 ಬಾರಿ ಯೋಚಿಸಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಹಳೆ ಪಕ್ಷವೆಂದು ಹೇಳುವ ಕಾಂಗ್ರೆಸಿಗರು ವಂಶದ ರಾಜಕೀಯದವರನ್ನು ಪೋಷಿಸುತ್ತಿದ್ದಾರೆ. ಲೋಕಸಭಾ ಸ್ಥಾನಗಳನ್ನು ತಮ್ಮ ಪೂರ್ವಜರ ಆಸ್ತಿ ಎಂದು ಪರಿಗಣಿಸಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಹಾಗೂ ಅವರ ಮೈತ್ರಿಕೂಟದ ಇಂಡಿ ನಾಯಕರು ತಮ್ಮ ನಾಯಕ ಶಹಜಾಜ್‌ ಅವರು ಉದ್ಯಮಿಗಳ ಬಗ್ಗೆ ಆಡುತ್ತಿರುವ ಭಾಷೆ ಬಗ್ಗೆ ಉತ್ತರಿಸಲು ಒಪ್ಪುತ್ತಾರೆಯೇ? ಇದಕ್ಕೆಲ್ಲ ತಕ್ಕ ಶಾಸ್ತಿ ಮಾಡಲು ನಾನು ಧೈರ್ಯದಿಂದ ಮುನ್ನುಗ್ಗುತ್ತೇನೆ ಎಂದು ಶಪಥ ಮಾಡಿದರು.

ದೇಶದ ಜನತೆಗೆ ಮೂಲ ಸೌಕರ್ಯಗಳನ್ನು ಕಡೆಗಣಿಸಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಅವರ ಆಡಳಿತದ ಸಂದರ್ಭದಲ್ಲಿ ಸುಮಾರು 18 ಸಾವಿರ ಹಳ್ಳಿಗಳು ಎಂತಹ ಪರಿಸ್ಥಿತಿಯಲ್ಲಿದ್ದವು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಅವರು 18ನೆ ಶತಮಾನದಲ್ಲಿ ಬದುಕುತ್ತಿದ್ದಾರೇನೋ ಎಂಬ ಕಲ್ಪನೆಯಲ್ಲಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಲೂಟಿ ಹೊಡೆದಿರುವವರನ್ನು ಪತ್ತೆಹಚ್ಚಿ ಅವರಿಗೆ ಕಾನೂನಿನಡಿ ಶಿಕ್ಷೆಗೊಳಪಡಿಸಿ ಅವರು ದೋಚಿರುವ ಹಣವನ್ನು ವಸೂಲಿ ಮಾಡುತ್ತೇವೆ ಎಂದು ಪ್ರಧಾನಿ ಗರ್ಜಿಸಿದ್ದಾರೆ.

RELATED ARTICLES

Latest News