Sunday, October 6, 2024
Homeಅಂತಾರಾಷ್ಟ್ರೀಯ | Internationalಸೌದಿ ದೊರೆ ಸಲ್ಮಾನ್‌ಗೆ ಶ್ವಾಸಕೋಶದ ಸೋಂಕು

ಸೌದಿ ದೊರೆ ಸಲ್ಮಾನ್‌ಗೆ ಶ್ವಾಸಕೋಶದ ಸೋಂಕು

ದುಬೈ, ಮೇ 20 – ಸೌದಿ ಅರೇಬಿಯಾದ 88 ವರ್ಷದ ದೊರೆ ಸಲ್ಮಾನ್ ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದಾರೆ ಮತ್ತು ಜ್ವರ ಮತ್ತು ಕೀಲು ನೋವಿನಿಂದ ಅನಾರೋಗ್ಯಕ್ಕೆ ಒಳಗಾದ ನಂತರ ಆಂಟಿಬಯಾಟಿಕ್‌ಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ರಾಜ ಸಲ್ಮಾನ್ ಅವರು ಕೆಂಪು ಸಮುದ್ರದ ಬಂದರು ನಗರವಾದ ಜೆಡ್ಡಾದ ಅಲ್‌ ಸಲಾಮ್‌ ಪ್ಯಾಲೇಸ್‌‍ನಲ್ಲಿರುವ ರಾಯಲ್‌ ಕ್ಲಿನಿಕ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ಸರ್ಕಾರಿ ಸೌದಿ ಪ್ರೆಸ್‌‍ ಏಜೆನ್ಸಿ ತಿಳಿಸಿದೆ.

ಶ್ವಾಸಕೋಶದ ಸೋಂಕು ಇದೆ ಎಂದು ಕಂಡುಬಂದಿದೆ, ಮತ್ತು ವೈದ್ಯಕೀಯ ತಂಡವು ಸೋಂಕು ದೂರವಾಗುವವರೆಗೆ ಪ್ರತಿಜೀವಕಗಳನ್ನು ಒಳಗೊಂಡಿರುವ ಚಿಕಿತ್ಸಾ ಕಾರ್ಯಕ್ರಮಕ್ಕೆ ಒಳಗಾಗಬೇಕೆಂದು ನಿರ್ಧರಿಸಿ ಚಿಕಿತ್ಸೆ ನೀಡುತ್ತಿದೆ.

ಕಳೆದ ಏಪ್ರಿಲ್‌ನಲ್ಲೂ ಅವರು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ನಂತರ ಬಿಡುಗಡೆ ಮಾಡಲಾಗಿತ್ತು.ಕಿಂಗ್‌ ಸಲಾನ್‌ 2015 ರಲ್ಲಿ ಸಿಂಹಾಸನವನ್ನು ಪಡೆದರು.

ನಂತರ ಅವರು ತಮ ಮಗ ಕ್ರೌನ್‌ ಪ್ರಿನ್ಸ್ ಮೊಹಮ್ಮದ್‌ ಬಿನ್‌ ಸಲ್ಮಾನ್ ಅವರಿಗೆ ದೇಶ ಮುನ್ನಡೆಸುವ ಅಧಿಕಾರ ನೀಡಿದ್ದಾರೆ. ರಾಜಕುಮಾರನು ಸಾವ್ರಾಜ್ಯದ ದಿನನಿತ್ಯದ ವ್ಯವಹಾರಗಳನ್ನು ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ.

RELATED ARTICLES

Latest News