ಬೆಂಗಳೂರು,ಡಿ.27- ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮಿಕೊಂಡಿರುವ ಅವರೆಬೇಳೆ ಮೇಳಕ್ಕೆ ಚಿತ್ರನಟಿ ತಾರಾ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉದಯಶಂಕರ್ ಚಾಲನೆ ನೀಡಿದರು. ಪ್ರತೀ ವರ್ಷ ವಾಸವಿ ಕಾಂಡಿಮೆಂಟ್‌್ಸ ವತಿಯಿಂದ ಅವರೆಮೇಳವನ್ನು ಆಯೋಜಿಸಲಾಗುತ್ತಿದ್ದು, ಈ ಬಾರಿಯ 26ನೇ ವರ್ಷದ ಮೇಳದಲ್ಲಿ ಅವರೇಬೇಳೆಯಿಂದ ತಯಾರಿಸಿದ ವಿವಿಧ ಖಾದ್ಯಗಳು ಜನರನ್ನು ತನ್ನತ್ತ ಆಕರ್ಷಿಸುತ್ತಿವೆ.
ಮಾಗಡಿ ಹಾಗೂ ಸುತ್ತಮುತ್ತಲಿನ ರೈತರಿಂದ ಸುಮಾರು 60 ಟನ್‌ಗೂ ಅಧಿಕ ಅವರೇಕಾಯಿಯನ್ನು ಖರೀದಿಸಿ ಬಗೆಬಗೆಯ 120 ಖಾದ್ಯಗಳನ್ನು ತಯಾರಿಸಿ ಮೇಳದಲ್ಲಿ ಮಾರಾಟ ಮಾಡಲಾಗುತ್ತಿದೆ. ಅವರೆಬೇಳೆ ಹೋಳಿಗೆ, ವಡೆ, ನೀರುದೋಸೆ, ಇಡ್ಲಿ, ಅವರೆಬೇಳೆ ಸಾರು, ಪಾಯಸ, ಜಿಲೇಬಿ, ಮೈಸೂರ್‌ಪಾಕ್, ಕುನಾಫ ಕೇಕ್, ಸೇರಿದಂತೆ ಹಲವಾರು ಖಾದ್ಯಗಳು ಗಮನ ಸೆಳೆದವು.
ಇಂದಿನಿಂದ ಜ.4ರ ವರೆಗೆ ಈ ಮೇಳ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ಮೇಳ ತೆರೆದಿರುತ್ತದೆ. ವೀಕೆಂಡ್ ಹಿನ್ನೆಲೆಯಲ್ಲಿ ಪ್ರಥಮ ದಿನವಾದ ಇಂದು ಅವರೆಬೇಳೆ ಮೇಳಕ್ಕೆ ಜನರು ಬಂದು ಅವರೆಬೇಳೆ ಖಾದ್ಯಗಳನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಿರುತೆರೆ ನಟಿ ಭವ್ಯಗೌಡ, ಮಳವಳ್ಳಿ ಶಿವಣ್ಣ, ಅಮರ್ ನಾರಾಯಣ್, ವಾಸವಿ ಕಾಂಡಿಮೆಂಟ್‌್ಸನ ಗೀತಾ ಸೇರಿದಂತೆ ರೈತರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
