Friday, November 22, 2024
Homeರಾಷ್ಟ್ರೀಯ | Nationalಮತದಾನ ಮಾಡದ ಹಾಗೂ ಅಭ್ಯರ್ಥಿಗಳ ಪರ ಪ್ರಚಾರ ನಡೆಸದ ಜಯಂತ್‌ ಸಿನ್ಹಾಗೆ ಬಿಜೆಪಿ ನೊಟೀಸ್‌

ಮತದಾನ ಮಾಡದ ಹಾಗೂ ಅಭ್ಯರ್ಥಿಗಳ ಪರ ಪ್ರಚಾರ ನಡೆಸದ ಜಯಂತ್‌ ಸಿನ್ಹಾಗೆ ಬಿಜೆಪಿ ನೊಟೀಸ್‌

ನವದೆಹಲಿ,ಮೇ21- ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸಂಘಟನೆ ಹಾಗೂ ಅಭ್ಯರ್ಥಿಗಳ ಪರ ಪ್ರಚಾರವನ್ನೂ ನಡೆಸದೆ, ಮತದಾನದ ವೇಳೆ ಮತ ಚಲಾಯಿಸದೆ ದೂರ ಉಳಿದಿದ್ದ ಮಾಜಿ ಕೇಂದ್ರ ಸಚಿವ, ಸಂಸದ ಜಯಂತ್‌ ಸಿನ್ಹಾಗೆ ಬಿಜೆಪಿ ನೊಟೀಸ್‌ ಜಾರಿ ಮಾಡಿದೆ.

ನಿನ್ನೆ ನಡೆದ 5ನೇ ಹಂತದ ಚುನಾವಣೆ ವೇಳೆ ಜಯಂತ್‌ ಸಿನ್ಹಾ ಮತದಾನ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರಣ ಕೇಳಿ ನೊಟೀಸ್‌ ನೀಡಿದೆ. ಹಜಾರಿಬಾಗ್‌ ಲೋಕಸಭಾ ಕ್ಷೇತ್ರದಿಂದ ಮನೀಶ್‌ ಜೈಸ್ವಾಲ್‌ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ ನಂತರ ಅವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸರಿಲಿಲ್ಲ. ಮಾಜಿ ಕೇಂದ್ರ ಹಣಕಾಸು ಸಚಿವ ಯಶವಂತ್‌ ಸಿನ್ಹಾ ಅವರ ಪುತ್ರ ಜಯಂತ್‌ ಅವರು ಜಾರ್ಖಂಡ್‌ನ ಹಜಾರಿಬಾಗ್‌ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ.

ಜಯಂತ್‌ ಸಿನ್ಹಾ ಪ್ರತಿನಿಧಿಸುತ್ತಿದ್ದ ಜಾರ್ಖಂಡ್‌ ನ ಹಜಾರಿಬಾಗ್‌ ಕ್ಷೇತ್ರದಿಂದ ಈ ಬಾರಿ ಮನೀಶ್‌ ಜೈಸ್ವಾಲ್‌ ಅವರಿಗೆ ಟಿಕೆಟ್‌ ನೀಡಲಾಗಿತ್ತು. ಅಭ್ಯರ್ಥಿಯ ಘೋಷಣೆಯಾದ ಬಳಿಕ ಜಯಂತ್‌ ಸಿನ್ಹಾ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು.

ಇದಕ್ಕೂ ಮುನ್ನ ಮಾರ್ಚ್‌ನಲ್ಲಿ ಟ್ವೀಟ್‌ ಮಾಡಿದ್ದ ಜಯಂತ್‌ ಸಿನ್ಹಾ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ಇರುವ ಇಂಗಿತ ವ್ಯಕ್ತಪಡಿಸಿದ್ದರು. ಇದೇ ಮಾದರಿಯಲ್ಲಿ ದೆಹಲಿಯ ಸಂಸದ ಗೌತಮ್‌ ಗಂಭೀರ್‌ ಸಹ ತಮ್ಮನ್ನು ಪಕ್ಷದ ಎಲ್ಲಾ ಹುದ್ದೆ ಮತ್ತು ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದರು.

ಹಜಾರಿಬಾಗ್‌ ಲೋಕಸಭಾ ಕ್ಷೇತ್ರದಿಂದ ಮನೀಶ್‌ ಜೈಸ್ವಾಲ್‌ ಅವರನ್ನು ಅಭ್ಯರ್ಥಿಯಾಗಿ ಪಕ್ಷ ಘೋಷಿಸಿದಾಗಿನಿಂದ ನೀವು ಸಂಘಟನಾ ಕಾರ್ಯ ಮತ್ತು ಚುನಾವಣಾ ಪ್ರಚಾರದಲ್ಲಿ ಯಾವುದೇ ಆಸಕ್ತಿ ವಹಿಸುತ್ತಿಲ್ಲ. ನಿಮಗೆ ಮತ ಚಲಾಯಿಸುವ ಅಗತ್ಯವಿದೆ ಎಂದೆನಿಸಲೂ ಇಲ್ಲ. ನಿಮ್ಮ ನಡವಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಮಾರ್ಚ್‌ 2ರಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಸಿನ್ಹಾ, ಆರ್ಥಿಕ ಮತ್ತು ಆಡಳಿತದ ವಿಷಯಗಳಲ್ಲಿ ಪಕ್ಷದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿದ್ದರು. ಕಳೆದ ಹತ್ತು ವರ್ಷಗಳಿಂದ ಭಾರತ ಮತ್ತು ಹಜಾರಿಬಾಗ್‌‍ನ ಜನರಿಗೆ ಸೇವೆ ಸಲ್ಲಿಸುವ ಭಾಗ್ಯವನ್ನು ನಾನು ಪಡೆದಿದ್ದೇನೆ. ಇದಲ್ಲದೆ, ಪ್ರಧಾನಿ ನರೇಂದ್ರಮೋದಿ, ಗೃಹಸಚಿವ ಅಮಿತ್‌ ಶಾ ಮತ್ತು ಬಿಜೆಪಿ ನಾಯಕತ್ವದಿಂದ ನನಗೆ ಅನೇಕ ಅವಕಾಶಗಳು ದೊರೆತಿವೆ. ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದಿದ್ದರು.

ಜಯಂತ್‌ ಸಿನ್ಹಾ ಅವರು 2019ರಲ್ಲಿ ಕಾಂಗ್ರೆಸ್‌ನ ಗೋಪಾಲ್‌ ಸಾಹು ಅವರನ್ನು ಸೋಲಿಸಿ 4.79 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಆದರೆ ಜೈಸ್ವಾಲ್‌ ಈ ಹಿಂದೆ ಜೆವಿಎಂ ಟಿಕೆಟ್‌‍ನಲ್ಲಿ ಮಂಡು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಽಸಿದ್ದರು.

RELATED ARTICLES

Latest News