Sunday, November 24, 2024
Homeರಾಷ್ಟ್ರೀಯ | Nationalರಾಜೀವ್‌ಗಾಂಧಿ ಕನಸು ನನಸು ಮಾಡುವೆ : ರಾಹುಲ್‌

ರಾಜೀವ್‌ಗಾಂಧಿ ಕನಸು ನನಸು ಮಾಡುವೆ : ರಾಹುಲ್‌

ನವದೆಹಲಿ,ಮೇ.21- ನಮ್ಮ ತಂದೆ ರಾಜೀವ್‌ಗಾಂಧಿ ಕಂಡಿದ್ದ ಕನಸು ತಮ್ಮದೆ ಎಂದು ರಾಹುಲ್‌ಗಾಂಧಿ ಹೇಳಿಕೊಂಡಿದ್ದಾರೆ. ತಮ್ಮ ದಿವಂಗತ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ 33 ನೇ ಪುಣ್ಯತಿಥಿಯಂದು ಅವರನ್ನು ಸ್ಮರಿಸುತ್ತಾ ರಾಹುಲ್‌ ಅವರು ಎಕ್ಸ್ ನಲ್ಲಿ ಈ ರೀತಿಯ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದರ ಜತೆಗೆ ರಾಹುಲ್‌ ಅವರು ತಮ್ಮ ತಂದೆಯೊಂದಿಗಿನ ಬಾಲ್ಯದ ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ, ಚಿತ್ರದಲ್ಲಿ ರಾಜೀವ್‌ ಗಾಂಧಿ ಅವರು ರಾಹುಲ್‌ ಅವರ ಹೆಗಲ ಮೇಲೆ ಕೈಯಿಟ್ಟು ಮುಗುಳ್ನಗುತ್ತಿದ್ದಾರೆ. ಪೋಸ್ಟ್ ನಲ್ಲಿ, ತಂದೆ, ನಿಮ್ಮ ಕನಸುಗಳು, ನನ್ನ ಕನಸುಗಳು, ನಿಮ್ಮ ಆಕಾಂಕ್ಷೆಗಳು, ನನ್ನ ಜವಾಬ್ದಾರಿಗಳು. ನಿಮ್ಮ ನೆನಪುಗಳು, ಇಂದು ಮತ್ತು ಯಾವಾಗಲೂ ನನ್ನ ಹೃದಯದಲ್ಲಿ ಎಂದು ರಾಹುಲ್‌ ಹೇಳಿದ್ದಾರೆ.

ಇದಕ್ಕೂ ಮುನ್ನ ದೆಹಲಿಯ ವೀರಭೂಮಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ರಾಹುಲ್‌ ಅವರು ರಾಜೀವ್‌ ಗಾಂಧಿ ಅವರಿಗೆ ನಮನ ಸಲ್ಲಿಸಿದರು. ಪಿ ಚಿದಂಬರಂ ಮತ್ತು ಸಚಿನ್‌ ಪೈಲಟ್‌ ಅವರಂತಹ ಇತರ ಕಾಂಗ್ರೆಸ್‌ ನಾಯಕರು ರಾಷ್ಟ್ರ ರಾಜಧಾನಿಯಲ್ಲಿ ಮಾಜಿ ಪ್ರಧಾನಿಗೆ ಗೌರವ ಸಲ್ಲಿಸಿದರು.

ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ರಾಜೀವ್‌ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು, ಅವರ ಪುಣ್ಯತಿಥಿಯಂದು, ನಮ್ಮ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರಿಗೆ ನನ್ನ ನಮನಗಳು ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 1984 ರಲ್ಲಿ ತಮ್ಮ ತಾಯಿ ಮತ್ತು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ರಾಜೀವ್‌ ಗಾಂಧಿ ಅವರು ಕಾಂಗ್ರೆಸ್‌ ಉಸ್ತುವಾರಿ ವಹಿಸಿಕೊಂಡರು. ಅವರು ಅಕ್ಟೋಬರ್‌ 1984 ರಲ್ಲಿ ಅಧಿಕಾರ ವಹಿಸಿಕೊಂಡಾಗ ಅವರು 40 ನೇ ವಯಸ್ಸಿನಲ್ಲಿ ಭಾರತದ ಅತ್ಯಂತ ಕಿರಿಯ ಪ್ರಧಾನಿಯಾಗಿದರು.

ಅವರು ಡಿಸೆಂಬರ್‌ 2, 1989 ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಆಗಸ್ಟ್ 20, 1944 ರಲ್ಲಿ ಜನಿಸಿದ ರಾಜೀವ್‌ ಗಾಂಧಿಯವರು ಮೇ 21 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ಲಿಬರೇಶನ್‌ ಟೈಗರ್ಸ್‌ ಆಫ್ ತಮಿಳು ಈಳಂ (ಎಲ್‌ಟಿಟಿಇ) ಆತ್ಮಹತ್ಯಾ ಬಾಂಬರ್‌ನಿಂದ ಹತ್ಯೆಗೀಡಾಗಿದ್ದರು.

RELATED ARTICLES

Latest News