Friday, November 22, 2024
Homeರಾಷ್ಟ್ರೀಯ | Nationalಮೋದಿ ಸರ್ಕಾರ ನಿರ್ಗಮಿಸಲಿದೆ, ಇಂಡಿ ಕೂಟ ಅಧಿಕಾರಕ್ಕೆ ಬರಲಿದೆ : ಕೇಜ್ರಿವಾಲ್‌

ಮೋದಿ ಸರ್ಕಾರ ನಿರ್ಗಮಿಸಲಿದೆ, ಇಂಡಿ ಕೂಟ ಅಧಿಕಾರಕ್ಕೆ ಬರಲಿದೆ : ಕೇಜ್ರಿವಾಲ್‌

ನವದೆಹಲಿ, ಮೇ21-ಲೋಕಸಭೆ ಚುನಾವಣೆಯ ಪ್ರತಿ ಹಂತಗಳು ಮುಗಿಯುತ್ತಿದ್ದಂತೆ. ನರೇಂದ್ರಮೋದಿ ಸರ್ಕಾರವು ನಿರ್ಗಮಿಸಲಿದ್ದು, ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

ವರ್ಚುವಲ್‌ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟ ದೇಶಕ್ಕೆ ಸ್ಥಿರ ಸರ್ಕಾರವನ್ನು ನೀಡುತ್ತದೆ ಎಂದು ಹೇಳಿದರು.ಹಾದುಹೋಗುವ ಪ್ರತಿಯೊಂದು ಮತದಾನದ ಹಂತಗಳಲ್ಲಿ ಮೋದಿ ಸರ್ಕಾರವು ಹೊರಗುಳಿಯುತ್ತಿದೆ ಮತ್ತು ಜೂನ್‌ 4ರಂದು ಇಂಡಿಯ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಪುನರುಚ್ಚರಿಸಿದರು.

ಗೃಹಸಚಿವ ಅಮಿತ್‌ ಷಾ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್‌, ನಿಮನ್ನು ಪ್ರಧಾನಿ ನಿಮ್ಮ ವಾರಸುದಾರರನ್ನಾಗಿ ಆಯ್ಕೆ ಮಾಡಿದ್ದಾರೆ. ಆದ್ದರಿಂದ ನೀವು ದುರಹಂಕಾರ ತೋರಿಸುತ್ತಿದ್ದೀರಿ. ನೀವು ಇನ್ನೂ ಪ್ರಧಾನಿಯಾಗಿಲ್ಲ ಎಂದು ಹೇಳಿದರು. ಕೇಜ್ರಿವಾಲ್‌ ಅವರಿಗೆ ಭಾರತದಲ್ಲಿ ಬೆಂಬಲವಿಲ್ಲ ಮತ್ತು ಪಾಕಿಸ್ತಾನದಲ್ಲಿ ಹೆಚ್ಚಿನ ಬೆಂಬಲಿಗರಿದ್ದಾರೆ ಎಂದು ಹೇಳಿದ್ದಾರೆ. ನೀವು ನನ್ನನ್ನು ನಿಂದಿಸಬಹುದು ಆದರೆ ದೇಶದ ಜನರನ್ನು ಶಪಿಸಬೇಡಿ. ನೀವು ಸಾರ್ವಜನಿಕರನ್ನು ಶಪಿಸಿದರೆ ಯಾರೂ ಸಹಿಸುವುದಿಲ್ಲ ಎಂದು ಎಂದು ವಾಗ್ದಾಳಿ ನಡೆಸಿದರು.

ದಕ್ಷಿಣ ದೆಹಲಿ ಕ್ಷೇತ್ರದಲ್ಲಿ ತಮ ಪಕ್ಷದ ಅಭ್ಯರ್ಥಿ ರಾಮ್‌ವೀರ್‌ ಸಿಂಗ್‌ ಬಿಧುರಿ ಪರ ಮತ ಯಾಚಿಸುವಾಗ ಕೇಜ್ರಿವಾಲ್‌ ಮತ್ತು ರಾಹುಲ್‌ (ಗಾಂಧಿ) ಅವರಿಗೆ ಭಾರತದಲ್ಲಿ ಬೆಂಬಲವಿಲ್ಲ, ಅವರ ಬೆಂಬಲಿಗರು ಪಾಕಿಸ್ತಾನದಲ್ಲಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದರು.ರ್ಯಾಲಿಯಲ್ಲಿ ಶಾ ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಮುಖ್ಯಮಂತ್ರಿಯವರಿಂದ ಮೇಲಿನ ಈ ಪ್ರತಿಕ್ರಿಯೆ ಬಂದಿದೆ.

RELATED ARTICLES

Latest News