ಬೆಂಗಳೂರು, ಡಿ.28- ಹೊಸ ವರ್ಷದ ಸ್ವಾಗತಕ್ಕೆ ಸಜ್ಜಾಗುತ್ತಿದ್ದ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂರು ಡ್ರಗ್ಸ್ ಫ್ಯಾಕ್ಟರಿಗಳನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಹಚ್ಚಿರುವುದು ಭಾರೀ ಸಂಚಲನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರು ನಿನ್ನೆ ರಾತ್ರಿಯಿಂದಲೇ ನಗರಾದ್ಯಂತ ಡ್ರಗ್ಸ್ ಪೆಡ್ಲರ್‌ಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ವಿವಿಧ ಮೂಲಗಳಿಂದ ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಶಂಕೆಯ ನಡುವೆಯೇ ಕಳೆದ ರಾತ್ರಿ ಮಹಾರಾಷ್ಟ್ರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ನಗರದ ಹೊರವಲಯದಲ್ಲಿರುವ ಗೋಲಹಳ್ಳಿ, ಯರಪ್ಪನಹಳ್ಳಿ, ಕಣ್ಣೂರಿನ ಮೂರು ಕಡೆ ಡ್ರಗ್‌್ಸ ತಯಾರಿಸುತ್ತಿದ್ದ ಕಾರ್ಖಾನೆಗಳನ್ನು ಪತ್ತೆಹಚ್ಚಿ ನಾಲ್ವರನ್ನು ಬಂಧಿಸಿದ್ದಾರೆ.
ನಗರ ಪೊಲೀಸರಿಗೂ ಗೊತ್ತಾಗದಂತೆ ರಹಸ್ಯ ಕಾರ್ಯಾಚರಣೆ ಮೂಲಕ ಈ ದಾಳಿ ನಡೆಸಲಾಗಿದ್ದು, ಸುಮಾರು 56 ಕೋಟಿ ರೂ. ಮೌಲ್ಯದ ಮೆಫೆಡ್ರೋನ್ ಡ್ರಗ್‌್ಸಅನ್ನು ವಶಪಡಿಸಿಕೊಳ್ಳಲಾಗಿದೆ.
ಇತ್ತೀಚೆಗೆ ನಗರ ಪೊಲೀಸರು ಡ್ರಗ್ಸ್ ದಂಧೆ ನಿಯಂತ್ರಣಕ್ಕೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡು, ದಾಖಲೆ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದರು. ಆದರೆ, ನಗರದಲ್ಲಿ ಮಹಾರಾಷ್ಟ್ರ ಪೊಲೀಸರು ನಡೆಸಿರುವ ಕಾರ್ಯಾಚರಣೆಯಿಂದ ಬೆಂಗಳೂರು ಡ್ರಗ್‌್ಸ ದಂಧೆಯ ಹಾಟ್‌ಸ್ಪಾಟ್ ಎಂದು ತಿಳಿದು, ಬೆಂಗಳೂರಿಗರು ಬೆಚ್ಚಿಬಿದ್ದಿದ್ದಾರೆ.
ಕಳೆದ ಜುಲೈನಲ್ಲಿ ಮೈಸೂರಿನಲ್ಲಿಯೂ ಡ್ರಗ್ಸ್ ತಯಾರಿಕಾ ಘಟಕವನ್ನು ಪತ್ತೆ ಹಚ್ಚಿದ ನಂತರ ರಾಜ್ಯದ ಪೊಲೀಸರು ಅಲರ್ಟ್ ಆಗಿದ್ದರೂ, ಬೆಂಗಳೂರಿನಲ್ಲಿಯೇ ಈ ಡ್ರಗ್ಸ್ ಘಟಕ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇತ್ತೀಚೆಗೆ ಮಹಾರಾಷ್ಟ್ರ ಮಾದಕ ದ್ರವ್ಯ ನಿಗ್ರಹ ಪಡೆ ಅಬ್ದುಲ್ ಖಾದೀರ್ ಶೇಖ್ ಎಂಬಾತನನ್ನು ಬಂಧಿಸಿ 1.5 ಕೋಟಿ ರೂ. ಮೌಲ್ಯದ ವಸ್ತುವಶಪಡಿಸಿಕೊಂಡಿದ್ದರು. ಆತನು ನೀಡಿದ ಮಾಹಿತಿಯಂತೆ ಬೆಳಗಾವಿಯ ಪ್ರಶಾಂತ ಯಲ್ಲಪ್ಪ ಪಾಟೀಲ್ ಎಂಬಾತನನ್ನು ಬಂಧಿಸಿದ್ದರು.
ಪ್ರಶಾಂತನನ್ನು ನಿಗ್ರಹ ಪಡೆಯ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಆತ ಬೆಂಗಳೂರಿನಲ್ಲಿ ಮಾದಕ ವಸ್ತು ತಯಾರಿಕಾ ಘಟಕಗಳು ಇರುವುದಾಗಿ ಹೇಳಿದ್ದಾನೆ. ಈ ಮಾಹಿತಿಯ ಜಾಡು ಹಿಡಿದ ಮಹಾರಾಷ್ಟ್ರ ಪೊಲೀಸರು ಕರ್ನಾಟಕ ರಾಜ್ಯ ಪೊಲೀಸರಿಗೂ ತಿಳಿಸದೇ ಬೆಂಗಳೂರಿನಲ್ಲಿರುವ ಡ್ರಗ್ಸ್ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿದ್ದಾರೆ.
ದಾಳಿ ವೇಳೆ 4 ಕೆಜಿ ಘನ ಮೆಫೆಡ್ರೋನ್ ಡ್ರಗ್ಸ್ , 17 ಕೆಜಿ ಇತರ ಮಾದಕ ವಸ್ತುಗಳನ್ನು ಹಾಗೂ ಕೆಲವು ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಇನ್ನೂ ಪ್ರಶಾಂತ್ ಎಂಬಾತನ ಜತೆಗೆ ರಾಜಸ್ಥಾನ ಮೂಲದ ಸೂರಜ್ ರಮೇಶ್ ಯಾದವ್, ಮಲ್ಖನ್ ರಾಮ್‌ಲಾಲ್‌ಬಿಷ್ಣೋಯಿ ಎಂಬುವವರು ಈ ದಂಧೆಯಲ್ಲಿ ತೊಡಗಿದ್ದರು ಎಂಬನ್ನಲಾಗಿದ್ದು, ಅವರನ್ನು ಬಂಧಿಸಲಾಗಿದೆ.
ಪೊಲೀಸರ ಮೂಲಗಳ ಪ್ರಕಾರ, ರಾಜಸ್ಥಾನದ ಮೂಲದ ಇವರುಗಳೇ ಈ ಜಾಲದ ಕಿಂಗ್‌ಪಿನ್‌ಗಳು. ತಲೆಮರೆಸಿಕೊಂಡಿರುವ ಇನ್ನೂ ಕೆಲವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.ಪ್ರಾಥಮಿಕ ತನಿಖೆಯಲ್ಲಿ ಇಲ್ಲಿಂದಲೇ ಡ್ರಗ್‌್ಸ ತಯಾರಿಸಿ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಇದಲ್ಲದೇ ಇದರಿಂದ ಬಂದ ಹಣದಿಂದಲೇ ಹಲವೆಡೆ ಭೂ ಖರೀದಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಒಟ್ಟಾರೆ ನಗರದಲ್ಲಿ ಕಾರ್ಯಾನಿರ್ವಹಿಸುತ್ತಿದ್ದ ಮೂರು ಡ್ರಗ್ಸ್ ಫ್ಯಾಕ್ಟರಿಗಳ ಬಗ್ಗೆ ಈಗ ಸಾಕಷ್ಟು ಅನುಮಾನಗಳು ಮೂಡಿದ್ದು ಬೆಂಗಳೂರು ನಗರ ಪೊಲೀಸರು ನಗರದ ನಾನಾಕಡೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಹೊಸ ವರ್ಷದ ಆಚರಣೆಗೆ ಅಪಾರ ಪ್ರಮಾಣದಲ್ಲಿ ಡ್ರಗ್‌್ಸ ಬೆಂಗಳೂರು ತಲುಪುತ್ತದೆ ಎಂಬ ಮಾಹಿತಿಯಡಿ ಪೊಲೀಸರು ನಗರದೆಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ.
