ಬೆಂಗಳೂರು,ಡಿ.28– ಕೆಪಿಸಿಟಿಎಲ್ ವಿಭಾಗದಲ್ಲಿ ತುರ್ತು ನಿರ್ವಹಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಕೆಪಿಸಿಟಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿಯ ಸಲುವಾಗಿ 66/11 ಕೆವಿ ರೆಮೋ ಮತ್ತು 66/11 ಕೆವಿ ಕೆ.ಎಸ್.ಟಿ ಬಂಡೇಮಠ ವಿದ್ಯುತ್ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕೇಂದ್ರಗಳಿಗೆ ಬೆಳಿಗ್ಗೆ 10ರಿಂದ ಸಾಯಂಕಾಲ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಬಾಪೂಜಿ ನಗರ, ಕವಿತಾ ಲೇಔಟ್, ರಂಗನಾಥ ಕಾಲೋನಿ, ಬ್ಯಾಟರಾಯನಪುರ ಐಯ್ಯಣ್ಣಶೆಟ್ಟಿ ಲೇಔಟ್, ಗಣಪತಿನಗರ, ಪ್ರೈಡ್ ಅಪಾರ್ಟೆಂಟ್, ದೀಪಾಂಜಲಿ ನಗರ, ಪಟೇಲ್ ಪುಟ್ಟಯ್ಯ ಇಂಡಸ್ಟ್ರೀಯಲ್ ಏರಿಯಾ, ಬಿ.ಹೆಚ್.ಇ.ಎಲ್, ಮುತ್ತಾಚಾರಿ ಇಂಡಸ್ಟ್ರಿಯಲ್ ಏರಿಯಾ, ಜ್ಯೋತಿ ನಗರ, ಗಂಗೊಂಡನಹಳ್ಳಿ, ಅಜಿತ್ ಸೇರ್ ಇಂಡಸ್ಟ್ರಿಯಲ್ ಏರಿಯಾ, ವಿನಾಯಕ ಲೇಔಟ್, ಮೆಟ್ರೋ ಲೇಔಟ್, ನಾಯಂಡಹಳ್ಳಿ, ಬ್ಯಾಟರಾಯನಪುರ ಮೈಸೂರು ರಸ್ತೆ, ಶೋಭಾ ಟೆಂಟ್ ರೋಡ್, ಗುಡ್ಡದಹಳ್ಳಿ ಎಕ್ಸ್ಟೆನ್ಶನ್, ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್, ಆರ್ ಆರ್ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಿದೆ.
ನ್ಯೂ ಕೆ ಹೆಚ್ ಬಿ ಕಾಲೋನಿ, ಬಂಡೇಮಠ, ಕೆ ಎಸ್ ಟಿ, ಕೆ ಎಚ್ ಬಿ, ಅರುಂಧತಿ ನಗರ, ಶಿರ್ಕೆ, ಹೊಯ್ಸಳ ಸರ್ಕಲ್, ವಲಗೇರಹಳ್ಳಿ, ಚಿಕ್ಕನಹಳ್ಳಿ, ಗಾಂಧಿನಗರ, ಹುಣಸೇಮರದ ಪಾಳ್ಯ, ಬೈರೋಹಳ್ಳಿ, ಅರ್ಚಕರ ಲೇಔಟ್, ಹೊಸಪಾಳ್ಯ, ಚಲ್ಲಘಟ್ಟ, ಬೆಟ್ಟನಪಾಳ್ಯ, ರಾಮೋಹಳ್ಳಿ, ಮಾಲಿಗೊಂಡನಹಳ್ಳಿ, ಗೇರುಪಾಳ್ಯ ಇಂಡಸ್ಟ್ರಿಯಲ್ ಏರಿಯಾ, ಕೊಮಘಟ್ಟ, ಸೂಲಿಕೆರೆ, ಕೃಷ್ಣ ಸಾಗರ, ಮಾರಗೊಂಡನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
