Sunday, December 28, 2025
Homeಬೆಂಗಳೂರುಹಲವು ಯುವತಿಯರಿಗೆ ವಂಚಿಸಿ ಚಿನ್ನಾಭರಣ ದೋಚಿದ್ದ ಮನ್ಮಥರಾಜ ಅರೆಸ್ಟ್

ಹಲವು ಯುವತಿಯರಿಗೆ ವಂಚಿಸಿ ಚಿನ್ನಾಭರಣ ದೋಚಿದ್ದ ಮನ್ಮಥರಾಜ ಅರೆಸ್ಟ್

Accused who cheated several young women and robbed them of gold ornaments arrested

ಬೆಂಗಳೂರು, ಡಿ.28-ಬಾಲಕಿಯ ಜೊತೆ ಸಲುಗೆ ಬೆಳೆಸಿ ಆಕೆಯ ಅಕ್ಕನೊಂದಿಗೂ ಪ್ರೀತಿಯ ನಾಟಕವಾಡಿ ನಗದು , ಚಿನ್ನಾಭರಣ ದೋಚಿದ್ದ ಹೊರ ರಾಜ್ಯದ ಆರೋಪಿಯನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಶುಭಾಂಶು ಶುಕ್ಲಾ(27)ಬಂಧಿತ ಆರೋಪಿಯಾಗಿದ್ದು ಈತ ಮೂಲಃ ಹರಿಯಾಣ ರಾಜ್ಯದವನಾಗಿದ್ದು, ವಿದ್ಯಾರ್ಥಿ ದಿಸೆಯಲ್ಲಿ ಬೆಂಗಳೂರಿಗೆ ಬಂದು ಬಾಡಿಗೆ ಮನೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಮೊದಲು ಅಪ್ರಾಪ್ತೆ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ, ಆಕೆಯ ಕುಟುಂಬಕ್ಕೂ ಚಿರಪರಿಚಿತನಾಗಿದ್ದ. ಈ ವೇಳೆ ಬಾಲಕಿಯ ಅಕ್ಕನನ್ನು ಪ್ರೀತಿ ಬಲೆಯಲ್ಲಿ ಬೀಳಿಸಿ ತನ್ನೊಂದಿಗೆ ಕರೆದುಕೊಂಡು ಹೋಗಿದ್ದ.

ತನಗೆ ಮುಂಬೈನಲ್ಲಿ ಕೆಲಸ ಸಿಕ್ಕಿದೆ ಎಂದು ಆಕೆಯ ಮನೆಯವರನ್ನು ನಂಬಿಸಿದ್ದರಂದ ಆಕೆ ಆತನ ಜೊತೆಗೆ ತೆರಳಿದ್ದಳು. ನಂತರ ಬೆಂಗಳೂರಿನಲ್ಲೇ ಫ್ಲ್ಯಾಟ್‌ನಲ್ಲಿ ಶುಭಾಂಶು ಮತ್ತು ಯುವತಿ ಲಿವಿನ್‌ ರಿಲೇಷನ್‌ಶಿಪ್‌ನಲ್ಲಿದ್ದರು ಎನ್ನಲಾಗಿದೆ.

ಸಮಯ ಕಳೆದಂತೆ ಶುಭಾಂಶುಗೆ ಮೊದಲೇ ಮದುವೆಯಾಗಿರುವ ಬಗ್ಗೆ ಸಂತ್ರಸ್ತೆಗೆ ಗೊತ್ತಾಗಿದೆ. ಈ ಬಗ್ಗೆ ವಿಚಾರಿಸಿದಾಗ ಆಕೆಯೊಂದಿಗೆ ತಾನು ವಿಚ್ಛೇದನ ಪಡೆದುಕೊಳ್ಳುತ್ತೇನೆ. ನಿನ್ನ ಮದುವೆಯಾಗಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ.

ಶುಭಾಂಶು ಪತ್ನಿಯೂ ಸಂತ್ರಸ್ತೆ ಜೊತೆ ಮಾತಾಡಿದ್ದು, ತಾನು ಆತನಿಗೆ ವಿಚ್ಛಧೇನ ನೀಡುವುದಾಗಿ ತಿಳಿಸಿದ್ದಳು. ಹೀಗಾಗಿ ಶುಭಾಂಶು ಮೇಲೆ ಭರವಸೆ ಇಟ್ಟು ಸಂತ್ರಸ್ತೆ ಸಂಬಂಧ ಮುಂದುವರಿಸಿದ್ದಳು. ಆದರೆ ಮತ್ತೊಂದು ಅಪ್ರಾಪ್ತ ಯುವತಿಗೂ ಶುಭಾಂಶು ಇದೇ ರೀತಿ ವಂಚಿಸುತ್ತಿರುವುದು ಗೊತ್ತಾಗಿ ಆಕೆಯ ಮುಂದೆ ಈತನ ಬಂಡವಾಳವನ್ನು ಬಯಲು ಮಾಡಿದ್ದಳು. ಆ ಬಳಿಕ ಶುಭಾಂಶು ಚಿತ್ರಹಿಂಸೆ ಆರಂಭವಾಗಿತ್ತು ಎಂದು ದೂರಲಾಗಿದೆ.

ಆಗಲೇ ಯುವತಿ ಬಳಿ 37 ಲಕ್ಷ ಹಣ ಪಡೆದಿದ್ದ ಆರೋಪಿ ಶುಭಾಂಶು, ಯುವತಿ ಮನೆಯಲ್ಲಿ 559 ಗ್ರಾಂ ಚಿನ್ನಾಭರಣಗಳನ್ನು ಸಹ ಕದ್ದಿದ್ದ. ಈ ಬಗ್ಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಎಂದು ಬೆದರಿಸಿದ್ದರಿಂದ ಆತನನ್ನು ಬಿಟ್ಟು ಬಂದಿದ್ದಳು. ಸಂತ್ರಸ್ತೆಯ ಪರಿಚಯಕ್ಕೆ ಮೂಲ ಕಾರಣವಾಗಿದ್ದ ಆಕೆಯ ಅಪ್ರಾಪ್ತ ಸಹೋದರಿಯ ಮೇಲೂ ಶುಭಾಂಶು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಗ್ರೂಪ್‌ ಸ್ಟಡಿ ಮಾಡಲು ತೆರಳುತ್ತಿದ್ದಾಗ ಪರಿಚಯವಾಗಿದ್ದ ಶುಭಾಂಶು, ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಾನು ಕರೆದಾಗೆಲ್ಲ ಬರಬೇಕು ಎಂದು ಬೆದರಿಸಿದ್ದ ಆತ, ನಿನ್ನ ಮನೆಯವರನ್ನು ನನಗೆ ಪರಿಚಯ ಮಾಡಿಸು ಎಂದಿದ್ದ. ಹಾಗಾದರೆ ಮಾತ್ರ ತಾನು ನಿನ್ನ ಬಿಡುವುದಾಗಿ ಹೆದರಿಸಿದ್ದ ಎಂದು ಅಪ್ರಾಪ್ತೆಯೂ ದೂರಿದ್ದಾಳೆ.ಆರೋಪಿಯ ರಾಸಲೀಲೆ ಬಗ್ಗೆ ಠಾಣೆಗೆ ದೂರು ನೀಡಲಾಗಿದೆ. ಆರೋಪಿಯು ಇದೇ ರೀತಿ ಹಲವರಿಗೆ ವಂಚಿಸಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News