ಪಾಟ್ನಾ, ಡಿ.28-ಬಿಹಾರದ ಜಮುಯಿ ಜಿಲ್ಲೆಯಲ್ಲಿ ಕಳೆದ ರಾತ್ರಿ ಸರಕು ಸಾಕಣೆ ರೈಲಿನ ಎಂಟು ವ್ಯಾಗನ್‌ಗಳು ಹಳಿ ತಪ್ಪಿದೆ.ಘಟನೆಯಿಂದ ಹೌರಾ-ಪಾಟ್ನಾ-ದೆಹಲಿ ಮಾರ್ಗದಲ್ಲಿ ರೈಲ್ವೆ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ಅವರು ಹೇಳಿದರು.
ತಡ ರಾತ್ರಿ 11.25 ರ ಸುಮಾರಿಗೆ ಪೂರ್ವ ರೈಲ್ವೆಯ ಅಸನ್ಸೋಲ್ ವಿಭಾಗದ ಲಹಾಬೊನ್ ಮತ್ತು ಸಿಮುಲ್ತಲಾ ರೈಲು ನಿಲ್ದಾಣಗಳ ನಡುವೆ ಅಪಘಾತ ಸಂಭವಿಸಿದೆ. ಇದರ ಪರಿಣಾಮವಾಗಿ ರಾತ್ರಿಯಿಡೀ ಸುಮಾರು 12 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರಿಗೆ ಅನಾನುಕೂಲವಾಗಿದೆ.
ಅಸನ್ಸೋಲ್, ಮಧುಪುರ ಮತ್ತು ಝಾಝಾ ನಿಲ್ದಾಣಗಳಿಂದ ಅಪಘಾತ ಪರಿಹಾರ ರೈಲುಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ ಇಂದು ಸಂಜೆ ವೇಳೆಗೆ ಪೂರ್ಣಗೊಳ್ಳಲಿದೆ.
