Friday, April 4, 2025
Homeಜಿಲ್ಲಾ ಸುದ್ದಿಗಳು | District Newsಮೊಬೈಲ್‌ ಕಸಿದು ಮರವೇರಿದ ಮಂಗ

ಮೊಬೈಲ್‌ ಕಸಿದು ಮರವೇರಿದ ಮಂಗ

ಮೈಸೂರು, ಮೇ 23 – ಮೊಬೈಲ್‌ ಕಸಿದು ಮಂಗ ಮರವೇರಿ ಭಕ್ತರೊಬ್ಬರಿಗೆ ಕೆಲಕಾಲ ಪೇಚಾಟ ತಂದ ಘಟನೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ.ಹಾಸನದಿಂದ ಬಂದ ಕುಟುಂಬ ನಾಡದೇವಿಯ ದರುಶನ ಪಡೆಯಲು ಮೆಟ್ಟಿಲು ಮಾರ್ಗದಲ್ಲಿ ಸಾಗಲು ನಿಂತಿದ್ದರು.

ಪಾದದ ಬಳಿ ಇರುವ ಚಾಮುಂಡಿ ವಿಗ್ರಹಕ್ಕೆ ಪೂಜೆ ಸಲ್ಲಿಸುವ ವೇಳೆ ಮಹಿಳೆಯ ಕೈಲಿದ್ದ ಪರ್ಸ್‌ ಕಸಿದ ಕೋತಿ ಮರವೇರಿ ಕುಳಿತಿದೆ.ಪರ್ಸ್‌ ನಲ್ಲಿದ್ದ ಒಂದೊಂದೇ ಪದಾರ್ಥಗಳನ್ನ ಬಿಸಾಡಿದ ಮಂಗ ಕೊನೆಗೆ ಮೊಬೈಲ್‌ ಎಸೆಯದೆ ಅದನ್ನು ಹಿಡಿದುಕೊಂಡು ಕೊಂಬೆಯಿಂದ ಕೊಂಬೆಗೆ ಹಾರುತ್ತಾ ಭಕ್ತರನ್ನ ಪರದಾಡುವಂತೆ ಮಾಡಿತು.

ಬಾಳೆಹಣ್ಣು ಆಮಿಷ ನೀಡಿದರೂ ಮೊಬೈಲ್‌ ಬಿಡಲೊಲ್ಲದ ವಾನರ ಸುಮಾರು ಅರ್ಧಗಂಟೆ ಕಾಲ ತನ್ನ ಚೇಷ್ಠೆಯನ್ನು ಮುಂದುವರೆಸಿ ಕೊನೆಗೆ ಬಿಸಾಡಿತು. ಮೊಬೈಲ್‌ ಪಡೆದ ಭಕ್ತರು ನೆಮ್ಮದಿಯಿಂದ ನಾಡದೇವಿಯ ದರುಶನಕ್ಕೆ ತೆರಳಿದರು.

RELATED ARTICLES

Latest News