ನಿತ್ಯ ನೀತಿ : ನಮ್ಮಲ್ಲಿ ಎಷ್ಟೇ ಸಂಪತ್ತಿರಲಿ ಸಾವು ಸಮೀಪಿಸಿದಾಗ ದೇವರು ಕೊಟ್ಟಿರುವ ಆಯ್ಕೆ ಕೇವಲ ಎರಡು. ಕೊಟ್ಟು ಹೋಗುವುದು ಅಥವಾ ಬಿಟ್ಟು ಹೋಗುವುದು. ಮತ್ತೇಕೆ ಈ ಮೋಹ..?
ಪಂಚಾಂಗ : ಶುಕ್ರವಾರ, 24-05-2024
ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಅನುರಾಧಾ / ಯೋಗ: ಶಿವ / ಕರಣ: ಬಾಲವ
ಸೂರ್ಯೋದಯ : ಬೆ.05.53
ಸೂರ್ಯಾಸ್ತ : 06.41
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00
ರಾಶಿಭವಿಷ್ಯ :
ಮೇಷ: ಗಣ್ಯ ವ್ಯಕ್ತಿಗಳನ್ನು ಸಂಪರ್ಕಿಸುವಿರಿ. ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.
ವೃಷಭ: ಮನೆದೇವರ ದರ್ಶನದಿಂದ ಮಾನಸಿಕ ಸ್ಥೈರ್ಯ ಹೆಚ್ಚಾಗುವುದು.
ಮಿಥುನ: ಪ್ರಿಂಟಿಂಗ್ ವ್ಯಾಪಾರಿಗಳಿಗಗೆ ನಿರೀಕ್ಷಿತ ಆದಾಯ ಸಿಗಲಿದೆ.
ಕಟಕ: ಉದ್ಯೋಗದ ಕಡೆಗೆ ಹೆಚ್ಚಿನ ಗಮನಹರಿಸಿ. ಖರ್ಚು ಹೆಚ್ಚಾಗಲಿದೆ.
ಸಿಂಹ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿವೆ.
ಕನ್ಯಾ: ಸಹೋದರರು ಆರ್ಥಿಕವಾಗಿ ಸಹಾಯ ಮಾಡುವರು.
ತುಲಾ: ಬೇರೆಯವರು ನಿಮ್ಮೊಂದಿಗೆ ಗೆಳೆತನ ಬೆಳೆಸಲು ಬಯಸುತ್ತಾರೆ.
ವೃಶ್ಚಿಕ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರು ಎಚ್ಚರಿಕೆಯಿಂದಿರಿ.
ಧನುಸ್ಸು: ಹಿರಿಯರ ಸಕಾಲಿಕ ನೆರವಿನಿಂದ ಎದುರಾಗ ಬಹುದಾದ ವಿಪತ್ತುಗಳು ದೂರವಾಗಲಿವೆ.
ಮಕರ: ಉದ್ಯೋಗಸ್ಥ ಮಹಿಳೆಯರಿಗೆ ಶುಭ ದಿನ. ಕೃಷಿಕರಿಗೆ ಶುಭಫಲ ಸಿಗಲಿದೆ. ಉದ್ಯೋಗದಲ್ಲಿ ಲಾಭ.
ಕುಂಭ: ಧಾರ್ಮಿಕ ಕಾರ್ಯಗಳತ್ತ ಗಮನ ಹರಿಸುವಿರಿ. ಕೀರ್ತಿ ನಿಮ್ಮನ್ನು ಅರಸಿ ಬರಲಿದೆ.
ಮೀನ: ಕೆಲಸ ಸ್ಥಳದಲ್ಲಿ ಕಿರಿಕಿರಿ ಉಂಟಾಗಿ ಕೆಲಸ ಬಿಡುವ ಮನಸ್ಸು ಕೂಡ ಮಾಡಬಹುದು.