Friday, November 22, 2024
Homeರಾಜ್ಯಚನ್ನಗಿರಿ ಪೊಲೀಸ್‌‍ ಠಾಣೆ ಮೇಲೆ ದಾಳಿಗೆ ಸಂಬಂಧಿಸಿದಂತೆ 25 ಜನರ ಬಂಧನ

ಚನ್ನಗಿರಿ ಪೊಲೀಸ್‌‍ ಠಾಣೆ ಮೇಲೆ ದಾಳಿಗೆ ಸಂಬಂಧಿಸಿದಂತೆ 25 ಜನರ ಬಂಧನ

ದಾವಣಗೆರೆ , ಮೇ 27- ಚನ್ನಗಿರಿ ಪೊಲೀಸ್‌‍ ಠಾಣೆ ಮೇಲೆ ಉದ್ರಿಕ್ತರ ಗುಂಪು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಕನಿಷ್ಠ 25 ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂಸಾತ್ಮಕ ದಾಳಿಯಿಂದ ಪೊಲೀಸ್‌‍ ಠಾಣೆಯನ್ನು ಧ್ವಂಸಗೊಳಿಸಲಾಗಿದೆ,ಹಲವಾರು ವಾಹನಗಳನ್ನು ಹಾನಿಗೊಳಿಸಿದೆ. ಘಟನೆಯಲ್ಲಿ ಕನಿಷ್ಠ 11 ಪೊಲೀಸ್‌‍ ಸಿಬ್ಬಂದಿ ಗಾಯಗೊಂಡಿದ್ದಾರೆ. ಇದೀಗ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆಗೆ ವಹಿಸಲಾಗಿದೆ.

ಘಟನೆಗೆ ಸಂಭಂಧಿಸಿದಂತೆ 25 ಜನರನ್ನು ಬಂಧಿಸಲಾಗಿದೆ ಐಪಿಸಿ ಸೆಕ್ಷನ್‌ 353 (ಸಾರ್ವಜನಿಕ ಸೇವಕನ ಕರ್ತವ್ಯದಿಂದ ತಡೆಯಲು ಹಲ್ಲೆ ಅಥವಾ ಕ್ರಿಮಿನಲ್‌ ಬಲ) ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಘಟನೆಯ ತನಿಖೆಗಾಗಿ ಐದು ಪೊಲೀಸ್‌‍ ತಂಡಗಳನ್ನು ರಚಿಸಲಾಗಿದೆ ಮತ್ತು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಲಭ್ಯವಿರುವ ವೀಡಿಯೊ ತುಣುಕುಗಳನ್ನು ಆಧರಿಸಿ ಬಂಧಿಸಲಾಗಿದೆ ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ಆದಿಲ್‌ (30) ಅವರನ್ನು ಕಳೆದ ಮೇ 24 ರಂದು ಬಂಧಿಸಲಾಯಿತು, ನಂತರ ತನ ಆರೋಗ್ಯ ಸ್ಥಿತಿ ಹದಗೆಟ್ಟು ಸಾವನ್ನಪ್ಪಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆತನ ಸಂಬಂಧಿಕರು ದೊಡ್ಡ ಗುಂಪಿನೊಂದಿಗೆ ಮೃಬಂದು ಪೊಲೀಸ್‌‍ ವಾಹನಗಳನ್ನು ಹಾನಿಗೊಳಿಸಿ ನಂತರ ಪೊಲೀಸ್‌‍ ಠಾಣೆಗೆ ಕಲ್ಲು ತೂರಿದರು ಕೆಲವರು ಪೊಲೀಸರಿಗೆ ಕೊಲೆ ಬೆದರಿಕೆ ಹಾಕಿ ಠಾಣೆಯನ್ನು ದೌಂಸಗೊಳಿಸಿದ್ದಾರೆ.

ಕರ್ತವ್ಯ ಲೋಪದ ಕಾರಣ ನೀಡಿ ಎಸಿಪಿ ಹಾಗೂ ಚನ್ನಗಿರಿ ಠಾಣೆ ಇನ್‌್ಸಪೆಕ್ಟರ್‌ ಅವರನ್ನು ಅಮಾನತುಗೊಳಿಸಲಾಗಿದೆ.ಘಟನೆ ನಡೆಯಬಾರದಿತ್ತು.ಮೃತ ಆರೋಪಿ ಮಟ್ಕಾ ,ಜೂಜಿನಲ್ಲಿ ತೊಡಗಿಸಿಕೊಂಡಿದ್ದರಿಂದ, ಪೊಲೀಸರು ಅವನನ್ನು ಹಿಡಿದಿದ್ದರು, ಆ ಸಮಯದಲ್ಲಿ ಹೃದಯಾಘಾತ ಅಥವಾ ಕಡಿಮೆ ಬಿಪಿ (ರಕ್ತದೊತ್ತಡ) ಕೊನೆಯುಸಿರಳೆದಿದ್ದಾನೆ ,ಮರಣೋತ್ತರ ಪರೀಕ್ಷೆಯ ವರದಿಗೆ ಕಾಯಲಾಗುತ್ತಿದೆ ಎಂದು ಎಸ್‌‍ಪಿ ತಿಳಿಸಿದ್ದಾರೆ.

RELATED ARTICLES

Latest News