Sunday, November 24, 2024
Homeಮನರಂಜನೆಮಹಿಳಾ ಪ್ರಧಾನ ಚಿತ್ರ 3ದೇವಿಗೆ ಜನಾಶೀರ್ವಾದ

ಮಹಿಳಾ ಪ್ರಧಾನ ಚಿತ್ರ 3ದೇವಿಗೆ ಜನಾಶೀರ್ವಾದ

ಕೆಲವು ಸಿನಿಮಾಗಳು ಸಾಮಾಜಿಕ ಸಂದೇಶವನ್ನು ಹೊತ್ತು ತರುತ್ತವೆ ಆದರೆ ಅವು ಕೇವಲ ಕಲಾತ್ಮಕ ಚಿತ್ರಗಳೆಂದು ಅಣೆಪಟ್ಟಿ ಕಟ್ಟಿಕೊಂಡು ಪ್ರೇಕ್ಷಕರಿಂದ ದೂರ ಉಳಿದುಬಿಡುತ್ತವೆ. ಇನ್ನು ಕೆಲವು ಸಾಮಾಜಿಕ ಮತ್ತು ಕಲಾತ್ಮಕ ಅಂಶಗಳಿಗೆ ಕಮರ್ಷಿಯಲ್ ಟೆಚ್ ಕೊಟ್ಟು ಪ್ರೇಕ್ಷಕರನ್ನ ತಲುಪುವಲ್ಲಿ ಯಶಸ್ವಿಯಾಗುತ್ತವೆ ಈ ಗುಂಪಿಗೆ ಸೇರಿದ 3 ದೇವಿ ಚಿತ್ರ ಸೇರ್ಪಡೆಯಾಗುತ್ತದೆ. ಕಳೆದ ವಾರ ತೆರೆ ಕಂಡು ಪ್ರೇಕ್ಷಕರನ್ನ ರಂಜಿಸುವಲ್ಲಿ ಯಶಸ್ವಿಯಾಗಿದೆ

ಸಂಪೂರ್ಣವಾಗಿ ಮಹಿಳಾ ಆಧಾರಿತ ಕಥೆಯಾಗಿರುವ 3 ದೇವಿ ಹಲವಾರು ರೋಚಕಗಳಿಗೆ ಕಾಣಬರುತ್ತದೆ,
ಮಾರಿಯಾ (ಸಂಧ್ಯಾ), ವಿಜಯಲಕ್ಷ್ಮಿ (ಶುಭಾ ಪುಂಜಾ) ಮತ್ತು ಶರಣ್ಯ (ಜ್ಯೋತ್ಸ್ನಾ) ಈ ಮೂರು ಜನರ ಮೇಲೆ ಇಡೀ ಕಥೆ ಸಾಗುತ್ತದೆ. ಒಬ್ಬೊಬ್ಬರು ಒಂದೊಂದು ಸಮಸ್ಯೆಯನ್ನು ಮೈಮೇಲೆ ಹೊತ್ತು ತಿರುಗುವಾಗ ಅವುಗಳಿಂದ ಬಿಡುಗಡೆಗೊಂಡು ಹೊರಬರಲು ಕೇರಳದ ಕಡೆ ಮುಖ ಮಾಡುತ್ತಾರೆ. ಟ್ರಕ್ಕಿಂಗ್ ಮಾಡುವ ಸಂದರ್ಭದಲ್ಲಿ ಕಾಡಿನ ಮಧ್ಯೆ ಕಳ್ಳ ಬೇಟೆಗಾರರ ಕೈಗೆ ಸಿಕ್ಕಿಹಾಕಿಕೊಳ್ಳುವ ಅವರ ಐರಾಣದ ಕಥೆ ಈ ಚಿತ್ರದ ಹೈಲೈಟ್. ಈ ಸಂದರ್ಭದಲ್ಲಿ ನಡೆಯುವ ಹೋರಾಟಗಳು, ಅದರ ಪರಿಣಾಮಗಳು, ನೋಡುಗರಿಗೆ ರೋಮಾಂಚನದ ಅನುಭವವನ್ನು ನೀಡುತ್ತವೆ. ಕೊನೆಯಲ್ಲಿ ಅವರಿಂದ ಯಾರು ತಪ್ಪಿಸಿಕೊಳ್ಳುತ್ತಾರೆ, ಅಥವಾ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲವ ಇದು ಕಥೆಯ ಸಸ್ಪೆನ್ಸ್

ನಿರ್ದೇಶಕ ಅಶ್ವಿನ್ ಮ್ಯಾಥ್ಯೂ ಕಥೆಗೆ ಮೂರು ಆಯಾಮಗಳನ್ನು ಕೊಟ್ಟು ಮೊದಲ ನಿರ್ದೇಶನದಲ್ಲಿ ಒಂದಿಷ್ಟು ಹೊಸತನಕ್ಕೆ ಹಂಬಲಿಸಿರುವುದು ಸಿನಿಮಾ ಸ್ಕ್ರೀನ್ ಪ್ಲೇ ಗಮನಿಸಿದಾಗ ಗೊತ್ತಾಗುತ್ತದೆ. ಮೊದಲಾರ್ಧದಲ್ಲಿ ಒಂದಿಷ್ಟು ವೇಗಕ್ಕೆ ಚಾಲನೆ ಕೊಟ್ಟಿದ್ದರೆ ಕಥೆ ಮತ್ತಷ್ಟು ಬಿಗಿಯಾಗುತ್ತಿತ್ತು. ಅದನ್ನು ಹೊರತುಪಡಿಸಿದರೆ ಎರಡನೇ ಭಾಗ ಅಚ್ಚುಕಟ್ಟಾಗಿ ಮೂಡಿಬಂದಿದೆ. ಸಂಗೀತಕ್ಕೆ ಪ್ರಾಮುಖ್ಯತೆಯನ್ನು ಕೊಟ್ಟು ಕಥೆಗೆ ಎಷ್ಟು ಬೇಕೋ ಅಷ್ಟು ಬಳಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ನಾಯಕಿ ನಟಿಯರು, ನಿರ್ಮಾಪಕರ ಅನೇಕ ಸಮಸ್ಯೆಗಳನ್ನು ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ.

ಶುಭಾ ಪೂಂಜಾ, ಸಂಧ್ಯಾ ಲಕ್ಷ್ಮೀನಾರಾಯಣ, ಜ್ಯೋತ್ಸ್ನಾ ಬಿ ರಾವ್ ಈ ಮೂರು ನಾಯಕಿಯರು ಕಥೆಯುದ್ಧಕ್ಕೂ ಪ್ರೇಕ್ಷಕರನ್ನ ವಿವಿಧ ಆಯಾಮಗಳಲ್ಲಿ ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಡಿನ ದೃಶ್ಯಗಳನ್ನ, ಆಕ್ಷನ್ ಸೀಕ್ವೆನ್ಸಿ ಗಳಲ್ಲಿ ಸೊಗಸಾಗಿ ಸರಿ ಹಿಡಿದಿರುವುದು ಎಸ್ ಕುಮಾರ್ ಅವರ ಕೈಚಳಕ ಸಿನಿಮಾ ಕಥೆಗೆ ಪೂರಕವಾಗಿದೆ.

RELATED ARTICLES

Latest News