ಚಾಮರಾಜನಗರ,ಡಿ.29- ರಾತ್ರಿ ಕರ್ತವ್ಯಮುಗಿಸಿ ಬೆಳಗಿನ ಜಾವ ಮನೆಗೆ ಮರಳಿದ್ದ ಎಎಸ್‌ಐ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.ಸಂತೇಮರಹಳ್ಳಿ ಪೊಲೀಸ್ ಠಾಣೆಯ ಎಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದ ನಾಗನಾಯಕ (50)ಮೃತಪಟ್ಟಿದ್ದಾರೆ.
ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲಿ ಮತ್ತು ರಾತ್ರಿ ಗಸ್ತು ನಡೆಸಿ ಠಾಣಿಗೆ ಬಂದಿದ್ದರು ನಂತರ ಮುಂಜಾನೆ 5.30ಕ್ಕೆ ನಾಗನಾಯಕ ಮನೆಗೆ ಬಂದಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ.ಕೂಡಲೆ ಆತಂಕಗೊಂಡ ಮನೆಯವರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಎಎಸ್‌ಐ ಕೊನೆಯುಸಿರೆಳೆದಿದ್ದಾರೆ.
ನಗರದ ಪೊಲೀಸ್ ಗೃಹದಲ್ಲಿ ವಾಸವಿದ್ದರು ತೀವ್ರ ಹೃದಯಾಘಾತದಿಂ ನಾಗನಾಯಕ ಮೃತಪಟ್ಟಿದ್ದಾರೆ ಎಂದು ಪೊಲೕಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಎಳೆಂದೂರು ಎರಂಬಳ್ಳಿ ಗ್ರಾಮದವರಾದ ನಾಗನಾಯಕ ಅವರು 1999ರಲ್ಲಿ ಪೊಲೀಸ್ ಸೇವೆ ಸೇರಿದ್ದರು.
ಕಾನ್‌್ಸಟೇಬಲ್ ಆಗಿ ನೇಮಕಗೊಂಡು ಉತ್ತಮ ಸೇವೆಯ ಮೂಲಕ ಬಡ್ತಿ ಪಡೆದು ಕಳೆದ 1 ವರ್ಷದ ಹಿಂದೆ ಸಂತೇಮರಹಳ್ಳಿ ಪೊಲೀಸ್ ಠಾಣೆಯಲಿ ಎಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಪತ್ನಿ ಮೂವರು ಮಕ್ಕಳಿದ್ದು ಅಕಾಲಿಕ ನಿಧನಕ್ಕೆ ಠಾಣೆಯ ಸಿಬ್ಭಂದಿ ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
