Friday, November 22, 2024
Homeರಾಜ್ಯಮಹಿಳೆಯರು ಉಚಿತ ಬಸ್‌‍ ಪ್ರಯಾಣದ ಶಕ್ತಿ ಯೋಜನೆಯಿಂದ ಜಿಎಸ್‌‍ಟಿ ಹೆಚ್ಚಳ

ಮಹಿಳೆಯರು ಉಚಿತ ಬಸ್‌‍ ಪ್ರಯಾಣದ ಶಕ್ತಿ ಯೋಜನೆಯಿಂದ ಜಿಎಸ್‌‍ಟಿ ಹೆಚ್ಚಳ

ಬೆಂಗಳೂರು, ಮೇ 29- ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ರಾಜ್ಯಾದ್ಯಂತ ಸರ್ಕಾರಿ ಬಸ್‌‍ಗಳಲ್ಲಿ ಉಚಿತವಾಗಿ ಮಹಿಳೆಯರು ಪ್ರಯಾಣಿಸುವ ಶಕ್ತಿ ಯೋಜನೆ ಸರಕು ಸೇವಾ ತೆರಿಗೆ (ಜಿಎಸ್‌‍ಟಿ)ಯನ್ನು ಹೆಚ್ಚಿಸಿದೆ.

2023 ರ ಮೇ ತಿಂಗಳಿನಲ್ಲಿ ಜಾರಿಗೆ ಬಂದಿದ್ದ ಶಕ್ತಿ ಯೋಜನೆಗೆ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಳ್ಳುತ್ತಿರುವ ಕಾರಣ ಜಿಎಸ್‌‍ಟಿಯು ಏರಿಕೆಯಾಗಿರುವುದು ಸರ್ಕಾರದ ಹಣಕಾಸು ನೀತಿ ಸಂಸ್ಥೆ ನಡೆಸಿರುವ ಅಧ್ಯಯನದಿಂದ ಬಹಿರಂಗವಾಗಿದೆ. ವಿಶೇಷವಾಗಿ ಮಹಿಳಾ ಕಾರ್ಮಿಕರು ಈ ಯೋಜನೆಯ ಹೆಚ್ಚಿನ ಫಲಾನುಭವಿಗಳಾಗಿರುವುದರಿಂದ ಅವರ ಭಾಗವಹಿಸುವಿಕೆ ಜಿಎಸ್‌‍ಟಿ ಸಂಗ್ರಹವನ್ನು ಹೆಚ್ಚಿಸಿದೆ ಎಂದು ಎಪ್‌ಪಿಐ ನಡೆಸಿರುವ ಅಧ್ಯಯನದಲ್ಲಿ ಬಹಿರಂಗವಾಗಿದೆ.

ರಾಜ್ಯ ಹಣಕಾಸು ನೀತಿ ಸಂಸ್ಥೆ (ಎಫ್‌ಪಿಐ) ನಡೆಸಿದ ಅಧ್ಯಯನದ ಪ್ರಕಾರ, ಕಳೆದ ವರ್ಷ, ಶಕ್ತಿ ಯೋಜನೆಯನ್ನು ಪ್ರಾರಂಭಿಸಿದಾಗ, ಈ ವರ್ಷದ ಮಾರ್ಚ್‌ವರೆಗೆ, ಜಿಎಸ್‌‍ಟಿ ಸಂಗ್ರಹವು 309.64 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ.ಏಕೆಂದರೆ ಮಹಿಳೆಯರಿಗೆ ಬಸ್‌‍ ಪ್ರಯಾಣ ಉಚಿತವಾಗಿರುವದರಿಂದ ಉಳಿತಾಯ ಯೋಜನೆ ಯಥೇಚ್ಛವಾಗಿ ಹೆಚ್ಚಾಗುತ್ತಿದ್ದು, ಇದು ಸರ್ಕಾರದ ಬೊಕ್ಕಸಕ್ಕೂ ಪರೋಕ್ಷವಾಗಿ ಆದಾಯವನ್ನು ಹೆಚ್ಚಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌‍ ಸರ್ಕಾರದ ಪ್ರಮುಖ ಖಾತರಿ ಯೋಜನೆಯಾದ ಶಕ್ತಿಯ ಆರ್ಥಿಕ ಪರಿಣಾಮವನ್ನು ಅಳೆಯುವ ಮೊದಲ ಅಧ್ಯಯನ ಇದಾಗಿದೆ.ಪ್ರಯಾಣದಲ್ಲಿ ಉಳಿಸಿದ ಮೊತ್ತವು ಪ್ರಯಾಣಿಕರಿಗೆ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಅವರು ಇತರ ಅಗತ್ಯ ವಸ್ತುಗಳ ಬಳಕೆಗೆ ಸಂಪೂರ್ಣ ಮೊತ್ತವನ್ನು ಖರ್ಚು ಮಾಡುತ್ತಾರೆ ಎಂದು ಎಫ್‌ಪಿಐ ಸಂಶೋಧನಾ ಅಧ್ಯಯನದಲ್ಲಿ ತಿಳಿದುಬಂದಿದೆ.

ಇಂತಹ ಹೆಚ್ಚುವರಿ ಖರ್ಚು ಸರ್ಕಾರದಿಂದ ತೆರಿಗೆ ಸಂಗ್ರಹವನ್ನು ಹೆಚ್ಚಿಸುತ್ತದೆ. ವಿವಿಧ ಸರಕುಗಳ ಮೇಲಿನ ಮಾಸಿಕ ತಲಾ ವೆಚ್ಚದ ಅಂಕಿ-ಅಂಶಗಳು, ದರಗಳು ಮತ್ತು ಯೋಜನೆಯ ಒಟ್ಟು ಟಿಕೆಟ್‌ ಮೌಲ್ಯವನ್ನು ಬಳಸಿಕೊಂಡು ಶಕ್ತಿ ಯೋಜನೆಯಿಂದ 2024-25ರಲ್ಲಿ ಶಕ್ತಿಯು 371.57 ಕೋಟಿ ರೂಪಾಯಿಗಳ ಜಿಎಸ್ಟಿ ಆದಾಯವನ್ನು ಗಳಿಸಬಹುದು ಎಂದು ಅಧ್ಯಯನವು ಯೋಜಿಸಿದೆ ಎಂದು ಲೆಕ್ಕ ಹಾಕಿದೆ.

ಜಸ್ಟ್‌ಜಾಯ್‌್ಸ ನೆಟ್ವರ್ಕ್‌ ಫಿಸ್ಕಲ್‌ ಪಾಲಿಸಿ ಇನ್ಸ್ಟಿಟ್ಯೂಟ್‌ ಸಹಯೋಗದೊಂದಿಗೆ ನಡೆಸಿದ ಮತ್ತೊಂದು ಅಧ್ಯಯನದಲ್ಲಿ, ಶಕ್ತಿ ಯೋಜನೆಯಡಿಯಲ್ಲಿ ಪ್ರಯಾಣ ದರ ರಹಿತ ಪ್ರಯಾಣದ ಸರಾಸರಿ ಉಳಿತಾಯವನ್ನು ಬೆಂಗಳೂರಿನಲ್ಲಿ ರೂ.1,326, ಹಾವೇರಿಯಲ್ಲಿ ರೂ.1,015, ಚಾಮರಾಜನಗರದಲ್ಲಿ ರೂ.779, ರೂ.784 ಎಂದು ತೋರಿಸಲಾಗಿದೆ.

ಯಾದಗಿರಿ ಹಾಗೂ ಉಡುಪಿಯಲ್ಲಿ 681 ರೂ.ಎಫ್‌ಪಿಐ ಅಧ್ಯಯನದ ಪ್ರಕಾರ, ಶಕ್ತಿ ಯೋಜನೆಯು ಹೆಚ್ಚಿನ ಮಹಿಳೆಯರು ಉದ್ಯೋಗ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕೊಡುಗೆ ಯನ್ನು ನೀಡುತ್ತದೆ.ಶಕ್ತಿ ಯೋಜನೆಯ ಅನುಷ್ಠಾನದ ಮೊದಲು ಮತ್ತು ನಂತರ ಮಹಿಳಾ ಕಾರ್ಮಿಕ ಭಾಗವಹಿಸುವಿಕೆ ದರ ಮತ್ತು ಕಾರ್ಮಿಕರ ಜನಸಂಖ್ಯೆಯ ದರ ತ್ರೈಮಾಸಿಕ ಹೋಲಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ಅಕ್ಟೋಬರ್‌-ಡಿಸೆಂಬರ್‌ 2022 ರಲ್ಲಿ, ಶೇ. 25.1 ಆಗಿತ್ತು, ಇದು 2023 ರ ಅದೇ ಅವಧಿಯಲ್ಲಿ ಶೇ. 30.2 ಕ್ಕೆ ಏರಿಕೆ ಆಗಿತ್ತು. ಅಕ್ಟೋಬರ್‌-ಡಿಸೆಂಬರ್‌ 2022 ರಲ್ಲಿ ಶೇ. 23.7 ಆಗಿತ್ತು, ಇದು 2023 ರಲ್ಲಿ ಶೇ. 28.8 ಕ್ಕೆ ಏರಿದೆ ಎಂದು ಅಧ್ಯಯನವು ಹೇಳಿದೆ.ಸುರಕ್ಷಿತ ಮತ್ತು ಕೈಗೆಟುಕುವ ಸಾರಿಗೆ ವಿಧಾನಗಳು ಕಾರ್ಮಿಕ ಬಲದಲ್ಲಿ ಮಹಿಳಾ ಭಾಗವಹಿಸುವಿಕೆಯನ್ನು ಹೆಚ್ಚಿಸುವುದಲ್ಲದೆ, ರಾಷ್ಟ್ರದ ಆರ್ಥಿಕತೆಗೆ ಸಕ್ರಿಯವಾಗಿ ಕೊಡುಗೆ ನೀಡುವ ಅವಕಾಶವನ್ನು ಒದಗಿಸುತ್ತವೆ ಎಂದು ಅಧ್ಯಯನವು ಹೇಳುತ್ತದೆ.

RELATED ARTICLES

Latest News