ಚಿತ್ರಮಂದಿರಗಳತ್ತ ಜನ ಬಂದು ಸಿನಿಮಾ ನೋಡುತ್ತಿಲ್ಲ, ಎಲ್ಲಾ ಥಿಯೇಟರ್‌ಗಳು ಬಂದ್ ಆಗುತ್ತಿವೆ. ಸ್ಟಾರ್ ನಟರ ಸಿನಿಮಾಗಳು ಬರುತ್ತಿಲ್ಲ, ಒಟ್ಟಾರೆ ಕನ್ನಡ ಚಿತ್ರರಂಗವೇ ನಿಂತು ಹೋಗುವ ಪರಿಸ್ಥಿತಿ ಉಂಟಾಗುತ್ತದೆ ಎಂಬೆಲ್ಲ ಋಣಾತಕ ಸುದ್ದಿಗಳ ನಡುವೆ ಹರ್ಷದಾಯಕ ಸುದ್ದಿಯೊಂದು ಹೊರ ಬಿದ್ದಿದೆ.
ಅದು ಧ್ರುವ ಸರ್ಜಾ ಅಭಿನಯದ ಕೆಡಿ ಚಿತ್ರದ ಆಡಿಯೋ ರೈಟ್ಸ್ ಬರೋಬ್ಬರಿ 17.70 ಕೋಟಿ ರೂ.ಗಳಿಗೆ ಮಾರಾಟವಾಗಿರುವುದು. ಅತಿದೊಡ್ಡ ತಾರಾಗಣ, ಅದ್ಧೂರಿ ಮೇಕಿಂಗ್‌ನಿಂದಲೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಕೆಡಿ ಚಿತ್ರದ ಆಡಿಯೋ ಹಕ್ಕು ಆನಂದ್ ಆಡಿಯೋ ಸಂಸ್ಥೆಗೆ ಸೇಲಾಗಿದೆ.
ಚಿತ್ರದ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಸ್ವತಹ ನಿರ್ದೇಶಕ ಪ್ರೇಮ್ ಅವರೇ ಹೇಳಿದ್ದಾರೆ. ಚಿತ್ರದ ಕ್ವಾಲಿಟಿಯಲ್ಲಿ ಎಲ್ಲೂ ಕಾಂಪ್ರಮೈಸ್ ಆಗಿಲ್ಲ, ಇನ್ನು ಈ ಚಿತ್ರದ ಹಾಡುಗಳಿಗೆ ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲಬಾರಿಗೆ 256 ಪೀಸ್ ಆರ್ಕೆಸ್ಟ್ರಾ ಬಳಸಲಾಗಿದೆ.
ಶಾರುಕ್ ಖಾನ್ ಅಭಿನಯದ ಜವಾನ್ ಚಿತ್ರಕ್ಕೆ 180 ಪೀಸ್ ಆರ್ಕೆಸ್ಟ್ರಾ ಬಳಸಲಾಗಿತ್ತು. ಇದೀಗ ಆ ದಾಖಲೆಯನ್ನು ಕೆಡಿ ಸಿನಿಮಾ ಮುರಿದಿದೆ ಎಂದು ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಪ್ರೇಮ್, ಕೆಡಿ ಚಿತ್ರಕ್ಕೆ ಈವರೆಗೆ 150 ದಿನಗಳ ಚಿತ್ರೆಕರಣ ನಡೆಸಿದ್ದೇವೆ. ಇನ್ನೊಂದು ವಾರದ ಟಾಕಿ ಪೋರ್ಷನ್ ಹಾಗೂ 3 ಹಾಡುಗಳನ್ನು ಶೂಟ್ ಮಾಡಿದರೆ ಚಿತ್ರೀಕರಣ ಮುಗಿದಂತೆ.
ನೈಜಘಟನೆ ಆಧಾರಿತ ಈ ಚಿತ್ರಕ್ಕೆ ಇಪ್ಪತ್ತು ಎಕರೆ ಜಾಗದಲ್ಲಿ ಸೆಟ್ ಹಾಕಿದ್ದೇವೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಆರು ಜನ ಕೊರಿಯೋಗ್ರಾರ್ಸ್ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿ ನಂತರ ಕೆಡಿ ಚಿತ್ರವನ್ನು ಡಿಸೆಂಬರ್‌ನಲ್ಲಿ ತೆರೆಗೆ ತರುವುದಾಗಿ ತಿಳಿಸಿದರು. ಅಲ್ಲದೆ ಆಗ್ಟ್ 16ರ ವರಮಹಾಲಕ್ಷ್ಮಿ ಹಬ್ಬದಂದು ಮುಂಬೈನಲ್ಲಿ ಚಿತ್ರದ ಟೀಸರ್ ಹಾಗೂ 24ಕ್ಕೆ ಚಿತ್ರದ ಮೊದಲ ಹಾಡನ್ನು ಹೈದರಾಬಾದ್ನಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿರುವುದಾಗಿಯೂ ಅವರು ತಿಳಿಸಿದರು.
ಮಾತು ಆರಂಭಿಸಿದ ನಾಯಕ ಧ್ರುವ, ಇದು 1970-75ರಲ್ಲಿ ಬೆಂಗಳೂರಲ್ಲಿ ನಡೆಯುವ ಕಥೆ. ಇಡೀ ಬೆಂಗಳೂರನ್ನೇ ಸೆಟ್ ಹಾಕಿ ಅವರು, ಇನ್ನೊಂದು ಬೆಂಗಳೂರು ಥರ ಮಾಡಿಬಿಟ್ಟಿದ್ರು, ಚಿತ್ರದ ಬಗ್ಗೆ ಎಲ್ಲ ಕಡೆಯಿಂದಲೂ ಪಾಸಿಟಿವ್ ವೈಬ್ಸ್ ಬರ್ತಾ ಇದೆ, ನಾನು ಕೂಡ ತುಂಬಾ ಎಗ್ಸೈಟ್ ಆಗಿದ್ದೇನೆ ಎಂದು ಹೇಳಿದರು.
ಅರ್ಜುನ್ ಜನ್ಯ ಮಾತನಾಡಿ, ನನ್ನ ಲೈ್‌ನಲ್ಲೇ ದ ಬ್ಟೆ್ ಸಿನಿಮಾ ಇದು. ಭಾರತದ ಎಲ್ಲ ಬ್ಟೆ್ ಮ್ಯುಸಿಶಿಯ್ಸ್ ಪರ್‌ಾರ್ಮ್ ಮಾಡಿದ್ದಾರೆ. ಈ ಥರದ ಮ್ಯೂಸಿಕ್ ತೆಗೆಸೋದು ಪ್ರೇಮ್ ಕೈಲಷ್ಟೇ ಸಾಧ್ಯ ಎಂದು ಹೇಳಿದರು.