ಬೆಂಗಳೂರು,ಅ.15- ದುಬೈ ವಿಮಾನದ ಮೂಲಕ ಪಾಸ್ತಾ ಮಾಡುವ ಮಷೀನ್‍ನಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ನಗರಕ್ಕೆ ಬಂದ ಪ್ರಯಾಣಿಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ 35.37 ಲಕ್ಷ ಮËಲ್ಯದ 598 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣಕ್ಕೆ ದುಬೈನಿಂದ ಬಂದ ಪ್ರಯಾಣಿಕನೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಪಾಸ್ತಾ ಮಾಡುವ ಮಷೀನ್ ಪತ್ತೆಯಾಗಿದೆ. ಆ ಮಷೀನ್‍ನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸಿದಾಗ ಮಷೀನ್ ಮೂಲಕ ಅಕ್ರಮ ಚಿನ್ನ ಸಾಗಾಟ ಮಾಡುತ್ತಿರುವುದು ತಿಳಿದು ಮಷೀನ್‍ಗೆ ಅಳವಡಿಸಿದ್ದ ಬೋಲ್ಟ್ ಮತ್ತು ಸ್ಕ್ರೂ ಕೂಲಂಕುಷವಾಗಿ ಪರಿಶೀಲಿಸಿದಾಗ ಚಿನ್ನದಲ್ಲಿ ಅವುಗಳನ್ನು ಮಾಡಿಸಿ ಸಿಲ್ವರ್ ಕೋಟ್ ಮಾಡಿರುವುದು ಕಂಡುಬಂದಿದೆ.
ಪಾಕಿಸ್ತಾನ ಹೋರಾಟದ ಪ್ರವೃತ್ತಿ ತೋರಿಸಿಲ್ಲ : ರಮೀಜ್ ರಾಜಾ
ಕೂಡಲೆ ಆ ಮಷೀನ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ತೆರೆದು ಬರೊಬ್ಬರಿ 35,37,768 ರು. ಮೌಲ್ಯದ 598 ಗ್ರಾಂ ಚಿನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಪ್ರಯಾಣಿಕನನ್ನು ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.