Sunday, November 24, 2024
Homeರಾಷ್ಟ್ರೀಯ | Nationalಮುಂದಿನ ಐದು ವರ್ಷಗಳಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ವ್ಯವಸ್ಥೆ ಜಾರಿ : ರಾಜನಾಥ್‌ ಸಿಂಗ್‌

ಮುಂದಿನ ಐದು ವರ್ಷಗಳಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ವ್ಯವಸ್ಥೆ ಜಾರಿ : ರಾಜನಾಥ್‌ ಸಿಂಗ್‌

ಕುಶಿನಗರ (ಯುಪಿ), ಮೇ 30- ಪದೇ ಪದೇ ಚುನಾವಣೆಗಳು ದೇಶಕ್ಕೆ ಒಳ್ಳೆಯದಲ್ಲ ಮತ್ತು ಮುಂದಿನ ಐದು ವರ್ಷಗಳಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಇಂದಿಲ್ಲಿ ಹೇಳಿದ್ದಾರೆ. ಆಗಾಗ ನಡೆಯುವ ಚುನಾವಣೆಗಳು ಹೆಚ್ಚಿನ ಹೊರೆಯಾಗುತ್ತದೆ ಆದರಿಂದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ದೇಶಾದ್ಯಂತ ಒಟ್ಟಿಗೆ ನಡೆಸಬೇಕು ಎಂದು ಪ್ರಧಾನಿ ಮತ್ತು ಬಿಜೆಪಿ ಪಕ್ಷ ನಂಬುತ್ತದೆ ಎಂದು ಸಿಂಗ್‌ ಹೇಳಿದರು.

ಐದು ವರ್ಷಗಳಲ್ಲಿ ನಾವು ಒಂದು ರಾಷ್ಟ್ರ, ಒಂದು ಚುನಾವಣೆಗೆ ನಿಬಂಧನೆಗಳನ್ನು ಮಾಡಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ರಕ್ಷಣಾ ಸಚಿವರು ಕುಶಿನಗರದ ಬಿಜೆಪಿ ಅಭ್ಯರ್ಥಿ ವಿಜಯ್‌ ಕುಮಾರ್‌ ದುಬೆ ಅವರನ್ನು ಪರ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಂತಾಗಿದೆ ಎಂದು ಅವರು ಶ್ಲಾಘಿಸಿದರು.ಇಂದು, ಭಾರತ ಮಾತನಾಡುವಾಗ ಜಗತ್ತು ಕೇಳುತ್ತದೆ ಎಂದು ಅವರು ಹೇಳಿದರು, ಪಾಕಿಸ್ತಾನದ ರಾಜಕಾರಣಿಗಳು ಸಹ ಭಾರತವನ್ನು ಹೊಗಳುತ್ತಿದ್ದಾರೆ, ಆದರೆ ಕಾಂಗ್ರೆಸ್‌‍ ಮತ್ತು ಸಮಾಜವಾದಿ ಪಕ್ಷದ ಜನರಿಗೆ ಇದು ಅರ್ಥವಾಗುತ್ತಿಲ್ಲ. ಅವರು ವಿಚಾರವಿಲ್ಲದೆ ನರೇಂದ್ರ ಮೋದಿಯನ್ನು ವಿರೋಧಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಪ್ರಧಾನಿ ಮೋದಿಯವರಿಗೆ ಆ ಕೀರ್ತಿ ಸಲ್ಲುತ್ತದೆ ಮುಂದಿನ 2027 ರ ವೇಳೆಗೆ, ಆರ್ಥಿಕತೆಯ ದಷ್ಟಿಯಿಂದ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅವರು ಹೇಳಿದರು.

2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ, ಆದರೆ ನಮ ಸರ್ಕಾರ ಹೀಗೆಯೇ ಮುಂದುವರಿದರೆ, 2070 ರ ವೇಳೆಗೆ ಭಾರತವು ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಸಿಂಗ್‌ ಹೇಳಿದ್ದಾರೆ.

RELATED ARTICLES

Latest News