Friday, November 22, 2024
Homeರಾಜ್ಯಜೂನ್‌ 2, 4 ಮತ್ತು 6 ರಂದು ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ

ಜೂನ್‌ 2, 4 ಮತ್ತು 6 ರಂದು ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ

ಬೆಂಗಳೂರು, ಮೇ 31- ಎಂಎಲ್ಸಿ ಚುನಾವಣೆ ಮತ್ತು ಲೋಕಸಭೆ ಮತ್ತು ವಿಧಾನ ಪರಿಷತ್‌ ಚುನಾವಣೆಗಳ ಮತ ಎಣಿಕೆಯ ದೃಷ್ಟಿಯಿಂದ ರಾಜ್ಯಾದ್ಯಂತ ಐದು ದಿನಗಳ ಕಾಲ ಮದ್ಯ ಮಾರಾಟದ ಮೇಲೆ ಪರಿಣಾಮ ಬೀರಲಿದ್ದು, ಜೂನ್‌ 2, 4 ಮತ್ತು 6 ರಂದು ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಜೂನ್‌ 1 ಮತ್ತು ಜೂನ್‌ 3 ರಂದು ಭಾಗಶಃ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ.

ರಾಜ್ಯದಲ್ಲಿ ಲೋಕಸಭೆ ಚುನಾವಣೆ ಅಂಗವಾಗಿ ಏಪ್ರಿಲ್‌ 24 ರಿಂದ 26 ರವರೆಗೆ ಮದ್ಯ ಮಾರಾಟ ನಿಷೇಧದಿಂದ ಈಗಾಗಲೇ ತೀವ್ರ ಹೊಡೆತಕ್ಕೆ ತುತ್ತಾಗಿರುವ ಆಹಾರ ಮತ್ತು ಪಾನೀಯ (ಎ್‌‍ ಬಿ) ಉದ್ಯಮದಲ್ಲಿರುವವರಿಗೆ ಇದು ಮತ್ತೊಂದು ದೊಡ್ಡ ಹೊಡೆತ ಎಂದಿದ್ದಾರೆ.

ಒಟ್ಟು 5 ದಿನಗಳ ಕಾಲ ಮದ್ಯ ನಿಷೇಧ ಮಾಡಲಾಗಿದೆ. ಈ ಕುರಿತು ಆಯಾ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ. ಜೂನ್‌ 3 ರಂದು ವಿಧಾನ ಪರಿಷತ್‌ ಚುನಾವಣೆ ನಡೆಯಲಿದೆ. ಜೂನ್‌ 4 ರಂದು ಲೋಕಸಭಾ ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ಇನ್ನು ಜೂನ್‌ 6 ರಂದು ವಿಧಾನ ಪರಿಷತ್‌ ಚುನಾವಣೆ ಮತ ಎಣಿಕೆ ನಡೆಯಲಿದೆ. ಹೀಗಾಗಿ ಜೂನ್‌ 1 ರಿಂದ ಜೂನ್‌ 6ರ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಜೂನ್‌ 1 ರಿಂದ ಜೂನ್‌ 6ರ ವರೆಗೆ ಬಾರ್‌, ವೈನ್‌ ಶಾಪ್‌, ರೆಸ್ಟೋರೆಂಟ್‌, ಕ್ಲಬ್‌‍, ಹೊಟೆಲ್‌‍, ಅಂಗಡಿಗಳಲ್ಲಿ ಮದ್ಯ ಮಾರಾಟ, ಶೇಖರಣೆ ನಿಷೇಧಿಸಲಾಗಿದೆ.

ಜೂನ್‌ 03 ರಂದು ಪರಿಷತ್‌ ಚುನಾವಣೆಗೆ ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮತದಾನಕ್ಕೂ ಮುನ್ನ 48 ಗಂಟೆಗಳ ಕಾಲ ಅಂದರೆ ಜೂನ್‌ 1 ಮತ್ತು 2 ರಂದು ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಜೂನ್‌ 4 ಬಳಿಕ ಅಂದರೆ ಜೂನ್‌ 06 ರಂದು ವಿಧಾನ ಪರಿಷತ್‌ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜೂನ್‌ 6ರ ಸಂಜೆ 6 ಗಂಟೆವರೆಗೂ ಮದ್ಯ ಮಾರಾಟ ಬ್ಯಾನ್‌ ಆಗಲಿದೆ.

ಈ ಹಿನ್ನಲೆಯಲ್ಲಿ ನಿಗದಿತ ದಿನಗಳಲ್ಲಿ ಉತ್ಪಾದನೆ, ಮದ್ಯದ ಮಾರಾಟ, ವಿತರಣೆ, ಸಾಗಣೆ ಮತ್ತು ಸಂಗ್ರಹಣೆಗೆ ನಿಷೇಧ ಅನ್ವಯವಾಗಲಿದೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಜೂನ್‌ 1 ರಿಂದ 3 ಮತ್ತು ಜೂನ್‌ 6 ರವರೆಗೂ ನಿಷೇಧ ಅನ್ವಯ ಆಗಲಿದೆ. ನಿಷೇಧವು ಮದ್ಯದ ಅಂಗಡಿಗಳು, ವೈನ್‌ ಸ್ಟೋರ್‌ಗಳು, ಬಾರ್‌ಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಗ್ರಾಹಕರಿಗೆ ಮದ್ಯವನ್ನು ಪೂರೈಸುವ ಇತರ ಸ್ಥಳಗಳಿಗೆ ಇದು ಅನ್ವಯಿಸುತ್ತದೆ.

ಇನ್ನು, ಕರ್ನಾಟಕ ವಿಧಾನ ಪರಿಷತ್‌ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಬಹುತೇಕ ಜೂನ್‌ ಮೊದಲ ವಾರ ಮದ್ಯ ಮಾರಾಟ ನಿಷೇಧ ಇರಲಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಾರ್‌ ಹಾಗೂ ರೆಸ್ಟೋರೆಂಟ್‌ ಉದ್ಯಮಗಳ ಮಾಲೀಕರು, ಕಾನೂನು ಸಡಿಲಿಸುವಂತೆ ಆಗ್ರಹಿಸಿದ್ದಾರೆ.

ಮದ್ಯ ಮಾರಾಟ ನಿಷೇಧ ಮಾಡಿರುವುದರಿಂದ ಈ ಅವಧಿಯಲ್ಲಿ ಬಾರ್‌ ಹಾಗೂ ರೆಸ್ಟೋರೆಂಟ್‌ ಉದ್ಯಮಗಳಿಗೆ ಹೊಡೆತ ಬೀಳಲಿದೆ. ಒಂದು ವಾರಕ್ಕೆ ಅಬಕಾರಿ ಸುಂಕವಾಗಿ ಸರ್ಕಾರಕ್ಕೆ 100 ಕೋಟಿ ರೂಪಾಯಿ ಅಧಿಕ ಮೊತ್ತ ನಷ್ಟವಾಗಲಿದೆ. ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ನಿರ್ದಿಷ್ಟ ವ್ಯಾಪ್ತಿಗೆ ಮಾತ್ರ ನಿಷೇಧ ಜಾರಿ ಮಾಡಲಿ, ಸಾರ್ವತ್ರಿಕವಾಗಿ ಆಲ್ಕೋಹಾಲ್‌ ನಿಷೇಧಿಸಿದರೆ ಉದ್ಯಮದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರಲಿದೆ. ಹೀಗಾಗಿ ಒಂದು ವಾರದ ಡ್ರೈ ಡೇ ಆದೇಶ ವಾಪಾಸ್‌‍ ಪಡೆಯಲು ಹೋಟೆಲ್‌ ಸಂಘ ಮನವಿ ಮಾಡಿದೆ.

ಜೂನ್‌ 5 ರಂದು ಮದ್ಯ ಮಾರಾಟಕ್ಕೆ ಅವಕಾಶವಿದೆ. ಜೂನ್‌ 5 ರಂದು ಬೆಳಗ್ಗೆಯಿಂದ ನಿಗಽತ ಅವಧಿ ರಾತ್ರಿವರೆಗೆ ಮದ್ಯ ಮಾರಾಟ ನಡೆಯಲಿದೆ. ಜೂನ್‌ 6ರಂದು ವಿಧಾನ ಪರಿಷತ್‌ ಚುನಾವಣೆ ಮತ ಎಣಿಕೆ ನಡೆಯಲಿದೆ. ಹೀಗಾಗಿ ಜೂನ್‌ ರಂದು ಮತ್ತೆ ಮದ್ಯ ಮಾರಾಟಕ್ಕೆ ಬ್ರೀಕ್‌ ಬೀಳಲಿದೆ. ಜೂನ್‌ 6ರ ಮದ್ಯ ರಾತ್ರಿ 12 ಗಂಟೆ ತನಗ ನಿಷೇಧ ಮುಂದುವರಿಯಲಿದೆ.
ಇತ್ತ ಎಣ್ಣೆಪ್ರಿಯರು ಈಗಾಗಲೇ ಮದ್ಯದ ಅಂಗಡಿಗಳಲ್ಲಿ ಮುಗಿ ಬೀಳುತ್ತಿದ್ದಾರೆ. ಮತ್ತೆ 5 ದಿನ ಮದ್ಯ ಮಾರಾಟಕ್ಕೆ ಬ್ರೇಕ್‌ ಬೀಳಲಿರುವ ಹಿನ್ನಲೆಯಲ್ಲಿ ಇದೀಗ ಎಣ್ಣೆ ಪ್ರಿಯರು ಮದ್ಯದ ಅಂಗಡಿಗಳಿಗೆ ಧಾವಿಸುತ್ತಿದ್ದಾರೆ.

RELATED ARTICLES

Latest News