Tuesday, December 30, 2025
Homeರಾಷ್ಟ್ರೀಯಕಂದಕಕ್ಕೆ ಉರುಳಿದ ಬಸ್‌‍ ಉರುಳಿ ಬಿದ್ದು 9 ಮಂದಿ ಸಾವು

ಕಂದಕಕ್ಕೆ ಉರುಳಿದ ಬಸ್‌‍ ಉರುಳಿ ಬಿದ್ದು 9 ಮಂದಿ ಸಾವು

Morning Tragedy in Uttarakhand: Bus Falls Into Gorge, several feared dead

ಡೆಹ್ರಾಡೂನ್‌,ಡಿ.30- ಉತ್ತರಾಖಂಡದ ಅಲೋರಾ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಖಾಸಗಿ ಬಸ್‌‍ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 9 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ನೈನಿತಾಲ್‌ನ ರಾಮನಗರಕ್ಕೆ ಬಸ್‌‍ ತೆರಳುತ್ತಿದ್ದಾಗ ಭಿಕಿಯಾಸೈನ್‌ ಪ್ರದೇಶದ ವಿನಾಯಕ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ ಎಂದು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಬಸ್‌‍ನಲ್ಲಿ 18 ಪ್ರಯಾಣಿಕರಿದ್ದರು ಎಂದು ಅವರು ತಿಳಿದುಬಂದಿದ್ದು ಅದರಲ್ಲಿ 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಉಳಿದವರಿಗೂ ತೀವ್ರಗಾಯವಾಗಿದ್ದು ಪರಿಹಾರ ಕಾರ್ಯಾಚರಣೆ ಮಡಿ ಅವರನ್ನು ಭಿಕಿಯಾಸೈನ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾವಿನ ಸಂಖ್ಯೆ ಹಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೃತರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಮತ್ತು ಘಟನೆಗೆ ಕಾರಣ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.

RELATED ARTICLES

Latest News