ಬೆಂಗಳೂರು, ಡಿ.30- ಕೋಗಿಲು ಕ್ರಾಸ್ ಬಳಿಯ ಫಕೀರ್ ಬಡಾವಣೆಯ ಅನಧಿಕೃತ ಮನೆ ತೆರವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೋಟ್ಯಂತರ ರೂ. ಬೆಲೆ ಬಾಳುವ ಜಾಗ ಹೊಡೆಯಲು ಭೂಗಳ್ಳರು ರೂಪಿಸಿದ್ದ ಷಡ್ಯಂತ್ರಕ್ಕೆ ಅಮಾಯಕರು ಬಲಿಯಾಗಿದ್ದಾರೆ. ಒಟ್ಟು 15 ಎಕರೆ ಪ್ರದೇಶದ 5 ಎಕರೆ ಪ್ರದೇಶಕ್ಕೆ ಸುಳ್ಳು ದಾಖಲೆ ಸೃಷ್ಟಿ ಮಾಡಿ ಅನಧಿಕೃತವಾಗಿ ಮನೆ ನಿರ್ಮಾಣ ಮಾಡಲಾಗಿದೆ. ಕಳೆದ 15-20 ವರ್ಷಗಳಿಂದ ನಾವು ಇಲ್ಲಿ ವಾಸವಾಗಿದ್ದಿವಿ ಅಂತ ಸ್ಥಳೀಯರು ಹೇಳಿಕೆ ನೀಡಿದ್ದಾರೆ.
ಆದರೆ, ಅವರು ಕೇವಲ 3 ತಿಂಗಳ ಹಿಂದೆ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಗೂಗಲ್ ನಕ್ಷೆ ಸಾಕ್ಷಿಯಾಗಿದೆ.ಕೋಟ್ಯಂತರ ಬೆಲೆ ಬಾಳುವ ಜಾಗ ಲಾಪಟಯಿಸಲು ಸ್ಥಳೀಯರಿಂದ ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸುಮಾರು 15 ಎಕರೆ ಜಾಗದಲ್ಲಿ 5 ಎಕರೆ ಜಾಗದಲ್ಲಿ ಶೆಡ್, ಮನೆ ನಿರ್ಮಾಣದ ಹಿಂದೆ ಕಾಣದ ಕೈ ಕೈವಾಡವಿರುವ ಸಂಶಯ ವ್ಯಕ್ತವಾಗಿದೆ.
ಕಳೆದ 15-20 ವರ್ಷಗಳಿಂದ ಅಲ್ಪಸಂಖ್ಯಾತರು ಇಲ್ಲೆ ವಾಸವಾಗಿದ್ದಾರೆ ಅಂತ ಸಿಎಂ ಗೆ ತಪ್ಪು ಮಾಹಿತಿ ನೀಡಿದ್ದ ಪರಿಷತ್ ಸದಸ್ಯರೊಬ್ಬರು ಜಿಬಿಎ ಅಧಿಕಾರಿಗಳು ಹೇಳುವಂತೆ ಕೇವಲ 3 ವರ್ಷದಿಂದ ಇಲ್ಲಿ ವಾಸವಾಗಿದ್ದಾರೆ ಅನ್ನೋದಕ್ಕೆ ಸಾಕ್ಷಿ ನೀಡಿದರೆ ರಾಜಿನಾಮೆ ನೀಡುವುದಾಗಿ ಬೆದರಿಕೆ ಹಾಕಿ ಇದೀಗ ನಾಪತ್ತೆಯಾಗಿದ್ದಾರೆ.
ಮನೆ ಕಳೆದುಕೊಂಡ ನಿರಾಶ್ರಿತರ ದಾಖಲೆಗಳನ್ನು ಪರಿಶೀಲನೆ ಮಾಡಿ ಮನೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಹೀಗಾಗಿ ಜಿಬಿಎ, ಘನತ್ಯಾಜ್ಯ ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಬಂಡವಾಳ ಬಯಲಾಗಿದೆ.
ಈ ಪ್ರದೇಶದಲ್ಲಿ ಬಾಂಗ್ಲಾದೇಶದ ನಿರಾಶ್ರಿತರು, ಉತ್ತರಪ್ರದೇಶ ಹಾಗೂ ಬೀಹಾರ ಮೂಲದ ಜನ ಅನಧಿಕೃತವಾಗಿ ಮನೆ. ಶೆಡ್ ನಿರ್ಮಾಣ ಮಾಡಿರುವುದು ಕಂಡು ಬಂದಿದೆ. ಸುಮಾರು 187 ಕುಟುಂಬದ ಐಡಿ ಕಾರ್ಡ್, ರೇಷನ್ ಕಾರ್ಡ್. ಅಧಾರ್ ಕಾರ್ಡ್ ಪರಿಶೀಲನೆ ಮಾಡಿದಾಗ ಈ ಅಕ್ರಮ ಪತ್ತೆಯಾಗಿದೆ.
ಅನಧಿಕೃತವಾಗಿ ವಾಸವಾಗಿದ್ದ 187 ಕುಟುಂಬಗಳ್ಳಲ್ಲಿ ಕೇವಲ 50 ಮಂದಿ ಬಳಿ ಮಾತ್ರ ವಾಸದ ದೃಡಿಕರಣವಿದೆ. ಉಳಿದ 140 ಕ್ಕೂ ಹೆಚ್ಚು ಕುಟುಂಬದವರು ವಲಸೆ ಬಂದು ನೆಸಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.
ನಲವತ್ತರಿಂದ ಐವತ್ತು ಮಂದಿ ಮಾತ್ರ ಸ್ಥಳೀಯರು ಉಳಿದವರು ವಲಸಿಗರು ಅನ್ನೊ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿರುವ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸಿಎಂ ಆದೇಶದಂತೆ ನಾವು ಮಾಹಿತಿ ಕಲೆ ಹಾಕುತ್ತಿದ್ದೇವೆ ದೃಢಿಕರಣ ಇರುವವರಿಗೆ ರಾಜೀವ್‌ಗಾಂಧಿ ವಸತಿ ಯೋಜನೆ ಇಲ್ಲವೇ ಆಶ್ರಯ ಯೋಜನೆಯಡಿ ಮನೆ ಹಂಚಿಕೆ ಮಾಡುತ್ತೇವೆ ಎಂದು ಜಾರಿಕೊಂಡಿದ್ದಾರೆ.
