Tuesday, December 30, 2025
Homeರಾಜ್ಯಡ್ರಗ್ಸ್ ಫ್ಯಾಕ್ಟರಿ ಪತ್ತೆ ಪ್ರಕರಣ : ಮೂವರು ಪೊಲೀಸ್‌‍ ಇನ್ಸ್ ಪೆಕ್ಟರ್‌ಗಳ ಅಮಾನತು

ಡ್ರಗ್ಸ್ ಫ್ಯಾಕ್ಟರಿ ಪತ್ತೆ ಪ್ರಕರಣ : ಮೂವರು ಪೊಲೀಸ್‌‍ ಇನ್ಸ್ ಪೆಕ್ಟರ್‌ಗಳ ಅಮಾನತು

Drug factory discovery case: Three police inspectors suspended

ಬೆಂಗಳೂರು,ಡಿ.30- ನಗರದಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್‌‍ ಇನ್ಸ್ ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ. ಬೆಂಗಳೂರಿನ ಕೊತ್ತನೂರು ಠಾಣೆ ಇನ್‌್ಸಪೆಕ್ಟರ್‌ ಚೇತನ್‌ ಕುಮಾರ್‌, ಆವಲಹಳ್ಳಿ ಠಾಣೆಯ
ಇನ್‌್ಸಪೆಕ್ಟರ್‌ ರಾಮಕೃಷ್ಣ ರೆಡ್ಡಿ ಹಾಗೂ ಬಾಗಲೂರು ಠಾಣೆ ಇನ್‌್ಸಪೆಕ್ಟರ್‌ ಶಬರೀಶ್‌ ಅವರನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಅವರು ಆದೇಶ ಹೊರಡಿಸಿದ್ದಾರೆ.

ಇನ್ನು ಅಮನತುಗೊಂಡಿರುವ ಮೂರು ಠಾಣೆಯ ಇನ್‌್ಸಪೆಕ್ಟರ್‌ ಜಾಗಕ್ಕೆ ಹೊಸದಾಗಿ ಮೂವರು ಪ್ರಭಾರ ಇನ್‌್ಸಪೆಕ್ಟರ್‌ಗಳನ್ನು ನೇಮಿಕ ಮಾಡಲಾಗಿದೆ. ಈಶಾನ್ಯ ವಿಭಾಗ ಮಹಿಳಾ ಪೊಲೀಸ್‌‍ ಠಾಣೆ ಪಿಐ ವೆಂಕಟೇಶ್‌ ಅವರನ್ನು ಬಾಗಲೂರು ಠಾಣೆಗೆ ಪ್ರಭಾರ ಇನ್ಸ್ ಪೆಕ್ಟರ್‌ ಆಗಿ ನೇಮಿಸಲಾಗಿದೆ. ಸದ್ಯ ಕೆ.ಆರ್‌ ಪುರಂ ಠಾಣೆ ಇನ್ಸ್ ಪೆಕ್ಟರ್‌ ಆಗಿರುವ ರಾಮಮೂರ್ತಿ ಅವರನ್ನು ಆವಲಹಳ್ಳಿ ಠಾಣೆಗೆ ಪ್ರಾಭಾರಿಯಾಗಿ ನೇಮಕ ಮಾಡಲಾಗಿದೆ. ಸಂಪಿಗೆಹಳ್ಳಿ ಠಾಣೆ ಇನ್ಸ್ ಪೆಕ್ಟರ್‌ ಚಂದ್ರಶೇಖರ್‌ ಅವರನ್ನ ಕೊತ್ತನೂರು ಠಾಣೆಗೆ ಪ್ರಭಾರಿ ಇನ್‌್ಸಪೆಕ್ಟರ್‌ ಆಗಿ ನೇಮಿಸಲಾಗಿದೆ.

ಇತ್ತೀಚಿಗೆ ಮಹಾರಾಷ್ಟ್ರ ಎಎನ್‌ಟಿಎಫ್‌ನಿಂದ ಬೆಂಗಳೂರಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಸೀಜ್‌ ಮಾಡಿ, ಬರೋಬ್ಬರಿ 55.88 ಕೋಟಿ ರೂ. ಮೌಲ್ಯದ ಎಂಡಿ ಸಿಂಥೆಟಿಕ್‌ ಡ್ರಗ್ಸ್ ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆದು ನಾಲ್ವರು ಆರೋಪಿಗಳನ್ನುಬಂಧಿಸಿದ್ದರು.ಸದ್ಯ ನಾವು ಕೂಡ ಇದರ ಬಗ್ಗೆ ತನಿಖೆ ಮಾಡುತ್ತಿದ್ದು. ಯಾವ ಅಧಿಕಾರಿಗಳ ನಿರ್ಲಕ್ಷ ಇದೆಯೋ ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಆಯುಕ್ತರು ತಿಳಿಸಿದ್ದಾರೆ.

RELATED ARTICLES

Latest News