ಬೆಂಗಳೂರು,ಜೂ.4-ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಮೂವರು ಮುಖ್ಯಮಂತ್ರಿಗಳು ಗೆಲುವು ಸಾಧಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ(ಮಂಡ್ಯ), ಜಗದೀಶ್ ಶೆಟ್ಟರ್(ಬೆಳಗಾವಿ), ಬಸವರಾಜ ಬೊಮಾಯಿ(ಹಾವೇರಿ) ಅವರು ಜಯಗಳಿಸಿದ್ದಾರೆ. ಅದರಲ್ಲೂ ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ದಾಖಲೆಯ ಮತಗಳ ಅಂತರದಿಂದ ಗೆದ್ದಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಜೆಡಿಎಸ್ ಈ ಬಾರಿ ಜಿಲ್ಲೆಯಲ್ಲಿ ಏಳು ಶಾಸಕರಿದ್ದರೂ ಎಲ್ಲವನ್ನೂ ಮೆಟ್ಟಿ ಜೆಡಿಎಸ್ ಅಧಿಪತ್ಯ ಸಾಧಿಸಿರುವುದು ದಳಪತಿಗಳಿಗೆ ಹೊಸ ಟಾಕಿನ್ ನೀಡದಂತಾಗಿದೆ.2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಸ್ಪರ್ಧಿಸಿದ್ದರು. ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಕಣಕ್ಕಿಳಿದಿದ್ದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉಂಟಾದ ಸೋಲಿನ ಅನುಕಂಪ ಈ ಬಾರಿ ಜೆಡಿಎಸ್‌ನ ಕೈ ಹಿಡಿದಿರುವುದು ಸ್ಪಷ್ಟವಾಗಿದೆ. ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿ ಕಾಂಗ್ರೆಸ್‌ಗಿಂತ ಹೆಚ್ಚಿನ ಮತಗಳನ್ನು ಗಳಿಸಿದ್ದಾರೆ.ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತ್ತಿದ್ದ ಜಗದೀಶ್ ಶೆಟ್ಟರ್ ಕೊನೆ ಕ್ಷಣದಲ್ಲಿ ಬಿಜೆಪಿ ಸೇರಿದ್ದು ಫಲ ಕೊಟ್ಟಿದೆ.
ತವರು ಕ್ಷೇತ್ರ ಧಾರವಾಡ ಬಿಟ್ಟು ಬೆಳಗಾವಿಗೆ ವಲಸೆ ಹೋಗಿದ್ದ ಶೆಟ್ಟರ್‌ಗೆ ಪ್ರಾರಂಭದಲ್ಲಿ ಹಿನ್ನಡೆಯಾದರೂ ಎಲ್ಲವನ್ನು ಮೀರಿ ಗೆಲ್ಲುವ ಮೂಲಕ ಬಿಜೆಪಿ ಭದ್ರಕೋಟೆಯನ್ನು ಉಳಿಸಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಪ್ರಭಾವಿ ಸಚಿವೆಯಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ತಮ ಪುತ್ರ ಮೃಣಾಳ್ ಹೆಬ್ಬಾಳ್ಕರ್ ಅವರನ್ನು ಕಣಕ್ಕಿಳಿಸಿದ್ದರು. ಜಿಲ್ಲೆಯಲ್ಲಿ ಹಿಂದುತ್ವ ಮತ್ತು ಮರಾಠಿ ಮತಗಳು ಮತ್ತು ನರೇಂದ್ರಮೋದಿ ಅಲೆ ಜಗದೀಶ್ ಶೆಟ್ಟರ್ ಅವರನ್ನು ದಡ ಸೇರಿಸಿದೆ. ವಲ್ಲದ ಮನಸ್ಸಿನಿಂದಲೇ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಕೂಡ ಗೆಲುವು ಸಾಧಿಸಿದ್ದಾರೆ.