ಬೆಂಗಳೂರು,ಜೂ.4- ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿಯಾಗಿದ್ದಾರೆ. ವಿಜೇತ ಕಾಗೇರಿ ಅವರು 3,33,590 ಮತಗಳ ಅಂತರದಿಂದ ಗೆದ್ದಿದ್ದಾರೆ. ಒಟ್ಟು 7,77,887 ಮತಗಳು ಪಡೆದರೆ, ಕಾಂಗ್ರೆಸ್ ಅಂಜಲಿ ನಿಂಬಾಳ್ಕರ್ ಅವರು 4,43,296 ಮತಗಳನ್ನು ಪಡೆದಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು 2,84,620 ಮತಗಳ ಅಂತರದಿಂದ ಗೆದ್ದಿದ್ದಾರೆ.ರಾಜ್ಯದಲ್ಲಿ ಎರಡನೇ ಅತಿಹೆಚ್ಚು ಮತಗಳಿಂದ ಗೆದ್ದ ಅಭ್ಯರ್ಥಿ ಎಂಬ ಹೆಗ್ಗಳಿಕೆ ಕುಮಾರಸ್ವಾಮಿಗೆ ಸಲ್ಲುತ್ತದೆ. ಒಟ್ಟು 8,51,881 ಮತಗಳನ್ನು ಎಚ್‌ಡಿಕೆ ಪಡೆದರೆ, ಜೆಡಿಎಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರು 5,67,261 ಮತಗಳನ್ನು ಪಡೆದಿದ್ದಾರೆ.
ಬಾರೀ ಜಿದ್ದಾಜಿದ್ದಿನ ಕಣವಾಗಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು 2,68,094 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.
- ಗಯಾನಾದಲ್ಲಿ ರಾಮ ಭಜನೆ ಮಾಡಿದ ಪ್ರಧಾನಿ ಮೋದಿ
- 2025ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ
- ಪಡಿತರ ಚೀಟಿ ತಿದ್ದುಪಡಿಗಾಗಿ ನ್ಯಾಯಬೆಲೆ ಅಂಗಡಿ ಮುಂದೆ ಮುಗಿಬಿದ್ದ ಜನ
- 6 ತಿಂಗಳಿಂದ ಕ್ಯಾಂಟೀನ್ ಸಿಬ್ಬಂದಿಗೆ ಸಂಬಳ ನೀಡದ ‘ದಿವಾಳಿ ಸರ್ಕಾರ’ ಎಂದ ಜೆಡಿಎಸ್
- ಜಾರ್ಜಿಯಾದಲ್ಲಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಗುಂಡು ಹಾರಿ ತೆಲಂಗಾಣ ಮೂಲದ ವಿದ್ಯಾರ್ಥಿ ಸಾವು
ಒಟ್ಟು 10,75, 533 ಮತಗಳನ್ನು ಪಡೆದ ಡಾ.ಮಂಜುನಾಥ್ ಅವರು ತಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಿ.ಕೆ.ಸುರೇಶ್ ಅವರನ್ನು ಪರಾಭವಗೊಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 8,74,059 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಬಾಗಲಕೋಟೆ -ಬಿಜೆಪಿ- ಗದ್ದಿಗೌಡರ್ – 6,67,441
ಕಾಂಗ್ರೆಸ್ ಸಂಯುಕ್ತ ಪಾಟಿಲ್ -6,00,741
ಗೆಲುವಿನ ಅಂತರ- 66,700
ಬೆಂಗಳೂರು ಕೇಂದ್ರ -ಬಿಜೆಪಿ – ಪಿ.ಸಿ.ಮೋಹನ್- 6,14,800
ಕಾಂಗ್ರೆಸ್ -ಮನ್ಸೂರ್ ಅಲಿಖಾನ್ -608366
ಗೆಲುವಿನ ಅಂತರ- 35,000
ಬೆಂಗಳೂರು ಉತ್ತರ -ಬಿಜೆಪಿ- ಶೋಭಾ ಕರಂದ್ಲಾಜೆ – 9,15,553
ಕಾಂಗ್ರೆಸ್ -ಪ್ರೊ.ರಾಜುಗೌಡ-2,61,465
ಗೆಲುವಿನ ಅಂತರ -2,59,341
ಬೆಂಗಳೂರು ಗ್ರಾಮಾಂತರ -ಬಿಜೆಪಿ- ಡಾ.ಸಿ.ಎನ್.ಮಂಜುನಾಥ್ – 10,75,553
ಕಾಂಗ್ರೆಸ್- ಡಿ.ಕೆ.ಸುರೇಶ್ -807459
ಗೆಲುವಿನ ಅಂತರ -2,68,049
ಬೆಂಗಳೂರು ದಕ್ಷಿಣ -ಬಿಜೆಪಿ- ತೇಜಸ್ವಿ ಸೂರ್ಯ- 7,23,310
ಕಾಂಗ್ರೆಸ್- ಸೌಮ್ಯ ರೆಡ್ಡಿ-4,56,661
ಗೆಲುವಿನ ಅಂತರ – 2,65,649
ಬೆಳಗಾವಿ -ಬಿಜೆಪಿ-ಜಗದೀಶ್ ಶೆಟ್ಟರ್-63,53,72
ಕಾಂಗ್ರೆಸ್- ಮೃಣಾಳ್ ಹೆಬ್ಬಾಳ್ಕರ್-491657
ಗೆಲುವಿನ ಅಂತರ – 1,43,715
ಬಳ್ಳಾರಿ -ಬಿಜೆಪಿ- ಬಿ.ಶ್ರೀರಾಮುಲು- 6,20,127
ಕಾಂಗ್ರೆಸ್- ಬಿ.ತುಕಾರಾಂ-7,18,727
ಗೆಲುವಿನ ಅಂತರ – 98600
ಬೀದರ್ -ಬಿಜೆಪಿ- ಭಗವಂತ ಖೂಬಾ- 5,65,766
ಕಾಂಗ್ರೆಸ್- ಸಾಗರ್ ಈಶ್ವರ್ ಖಂಡ್ರೆ -6,65,162
ಗೆಲುವಿನ ಅಂತರ – 1,29,369
ಬಿಜಾಪುರ -ಬಿಜೆಪಿ- ರಮೇಶ್ ಜಿಣಜಿಣಗಿ- 651634
ಕಾಂಗ್ರೆಸ್- ರಾಜು ಅಲಗೂರು- 5,78,555
ಗೆಲುವಿನ ಅಂತರ – 73,129
ಚಾಮರಾಜನಗರ -ಕಾಂಗ್ರೆಸ್- ಸುನೀಲ್ ಬೋಸ್- 5,75,234
ಬಿಜೆಪಿ -ಬಾಲರಾಜ್.ಎಸ್- 444465
ಗೆಲುವಿನ ಅಂತರ – 130770
ಚಿಕ್ಕಬಳ್ಳಾಪುರ-ಬಿಜೆಪಿ-ಡಾ.ಕೆ.ಸುಧಾಕರ್- 819588
ಕಾಂಗ್ರೆಸ್- ಎಂ.ಎಸ್.ರಕ್ಷಾ ರಾಮಾನ್ಯ-657489
ಗೆಲುವಿನ ಅಂತರ – 162099
ಚಿಕ್ಕೋಡಿ -ಕಾಂಗ್ರೆಸ್- ಪ್ರಿಯಾಂಕ ಸತೀಶ್ ಜಾರಕಿಹೊಳಿ -627877
ಬಿಜೆಪಿ- ಅಣ್ಣಾ ಸಾಹೇಬ್ ಜೊಲ್ಲೆ-531823
ಗೆಲುವಿನ ಅಂತರ – 96,054
ಚಿತ್ರದುರ್ಗ- ಬಿಜೆಪಿ- ಗೋವಿಂದ ಕಾರಜೋಳ-684890
ಕಾಂಗ್ರೆಸ್- ಬಿ.ಎನ್.ಚಂದ್ರಪ್ಪ – 636769
ಗೆಲುವಿನ ಅಂತರ – 48121
ದಕ್ಷಿಣಕನ್ನಡ-ಬಿಜೆಪಿ- ಕ್ಯಾಪ್ಟನ್ ಬ್ರಿಜೇಶ್ ಚೌಟ- 764132
ಕಾಂಗ್ರೆಸ್- ಪದರಾಜ್ ಪೂಜಾರಿ-614924
ಗೆಲುವಿನ ಅಂತರ – 149202
ದಾವಣಗೆರೆ -ಕಾಂಗ್ರೆಸ್- ಪ್ರಭಾ ಮಲ್ಲಿಕಾರ್ಜುನ್- 573788
ಬಿಜೆಪಿ- ಗಾಯತ್ರಿ ಸಿದ್ದೇಶ್ವರ್-552702
ಗೆಲುವಿನ ಅಂತರ – 21086
ಧಾರವಾಡ -ಬಿಜೆಪಿ- ಪ್ರಹ್ಲಾದ್ ಜೋಷಿ- 713649
ಕಾಂಗ್ರೆಸ್- ವಿನೋದ್ ಅಸುಟಿ-617616
ಗೆಲುವಿನ ಅಂತರ – 96033
ಕಲಬುರಗಿ -ಕಾಂಗ್ರೆಸ್- ರಾಮಕೃಷ್ಣ ದೊಡ್ಡಮನಿ – 652321
ಬಿಜೆಪಿ- ಡಾ.ಉಮೇಶ್.ಜೆ. ಜಾಧವ್ -625116
ಗೆಲುವಿನ ಅಂತರ – 27205
ಹಾಸನ -ಕಾಂಗ್ರೆಸ್- ಶ್ರೇಯಸ್ ಎನ್.ಪಟೇಲ್- 6,70,274
ಜೆಡಿಸ್-ಪ್ರಜ್ವಲ್ ರೇವಣ್ಣ -626536
ಗೆಲುವಿನ ಅಂತರ – 43738
ಹಾವೇರಿ -ಬಿಜೆಪಿ-ಬಸವರಾಜ ಬೊಮಾಯಿ- 705538
ಕಾಂಗ್ರೆಸ್- ಆನಂದ್ ಸ್ವಾಮಿಗದ್ದಿದೇವರ ಮಠ್-662025
ಗೆಲುವಿನ ಅಂತರ – 43,513
ಕೋಲಾರ-ಜೆಡಿಎಸ್- ಕೆ.ಮಲ್ಲೇಶ್ ಬಾಬು- 691481
ಕಾಂಗ್ರೆಸ್- ಕೆ.ವಿ.ಗೌತಮ್-620093
ಗೆಲುವಿನ ಅಂತರ – 71388
ಕೊಪ್ಪಳ -ಕಾಂಗ್ರೆಸ್- ಕೆ.ರಾಜಶೇಖರ್ ಬಸವರಾಜ್ ಯತ್ನಾಳ್- 6,33,480
ಬಿಜೆಪಿ-ಡಾ.ಬಸವರಾಜ್ -590030
ಗೆಲುವಿನ ಅಂತರ – 43450
ಮಂಡ್ಯ -ಜೆಡಿಎಸ್- ಎಚ್.ಡಿ.ಕುಮಾರಸ್ವಾಮಿ- 851881
ಕಾಂಗ್ರೆಸ್- ವೆಂಕಟರಮಣಗೌಡ-567261
ಗೆಲುವಿನ ಅಂತರ -284620
ಮೈಸೂರು-ಕೊಡುಗು -ಬಿಜೆಪಿ- ಯದುವೀರ್ ಒಡೆಯರ್ -795503
ಕಾಂಗ್ರೆಸ್- ಎಂ.ಲಕ್ಷ್ಮಣ- 656241
ಗೆಲುವಿನ ಅಂತರ – 139262
ರಾಯಚೂರು -ಕಾಂಗ್ರೆಸ್- ಜಿ.ಕುಮಾರ್ ನಾಯಕ್-642212
ಬಿಜೆಪಿ- ರಾಜ ಅಮರೇಶ್ ನಾಯಕ್- 563065
ಗೆಲುವಿನ ಅಂತರ – 79147
ಶಿವಮೊಗ್ಗ -ಬಿಜೆಪಿ-ಬಿ.ವೈ.ರಾಘವೇಂದ್ರ-778721
ಕಾಂಗ್ರೆಸ್-ಗೀತಾ ಶಿವರಾಜ್‌ಕುಮಾರ್-535006
ಗೆಲುವಿನ ಅಂತರ -243715
ತುಮಕೂರು -ಬಿಜೆಪಿ-ವಿ.ಸೋಮಣ್ಣ-720946
ಕಾಂಗ್ರೆಸ್-ಎಸ್.ಪಿ.ಮುದ್ದಹನುಮೇಗೌಡ-545352
ಗೆಲುವಿನ ಅಂತರ – 175594
ಉಡುಪಿಚಿಕ್ಕಮಗಳೂರು-ಬಿಜೆಪಿ-ಕೋಟಾ ಶ್ರೀನಿವಾಸ್‌ಪೂಜಾರಿ- 716569
ಕಾಂಗ್ರೆಸ್-ಜಯಪ್ರಕಾಶ್ ಹೆಗಡೆ -463498
ಗೆಲುವಿನ ಅಂತರ – 253079
ಉತ್ತರಕನ್ನಡ-ಬಿಜೆಪಿ-ವಿಶ್ವೇಶ್ವರ ಹೆಗಡೆ ಕಾಗೇರಿ-777887
ಕಾಂಗ್ರೆಸ್- ಡಾ.ಅಂಜಲಿ ನಿಂಬಾಳ್ಕರ್-443296
ಗೆಲುವಿನ ಅಂತರ -334591