Tuesday, December 30, 2025
Homeರಾಜ್ಯಕರ್ನಾಟಕದಲ್ಲೂ ಎಸ್‌‍ಐಆರ್‌ಗೆ ಶೋಭಾ ಕರಂದ್ಲಾಜೆ ಆಗ್ರಹ

ಕರ್ನಾಟಕದಲ್ಲೂ ಎಸ್‌‍ಐಆರ್‌ಗೆ ಶೋಭಾ ಕರಂದ್ಲಾಜೆ ಆಗ್ರಹ

Shobha Karandlaje demands SIR in Karnataka too

ಬೆಂಗಳೂರು,ಡಿ.30- ದೇಶದಾದ್ಯಂತ ಕೇಂದ್ರ ಚುನಾವಣಾ ಆಯೋಗ ಕೈಗೆತ್ತಿಕೊಂಡಿರುವ ವಿಶೇಷ ಮತದಾರರ ಪರಿಷ್ಕರಣೆ (ಎಸ್‌‍ಐಆರ್‌)ಯನ್ನು ಕರ್ನಾಟಕ ದಲ್ಲೂ ನಡೆಸಬೇಕೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.ಈಗಾಗಲೇ ಚುನಾವಣಾ ಆಯೋಗ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಪ್ರಕ್ರಿಯೆಯನ್ನು ಆರಂಭಿಸಿದೆ. ಕರ್ನಾಟಕದಲ್ಲೂ ಇದು ತುರ್ತಾಗಿ ನಡೆಯಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಎಸ್‌‍ಐಆರ್‌ ಬಂದರೆ ನಿಜವಾದ ಮತದಾರರು ಯಾರು, ಅವರು ಎಲ್ಲಿಂದ ಬಂದವರು, ಅವರ ಹಿನ್ನೆಲೆ ಏನು ಸೇರಿದಂತೆ ಎಲ್ಲಾ ವಿವರಗಳೂ ಲಭ್ಯವಾಗುತ್ತಿವೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ಆದಷ್ಟು ಶೀಘ್ರ ಪತ್ರ ಬರೆದು ಮನವಿ ಮಾಡುವುದಾಗಿ ತಿಳಿಸಿದರು.

ರಾಜಧಾನಿ ಬೆಂಗಳೂರಿಗೆ ಹೊರ ರಾಜ್ಯಗಳು ಹಾಗೂ ಬೇರೆ ದೇಶಗಳಿಂದ ಬಂದು ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಹಾಗೂ ಪಡಿತರ ಚೀಟಿ ಪಡೆದುಕೊಂಡಿರುವವರನ್ನು ತಕ್ಷಣವೇ ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಗರ ಪೊಲೀಸ್‌‍ ಆಯುಕ್ತರಿಗೆ ಒತ್ತಾಯಿಸಿದ್ದಾರೆ.

ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬಂದು ನಗರದ ಅನೇಕ ಕಡೆ ನೆಲೆಸಿದ್ದಾರೆ. ಕೆಲವು ಕಡೆ ರೋಹಿಂಗ್ಯಾಗಳು ಕೂಡ ಇದ್ದಾರೆ. ಅವರನ್ನು ಪತ್ತೆ ಮಾಡಿ ಇವರ ಬಳಿ ಇರುವ ಗುರುತಿನ ಚೀಟಿಗಳನ್ನು ವಿಚಾರಣೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ಹೊರದೇಶಗಳು ಮತ್ತು ಬೇರೆ ರಾಜ್ಯಗಳಿಂದ ಬಂದವರಿಗೆ ಕೆಲವರು ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಿ ಕೊಟ್ಟಿದ್ದಾರೆ. ಇದು ದುರುಪಯೋಗವಾಗುವ ಸಾಧ್ಯತೆ ಇದೆ. ಹೀಗಾಗಿ ನಗರ ಪೊಲೀಸ್‌‍ ಆಯುಕ್ತರು ತಕ್ಷಣವೇ ಪರಿಶೀಲಿಸಿ ವಶಕ್ಕೆ ಪಡೆಯಬೇಕೆಂದು ಮನವಿ ಮಾಡಿದರು.

ಬೆಂಗಳೂರಿನ ಅಮೀನ್‌ಕರೆ ಹಾಗೂ ಇತರ ಪ್ರದೇಶಗಳಲ್ಲಿ ಅಕ್ರಮ ವಲಸಿಗರಿದ್ದಾರೆ ನೀವು ಯಾವಾಗ ವಲಸಿಗರ ಪಟ್ಟಿ ಸಿದ್ಧಪಡಿಸುತ್ತೀರಿ?, ಸರ್ಕಾರಗಳು ಬದಲಾಗಬಹುದು. ಆದರೆ ಅಧಿಕಾರಿಗಳು ಬದಲಾಗುವುದಿಲ್ಲ. ನೀವು ಆ ಕೆಲಸ ಮಾಡದಿದ್ದರೆ ಅಕ್ರಮ ವಲಸಿಗರು ಮತ್ತು ರೋಹಿಂಗ್ಯಾಗಳು ಬೆಂಗಳೂರು ತುಂಬಿ ಬಿಡುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಹತ್ತು ವರ್ಷಗಳ ಹಿಂದೆ ಕಂಟೋನೆಂಟ್‌ ರೈಲ್ವೆ ನಿಲ್ದಾಣದಲ್ಲಿ ಯುವಕರ ಗುಂಪು ಬಂದಿತ್ತು. ಅವರನ್ನು ನಾವು ಪ್ರಶ್ನೆ ಮಾಡಿದಾಗ ನಮ ಮೇಲೆ ಹಲ್ಲೆ ನಡೆಸಿದರು. ಅಂದು ಆ ಎಲ್ಲರನ್ನೂ ಇಂದಿನ ಸಚಿವ ಜಮೀರ್‌ ಅಹಮದ್‌ ಅವರು ತಮ ಒಡೆತನದ ನ್ಯಾಷನಲ್‌ ಬಸ್‌‍ನಲ್ಲಿ ಕರೆದುಕೊಂಡು ಹೋದರು. ಬಾಂಗ್ಲಾದಿಂದ ಬಂದಿದ್ದ ಅಕ್ರಮ ಒಳ ನುಸುಳುಕೋರರಗೆ ಸಚಿವರೆ ಆಶ್ರಯ ಕೊಡಿಸುತ್ತಾರೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕೆಂದು ಶೋಭಾ ಒತ್ತಾಯ ಮಾಡಿದರು.

ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ವೋಟ್‌ ಬ್ಯಾಂಕ್‌ ಬೇಕು. ಹಾಗಾಗಿ ಕೋಗಿಲು ಲೇಔಟ್‌ನಲ್ಲಿ ಅಕ್ರಮ ವಲಸಿಗರಿಗೆ ಸಹಾಯ ಮಾಡುತ್ತಿದ್ದಾರೆ. ಕನ್ನಡಿಗರ ಕೀ ಅನ್ನು ವಲಸಿಗರಿಗೆ ಕೊಡಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.

ವಸತಿ ಸಚಿವ ಜಮೀರ್‌ ಅಹಮದ್‌ ವಿರುದ್ಧ ತೀರ ವಾಗ್ದಾಳಿ ನಡೆಸಿದ ಶೋಭಾ ಕರಂದ್ಲಾಜೆ, ಜಮೀರ್‌ ಅಹಮದ್‌ ಖಾನ್‌ ಅವರೇ ಕರ್ನಾಟಕದಲ್ಲಿ ನೀವು ಎಷ್ಟು ಜನರಿಗೆ ಮತದಾರರ ಗುರುತಿನ ಚೀಟಿ, ಬಿಪಿಎಲ್‌ ಕಾರ್ಡ್‌ ಮಾಡಿಸಿಕೊಟ್ಟಿದ್ದೀರಿ ಹೇಳಿ. ನೀವೆಲ್ಲ ಸೇರಿಕೊಂಡು ಕರ್ನಾಟಕದ ಚಿತ್ರಣವನ್ನು ಬದಲಾಯಿಸಲು ಹೊರಟಿದ್ದೀರಾ. ಪಶ್ಚಿಮ ಬಂಗಾಳದ ರೀತಿ ಕರ್ನಾಟಕವನ್ನು ವಲಸಿಗರ ರಾಜ್ಯ ಮಾಡಲು ಸಂಚು ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಯಾರು ಮುಖ್ಯಮಂತ್ರಿ? ಇಲ್ಲಿ ಯಾರು ಸರ್ಕಾರ ನಡೆಸುತ್ತಾರೆ ಎಂಬುದೇ ಯಾರಿಗೂ ಅರ್ಥವಾಗುತ್ತಿಲ್ಲ. ಈ ಸರ್ಕಾರದ ಮೂಗುದಾರ ಎಲ್ಲಿದೆ? ದೆಹಲಿಯಿಂದ ನಿರ್ದೇಶನ ಬರುತ್ತಿದ್ದಂತೆ ಸಿಎಂ ಹಾಗೂ ಡಿಸಿಎಂ ಎದ್ದೋ ಬಿದ್ದವರಂತೆ ವಲಸಿಗರಿಗೆ ಮನೆ ನಿರ್ಮಿಸಿ ಕೊಡಲು ಮುಂದಾಗಿದ್ದಾರೆ ಇದು ತುಷ್ಟೀಕರಣದ ಪರಮಾವಧಿಯಲ್ಲವೇ? ಎಂದು ಪ್ರಶ್ನೆ ಮಾಡಿದರು.

RELATED ARTICLES

Latest News