Wednesday, December 31, 2025
Homeಜಿಲ್ಲಾ ಸುದ್ದಿಗಳುಭದ್ರಾ ಅಭಯಾರಣ್ಯದಲ್ಲಿ ಬ್ಲ್ಯಾಕ್ ಪ್ಯಾಂಥರ್ ಪ್ರತ್ಯಕ್ಷ..!

ಭದ್ರಾ ಅಭಯಾರಣ್ಯದಲ್ಲಿ ಬ್ಲ್ಯಾಕ್ ಪ್ಯಾಂಥರ್ ಪ್ರತ್ಯಕ್ಷ..!

Black Panther Spotted in Bhadra Sanctuary..!

ಚಿಕ್ಕಮಗಳೂರು, ಡಿ.31- ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ ಅಪರೂಪದ ಕಪ್ಪು ಚಿರತೆ (ಬ್ಲ್ಯಾಕ್ ಪ್ಯಾಂಥರ್‌) ಕಾಣಿಸಿಕೊಂಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸುಮಾರು ಇಪ್ಪತ್ತು ವರ್ಷಗಳ ನಂತರ ಭದ್ರಾ ಅಭಯಾರಣ್ಯದಲ್ಲಿ ಬ್ಲಾಕ್ ಪ್ಯಾಂಥರ್ ಪತ್ತೆಯಾಗಿರುವುದು ವಿಶೇಷ. ಸುಮಾರು 492.2 ಚದರ ಕಿಲೋ ಮೀಟರ್‌ ವ್ಯಾಪ್ತಿಯಲ್ಲಿನ ಭದ್ರಾ ಅಭಯಾರಣ್ಯವು ಲಕ್ಷಾಂತರ ವನ್ಯಜೀವಿಗಳ ಆಶ್ರಯ ತಾಣವಾಗಿದೆ.

ಪ್ರವಾಸಿಗರೊಬ್ಬರ ಕ್ಯಾಮೆರಾದಲ್ಲಿ ಬ್ಲಾ ್ಯಕ್‌ ಪ್ಯಾಂಥರ್‌ ಮತ್ತು ಚಿರತೆ ಸೆರೆಯಾಗಿದ್ದು, ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.ಕಪ್ಪು ಚಿರತೆಯನ್ನು ನೋಡಿ ಪ್ರವಾಸಿಗರು ಫಿದಾ ಆಗಿದ್ದು, ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಂತಸ ಪಟ್ಟಿದ್ದಾರೆ. ಕಳೆದ ಎರಡು ದಶಕಗಳಿಂದ ಅರಣ್ಯಾಧಿಕಾರಿಗಳು, ವಾಚರ್‌ಗಳು ಮತ್ತು ಗಾರ್ಡ್‌ಗಳಿಗೂ ಕಾಣಿಸಿಕೊಳ್ಳದ ಈ ಕಪ್ಪು ಚಿರತೆ, ಕಳೆದೊಂದು ವಾರದಲ್ಲಿ ಹಲವು ಬಾರಿ ಪ್ರತ್ಯಕ್ಷವಾಗಿದೆಯಂತೆ.

ಈ ಬ್ಲ್ಯಾಕ್ ಪ್ಯಾಂಥರ್‌ಅನ್ನು ಸಾಮಾನ್ಯವಾಗಿ ಕಪ್ಪು ಚಿರತೆ ಎಂದೇ ಕರೆಯುತ್ತಾರೆ. ಈ ಅಪರೂಪದ ಪ್ರಾಣಿಯ ಗೋಚರವೂ ಭದ್ರಾ ಅಭಯಾರಣ್ಯದ ಜೀವವೈವಿಧ್ಯದ ಶ್ರೀಮಂತಿಕೆಗೆ ಮತ್ತಷ್ಟು ಮೆರುಗು ನೀಡಿದೆ. ವರ್ಷಪೂರ್ತಿ ನಿರಂತರವಾಗಿ ಮಳೆಯಾಗಿರುವುದರಿಂದ ಅರಣ್ಯ ಪ್ರದೇಶ ಸಮೃದ್ಧವಾಗಿದೆ. ಹಾಗಾಗೇಬ್ಲ್ಯಾಕ್ ಪ್ಯಾಂಥರ್‌ ಗೋಚರವಾಗಿದೆ ಎಂದು ಹೇಳಲಾಗಿದೆ.

RELATED ARTICLES

Latest News