ಆನಂದ್, ಜೂ.7 (ಪಿಟಿಐ) – ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಗುಜರಾತಿನ ಆನಂದ್ ಜಿಲ್ಲೆಯ ಮಹಿಸಾಗರ್ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೇಸಿಗೆ ಕಾಲದಲ್ಲಿ ಜನಪ್ರಿಯ ಪ್ರವಾಸಿ ತಾಣವಾಗಿರುವ ಖಾನ್‌ಪುರ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿಂದ ಹರಿಯುವ ಮಹಿಸಾಗರ ನದಿಯ ನೀರಿನಲ್ಲಿ ಸ್ನಾನ ಮಾಡಲು ಜನರು ಸೇರುತ್ತಿದ್ದರು ಎಂದು ಆನಂದ್ ಜಿಲ್ಲೆಯ ಖಂಬೋಲಾಜ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಮ್ಡಿ ಗ್ರಾಮದ ಒಂದು ಕುಟುಂಬದ ನಾಲ್ವರು ಪ್ರವಾಸಿಗರಲ್ಲಿ ನದಿಯಲ್ಲಿ ಸ್ನಾನ ಮಾಡಲು ಬಂದಿದ್ದರು. ಅವರಲ್ಲಿ ಒಬ್ಬರು ಮುಳುಗಲು ಪ್ರಾರಂಭಿಸಿದಾಗ, ಇತರ ಮೂವರು ಆ ವ್ಯಕ್ತಿಯನ್ನು ರಕ್ಷಿಸಲು ನೀರಿನಲ್ಲಿ ಆಳಕ್ಕೆ ಇಳಿದರು. ಆದರೆ, ಅವರೆಲ್ಲರೂ ಅಂತಿಮವಾಗಿ ಮುಳುಗಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರೂ, ಸಂತ್ರಸ್ತರ ಶವಗಳನ್ನು ಮಾತ್ರ ತೆಗೆಯಲು ತಡವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಮತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆಕಸಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತರನ್ನು ಸುರೇಶ್ ವಘೇಲಾ, ಪ್ರಕಾಶ್ ವಘೇಲಾ, ವೆಸುಬೆನ್ ಸೋಲಂಕಿ ಮತ್ತು ಜ್ಯೋತಿ ವಘೇಲಾ ಎಂದು ಗುರುತಿಸಲಾಗಿದೆ.ಜೂನ್ 2 ರಂದು ಆನಂದ್ ಪಟ್ಟಣ ಮತ್ತು ಲಂಬ್ವೆಲ್ ಗ್ರಾಮದ ಇಬ್ಬರು ವ್ಯಕ್ತಿಗಳು ನೀರಿನ ಆಳವನ್ನು ನಿರ್ಣಯಿಸಲು ಸಾಧ್ಯವಾಗದೆ ಅದೇ ಸ್ಥಳದಲ್ಲಿ ಇದೇ ರೀತಿಯಲ್ಲಿ ಸಾವನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.