Saturday, November 23, 2024
Homeರಾಷ್ಟ್ರೀಯ | Nationalಸ್ವತಂತ್ರ ಅಭ್ಯರ್ಥಿ ಸೇರ್ಪಡೆ ಮೂಲಕ ಸೆಂಚುರಿ ಬಾರಿಸಿದ ಕಾಂಗ್ರೆಸ್‌‍

ಸ್ವತಂತ್ರ ಅಭ್ಯರ್ಥಿ ಸೇರ್ಪಡೆ ಮೂಲಕ ಸೆಂಚುರಿ ಬಾರಿಸಿದ ಕಾಂಗ್ರೆಸ್‌‍

ನವದೆಹಲಿ,ಜೂ.7– ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷ ಸೆಂಚುರಿ ಭಾರಿಸಿದೆ.ಚುನಾವಣಾ ಫಲಿತಾಂಶದಲ್ಲಿ 99 ಸ್ಥಾನ ಪಡೆದಿದ್ದ ಕಾಂಗ್ರೆಸ್‌‍ ಪಕ್ಷಕ್ಕೆ ಸ್ವತಂತ್ರ ಅಭ್ಯರ್ಥಿಯೊಬ್ಬರು ಸೇರ್ಪಡೆಯಾಗುವ ಮೂಲಕ ಶತಕ ಬಾರಿಸುವಲ್ಲಿ ಕೈ ಪಕ್ಷ ಯಶಸ್ವಿಯಾಗಿದೆ.

ಮಹಾರಾಷ್ಟ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿರುವ ಕಾಂಗ್ರೆಸ್‌‍ ಬಂಡಾಯಗಾರ ವಿಶಾಲ್‌ ಪಾಟೀಲ್‌ ಮಾತೃ ಪಕ್ಷಕ್ಕೆ ಮರಳುವುದಾಗಿ ಘೋಷಿಸಿದ್ದಾರೆ.ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಸಂತದಾದಾ ಪಾಟೀಲ್‌ ಅವರ ಮೊಮಗ ವಿಶಾಲ್‌ ಪಾಟೀಲ್‌ ಅವರು ಸಾಂಗ್ಲಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸಂಜಯ್‌ ಪಾಟೀಲ್‌ ಅವರನ್ನು ಸೋಲಿಸಿದರು.

ಮಹಾರಾಷ್ಟ್ರ ವಿಕಾಸ್‌‍ ಅಘಾಡಿ (ಎಂವಿಎ) ಪಾಲುದಾರರ ನಡುವೆ ಸೀಟು ಹಂಚಿಕೆ ವ್ಯವಸ್ಥೆಯಲ್ಲಿ ಸಾಂಗ್ಲಿ ಸಂಸದೀಯ ಸ್ಥಾನವನ್ನು ಶಿವಸೇನೆ-ಯುಬಿಟಿಗೆ ನಿಯೋಜಿಸಿದ ನಂತರ ಅವರು ಬಂಡಾಯವೆದ್ದು ಸ್ವತಂತ್ರವಾಗಿ ಸ್ಪರ್ಧಿಸಿದ್ದರು.ಎಕ್ಸ್ ನಲ್ಲಿ ಪೋಸ್ಟ್‌ ಮಾಡಿದ ಎಐಸಿಸಿ ಅಧ್ಯಕ್ಷ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಸಾಂಗ್ಲಿಯಿಂದ ಚುನಾಯಿತ ಸಂಸದ ವಿಶಾಲ್‌ ಪಾಟೀಲ್‌ ಕಾಂಗ್ರೆಸ್‌‍ ಪಕ್ಷಕ್ಕೆ ಮರಳಿರುವುದನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.

ಉದ್ಧವ್‌ ಠಾಕ್ರೆ ಸೇನಾ ಬಣದ ಸೀಟು ಒಪ್ಪಂದಕ್ಕೆ ಮುಂಚೆಯೇ ತನ್ನದೇ ಅಭ್ಯರ್ಥಿಯನ್ನು ಘೋಷಿಸಿದ ಕ್ರಮವು ಮಹಾರಾಷ್ಟ್ರ ವಿರೋಧ ಪಕ್ಷದ ಮೈತ್ರಿಯಲ್ಲಿ ಸ್ವಲ್ಪ ಘರ್ಷಣೆಯನ್ನು ಉಂಟುಮಾಡಿತ್ತು. ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕಾಂಗ್ರೆಸ್‌‍ ಪದೇ ಪದೇ ಶಿವಸೇನೆಗೆ ಮನವಿ ಮಾಡಿತ್ತು.

ವಿಶಾಲ್‌ ಪಾಟೀಲ್‌ ಮತ್ತು ವಿಶ್ವಜಿತ್‌ ಕದಂ ನಿನ್ನೆ ಖರ್ಗೆ ಮತ್ತು ಕಾಂಗ್ರೆಸ್‌‍ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರನ್ನು ಭೇಟಿಯಾದರು ಮತ್ತು ಸ್ವತಂತ್ರ ಸಂಸದರು ಪಕ್ಷಕ್ಕೆ ತಮ ಬೆಂಬಲ ಪತ್ರವನ್ನು ನೀಡಿದರು.

RELATED ARTICLES

Latest News