Wednesday, December 31, 2025
Homeಬೆಂಗಳೂರುಹೊಸ ವರ್ಷಾಚರಣೆ : ಬೆಂಗಳೂರಲ್ಲಿ ಇಂದು ಮಧ್ಯ ರಾತ್ರಿವರೆಗೆ ಮೆಟ್ರೋ ಸೇವೆ ವಿಸ್ತರಣೆ

ಹೊಸ ವರ್ಷಾಚರಣೆ : ಬೆಂಗಳೂರಲ್ಲಿ ಇಂದು ಮಧ್ಯ ರಾತ್ರಿವರೆಗೆ ಮೆಟ್ರೋ ಸೇವೆ ವಿಸ್ತರಣೆ

New Year Celebrations: Metro services extended till midnight in Bengaluru

ಬೆಂಗಳೂರು, ಡಿ.31- ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಇಂದು ರಾತ್ರಿ ಮೆಟ್ರೋ ಸೇವೆಯನ್ನು ಮಧ್ಯ ರಾತ್ರಿವರೆಗೆ ವಿಸ್ತರಿಸಲಾಗಿದೆ.ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್‌‍ ಹಸಿರು, ನೇರಳೆ ಹಾಗೂ ಹಳದಿ ಮಾರ್ಗದ ಮೆಟ್ರೋ ಸೇವೆ ವಿಸ್ತರಣೆ ಮಾಡಿದೆ. ಪ್ರತಿ 8 ನಿಮಿಷಗಳ ಅಂತರದಲ್ಲಿ ಮೆಟ್ರೋ ಸಂಚಾರ ಇರಲಿದೆ.

ಹಳದಿ ಮಾರ್ಗದಲ್ಲಿ 15 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚಾರ. ಎಂ.ಜಿ ರಸ್ತೆಯಲ್ಲಿ ಹೆಚ್ಚಿನ ಜನಸಂದಣಿ ಇರುವುದರಿಂದ ಇಂದು ರಾತ್ರಿ 10 ಗಂಟೆಗೆ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಕ್ಲೋಸ್‌‍ ಮಾಡಲಾಗುವುದು.

ಆದರೆ ರೈಲುಗಳು ಟ್ರಿನಿಟಿ ಹಾಗೂ ಕಬ್ಬನ್‌ ಪಾರ್ಕ್‌ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿವೆ. ಜನದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ ಟೋಕನ್‌ ಮಾರಾಟ ಇರುವುದಿಲ್ಲ. ಟ್ರಿನಿಟಿ ಹಾಗೂ ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣಗಳಲ್ಲಿ ರಾತ್ರಿ 11ರ ನಂತರ ಟೋಕನ್‌ ಮಾರಾಟ ಇರುವುದಿಲ್ಲ.

ಈ ನಿಲ್ದಾಣಗಳಿಂದ ರಾತ್ರಿ 11 ಗಂಟೆಯ ನಂತರ ಕ್ಯೂಆರ್‌ ಟಿಕೆಟ್‌ಗಳ ಪಡೆಯಬಹುದು. ಮುಂಗಡವಾಗಿ ರಿಟರ್ನ್‌ ಟಿಕೆಟ್‌ ಖರೀದಿಸುವಂತೆ ಹಾಗೂ ಸಾಕಷ್ಟು ಸ್ಮಾರ್ಟ್‌ ಕಾರ್ಡ್‌ ಬಳಕೆಗೆ ಸೂಚನೆ ನೀಡಲಾಗಿದೆ.

RELATED ARTICLES

Latest News