Sunday, November 24, 2024
Homeರಾಷ್ಟ್ರೀಯ | Nationalಪ್ರಧಾನಿ ಮೋದಿ ಹೊಸ ಸಂಪುಟದಲ್ಲಿ ಯುವಕರು , ಅನುಭವಿಗಳು, ಪರಿಣಿತರು

ಪ್ರಧಾನಿ ಮೋದಿ ಹೊಸ ಸಂಪುಟದಲ್ಲಿ ಯುವಕರು , ಅನುಭವಿಗಳು, ಪರಿಣಿತರು

ನವದೆಹಲಿ, ಜೂ.9- ಪ್ರಧಾನಿ ನರೇಂದ್ರ ಮೋದಿ ಅವರ 72 ಸದಸ್ಯರ ಸಚಿವ ಸಂಪುಟದಲ್ಲಿರುವ 30 ಕ್ಯಾಬಿನೆಟ್‌ ಮಂತ್ರಿಗಳ ಪೈಕಿ ಆರು ಮಂದಿ ವಕೀಲರು, ಮೂವರು ಎಂಬಿಎ ಪದವಿ ಪಡೆದವರು ಮತ್ತು 10 ಸ್ನಾತಕೋತ್ತರ ಪದವೀಧರರು.

ಕ್ಯಾಬಿನೆಟ್‌ ಸಚಿವರಾದ ನಿತಿನ್‌ ಗಡ್ಕರಿ, ಜೆಪಿ ನಡ್ಡಾ, ಪಿಯೂಷ್‌ ಗೋಯಲ್‌‍, ಸರ್ಬಾನಂದ ಸೋನೋವಾಲ್‌‍, ಭೂಪೇಂದರ್‌ ಯಾದವ್‌ ಮತ್ತು ಕಿರಣ್‌ ರಿಜಿಜು ಸೇರಿದಂತೆ ಆರು ಮಂದಿ ಕಾನೂನು ಪದವಿಗಳನ್ನು ಹೊಂದಿದ್ದಾರೆ.

ರಾಜನಾಥ್‌ ಸಿಂಗ್‌, ಶಿವರಾಜ್‌ ಸಿಂಗ್‌ ಚೌಹಾಣ್‌‍, ನಿರ್ಮಲಾ ಸೀತಾರಾಮನ್‌, ಎಸ್‌‍ ಜೈಶಂಕರ್‌, ಧರ್ಮೇಂದ್ರ ಪ್ರಧಾನ್‌, ಡಾ ವೀರೇಂದ್ರ ಕುಮಾರ್‌ ಮನ್ಸುಖ್‌ ಮಾಂಡ್ವಿಯಾ, ಹರ್ದೀಪ್‌ ಸಿಂಗ್‌ ಪುರಿ, ಅನ್ನಪೂರ್ಣ ದೇವಿ ಮತ್ತು ಗಜೇಂದ್ರ ಸಿಂಗ್‌ ಶೇಖಾವತ್‌ ಅವರು ಸ್ನಾತಕೋತ್ತರ ಪದವೀಧರರಾಗಿದ್ದಾರೆ.

ಮನೋಹರ್‌ ಲಾಲ್‌‍, ಎಚ್‌ ಡಿ ಕುಮಾರಸ್ವಾಮಿ, ಜಿತನ್‌ ರಾಮ್‌ ಮಾಂಝಿ, ರಾಜೀವ್‌ ರಂಜನ್‌ ಅಲಿಯಾಸ್‌‍ ಲಾಲನ್‌ ಸಿಂಗ್‌‍, ಪ್ರಲ್ಹಾದ್‌ ಜೋಶಿ ಮತ್ತು ಗಿರಿರಾಜ್‌ ಸಿಂಗ್‌ ಪದವೀಧರರು. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಮೈತ್ರಿ ಸರ್ಕಾರದಲ್ಲಿ ಯುವಜನತೆ ಮತ್ತು ಅನುಭವಕ್ಕೆ ಒತ್ತು ನೀಡುವ 72 ಸದಸ್ಯರ ಕೇಂದ್ರ ಸಚಿವ ಸಂಪುಟದ ನೇತೃತ್ವದ ದಾಖಲೆ ಸಮನಾದ ಮೂರನೇ ಅವಧಿಗೆ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸುಪ್ರಸಿದ್ಧ ರಾಜಕೀಯ ಕುಟುಂಬಗಳಿಂದ ಆರು ಮಂದಿಯೊಂದಿಗೆ 33 ಮಂದಿ ಮೊದಲ ಬಾರಿಗೆ ಸಚಿವರಾಗಿದ್ದಾರೆ ಇವರಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳಾದ ಚೌಹಾಣ್‌ (ಮಧ್ಯಪ್ರದೇಶ), ಖಟ್ಟರ್‌ (ಹರಿಯಾಣ) ಮತ್ತು ಕುಮಾರಸ್ವಾಮಿ (ಕರ್ನಾಟಕ) ಸೇರಿದ್ದಾರೆ. ಕೇರಳದಿಂದ ಬಿಜೆಪಿಯ ಮೊದಲ ಲೋಕಸಭಾ ಸಂಸದರಾಗುವ ಮೂಲಕ ಇತಿಹಾಸವನ್ನು ಬರೆದ ನಟ-ಪರಿವರ್ತಿತ ರಾಜಕಾರಣಿ ಸುರೇಶ್‌ ಗೋಪಿ ಕೂಡ ಹೊಸ ಮುಖಗಳನ್ನು ಒಳಗೊಂಡಿದ್ದರು.

ಪ್ರಧಾನಿ ಸೇರಿದಂತೆ ಮೋದಿ ಮಂತ್ರಿ ಮಂಡಳ ಸಂಖೆ 81ಕ್ಕೆ ಸೀಮಿತ ಆದರೆ ಈಗ ಒಂದೇ ಭಾರಿಗೆ 72 ಸಚಿವರು ಅಧಿಕಾರ ವಹಿಸಿಕೊಂಡಿದ್ದು,ಇದು ದೊಡ್ಡ ಸಂದೇಶ ಹಾಗು ಕೆಲಸದ ವೇಗ ಮುಂದುವರೆಸುವ ಗುಣ ಎಂದು ಹೇಳಲಾಗುತ್ತಿದೆ.

RELATED ARTICLES

Latest News