Sunday, October 6, 2024
Homeರಾಷ್ಟ್ರೀಯ | National3ನೇ ಬಾರಿಗೆ ಪ್ರಧಾನಿಯಾದ ನಂತರ ಮೊದಲ ಕಡತಕ್ಕೆ ಮೋದಿ ಸಹಿ, ರೈತರಿಗೆ ಗಿಫ್ಟ್

3ನೇ ಬಾರಿಗೆ ಪ್ರಧಾನಿಯಾದ ನಂತರ ಮೊದಲ ಕಡತಕ್ಕೆ ಮೋದಿ ಸಹಿ, ರೈತರಿಗೆ ಗಿಫ್ಟ್

ನವದೆಹಲಿ,ಜೂ.10- ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿಯವರು ರೈತರಿಗೆ ಪಾವತಿಸುವ ಕಿಸಾನ್‌ ನಿಧಿಯ ಹಣ ಬಿಡುಗಡೆ ಕಡತಕ್ಕೆ ಸಹಿ ಹಾಕುವ ಮೂಲಕ ರೈತ ಕಲ್ಯಾಣದ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.

ಎನ್‌ಡಿಎ ನೂತನ ಸರ್ಕಾರದ ಮೊದಲ ನಿರ್ಧಾರವಾಗಿ ಕಿಸಾನ್‌ ಸಮಾನ್‌ ನಿಧಿಗೆ ಪ್ರಧಾನಿ ಇಂದು ಸಹಿ ಹಾಕಿದ್ದು, ದೇಶದ 9.3 ಕೋಟಿ ರೈತರಿಗೆ 17ನೇ ಕಂತಿನ 20 ಸಾವಿರ ಕೋಟಿ ರೂ.ಗಳು ಹಂಚಿಕೆಯಾಗುತ್ತಿದೆ.

18ನೇ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ನಿನ್ನೆ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಎನ್‌ಡಿಎ ಮೈತ್ರಿಕೂಟದಲ್ಲಿ 22 ಮಂದಿ ಸಚಿವರನ್ನೊಳಗೊಂಡ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸತತವಾಗಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ ದಾಖಲೆ ಬರೆದಿರು ಪ್ರಧಾನಿ ನರೇಂದ್ರ ಮೋದಿಯವರು ರೈತ ಕಲ್ಯಾಣಕ್ಕಾಗಿ ತಮ ಬದ್ಧತೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ಕೃಷಿ ಹಾಗೂ ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮರಹಿತವಾಗಿ ಕೆಲಸ ಮಾಡುವ ಬದ್ಧತೆಯನ್ನು ಪ್ರಧಾನಿ ಮುಂದುವರೆಸಿದ್ದಾರೆ ಎಂದು ಕಚೇರಿ ಮೂಲಗಳು ತಿಳಿಸಿವೆ.

RELATED ARTICLES

Latest News