ವಾಷಿಂಗ್ಟನ್, ಡಿ.31- ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ಮೊಮ್ಮಗಳು ಹಾಗೂ ಖ್ಯಾತ ಪತ್ರಕರ್ತೆ ಟಟಿಯಾನಾ ಶ್ಲೋ ಸ್‌ಬರ್ಗ್ ತಮ್ಮ 35ನೇ ವಯಸ್ಸಿನಲ್ಲಿ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ
.
ಟಟಿಯಾನಾ ಇಂದು ಬೆಳಗ್ಗೆ ನಿಧನರಾದರು. ಅವರು ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತಾರೆ ಎಂದು ಕೆನಡಿ ಕುಟುಂಬದ ಜೆಎಫ್‌ಕೆ ಲೈಬ್ರರಿ ಫೌಂಡೇಶನ್‌ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ ಹಾಕಲಾಗಿದೆ.ಟಟಿಯಾನಾ ಅವರು ಶ್ಲೋಸ್‌ಬರ್ಗ್ ವಿನ್ಯಾಸಕ ಎಡ್ವಿನ್ ಶ್ಲೋಸ್‌ಬರ್ಗ್ ಮತ್ತು ರಾಜತಾಂತ್ರಿಕ ಕ್ಯಾರೋಲಿನ್ ಕೆನಡಿ ಅವರ ಪುತ್ರಿ.
ನಾನು ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ಇತ್ತೀಚೆಗೆ ಟಟಿಯಾನಾ ಹೇಳಿಕೊಂಡಿದ್ದರು. ಒಂದು ವರ್ಷಕ್ಕಿಂತ ಕಡಿಮೆ ಅವಧಿ ವರೆಗೆ ಬದುಕಿರುತ್ತೇನೆಂದು ಇತ್ತೀಚೆಗೆ ಹೇಳಿಕೊಂಡಿದ್ದರು.ಕೀಮೋಥೆರಪಿ ಮತ್ತು ಮೂಳೆ ಮಜ್ಜೆಯ ಕಸಿ ಸೇರಿದಂತೆ ತಾನು ಪಡೆದ ಚಿಕಿತ್ಸೆಗಳನ್ನು ಶ್ಲೋಸ್‌ಬರ್ಗ್ ವಿವರಿಸಿದ್ದರು.
ಇವರ ಕುಟುಂಬದ ಸದಸ್ಯರು ದುರಂತಗಳಿಂದಲೇ ಸಾವಿಗೀಡಾಗುತ್ತಿರುವುದು ವಿಶೇಷವಾಗಿದೆ. ಆಕೆಯ ಅಜ್ಜ, ಅಮೆರಿಕ ಅಧ್ಯಕ್ಷ ಕೆನಡಿ 1963 ರಲ್ಲಿ ಹತ್ಯೆಗೀಡಾಗಿದ್ದರು. ಆಕೆಯ ಚಿಕ್ಕಪ್ಪ, ಜಾನ್ ಎಫ್. ಕೆನಡಿ ಜೂನಿಯರ್ 1999 ರಲ್ಲಿ ವಿಮಾನ ಅಪಘಾತದಲ್ಲಿ ನಿಧನರಾಗಿದ್ದರು.
