Friday, November 22, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-06-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-06-2024)

ನಿತ್ಯ ನೀತಿ :
ಪ್ರಪಂಚದಲ್ಲಿ ಕಂಡಿದ್ದೆಲ್ಲ ನಿಜವಾಗುವಂತಿದ್ದರೆ ಮಿಥ್ಯದ ಉಗಮವು ಆಗುತ್ತಿರಲಿಲ್ಲ. ಸತ್ಯದ ಹುಡುಕಾಟವೂ ನಡೆಯುತ್ತಿರಲಿಲ್ಲ. ಸೃಷ್ಟಿಯ ಸಂರಚನೆಯೇ ವಿಭಿನ್ನ.

ಪಂಚಾಂಗ : ಮಂಗಳವಾರ, 11-06-2024
ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಆಶ್ಲೇಷಾ / ಯೋಗ: ವ್ಯಾಘಾತ / ಕರಣ: ಕೌಲವ

ಸೂರ್ಯೋದಯ – ಬೆ.05.53
ಸೂರ್ಯಾಸ್ತ – 06.46
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30

ರಾಶಿಭವಿಷ್ಯ :
ಮೇಷ
: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದು ಕೊಳ್ಳಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.
ವೃಷಭ: ಮಕ್ಕಳಿಂದ ಸಂತಸ ಸಿಗಲಿದೆ.
ಮಿಥುನ: ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಅವಕಾಶಗಳಿವೆ.

ಕಟಕ: ಅಮೂಲ್ಯ ವಸ್ತುವಿನ ಕಳ್ಳತನವಾಗಲಿದೆ.
ಸಿಂಹ: ಇತರರ ಮಾತು ಕೇಳಿ ನಿರ್ಧಾರ ಕೈಗೊಳ್ಳದಿರುವುದು ಬಹಳ ಒಳಿತು.
ಕನ್ಯಾ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದು ಕೊಳ್ಳುವ ಸಾಮರ್ಥ್ಯವನ್ನು ಹೊಂದುತ್ತೀರಿ.

ತುಲಾ: ಶ್ರಮ ಹೆಚ್ಚಿದ್ದರೂ ದುಡಿಮೆ ಲಾಭದಾಯಕ ವಾಗಿರುತ್ತದೆ.
ವೃಶ್ಚಿಕ: ಬುದ್ಧಿಹೀನರಾಗಿ ವರ್ತಿಸುವಿರಿ. ಉಪನ್ಯಾಸಕ ವೃತ್ತಿಯವರಿಗೆ ನಷ್ಟ.
ಧನುಸ್ಸು: ಹೊಸ ಜನರ ಸಂಪರ್ಕ ಮಾಡಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಿ.

ಮಕರ: ಅಜೀರ್ಣ ಮತ್ತು ಉದರಕ್ಕೆ ಸಂಬಂಧಿಸಿದ ಅನಾರೋಗ್ಯ ಎದುರಾಗಲಿದೆ.
ಕುಂಭ: ಜವಾಬ್ದಾರಿ ಸ್ವೀಕರಿಸುವ ಮೊದಲು ಅದನ್ನು ನಿಭಾಯಿಸುವ ಬಗ್ಗೆ ಯೋಚಿಸಿ.
ಮೀನ: ಪತ್ನಿ ಸಹಕಾರದಿಂದ ಕೆಲಸ-ಕಾರ್ಯಗಳು ಸುಗಮವಾಗಿ ನೆರವೇರಲಿವೆ.

RELATED ARTICLES

Latest News