ಬೆಂಗಳೂರು,ಜೂ.13- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 100 ಕ್ಕೆ 100 ರಷ್ಟು ನಿಷ್ಪಕ್ಷಪಾತ ತನಿಖೆ ನಡೆಯಲಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಯಾವ ಪ್ರಭಾವಕ್ಕೂ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆದಿದೆ. ಅದೇ ರೀತಿ ದರ್ಶನ್ ಪ್ರಕರಣದಲ್ಲೂ ನ್ಯಾಯೋಚಿತವಾದ ತನಿಖೆ ನಡೆಯಲಿದೆ ಎಂದು ಹೇಳಿದರು.
ಪೊಲೀಸರ ತನಿಖೆ ಒಂದು ಹಂತ. ಅನಂತರ ಅದು ನ್ಯಾಯಾಲಯಕ್ಕೆ ತಲುಪಲಿದೆ. ಶಿಕ್ಷೆ ಕೊಡುವುದು, ಜಾಮೀನು ನೀಡುವುದು, ಮಾನ್ಯತೆ ಕೊಡುವುದು ಅಂತಿಮವಾಗಿ ನ್ಯಾಯಾಲಯ ಎಂದರು.ದರ್ಶನ್ ಪ್ರಕರಣದಲ್ಲಿ ಯಾವ ಪ್ರಭಾವಿಗಳ ಹಸ್ತಕ್ಷೇಪವೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.