Friday, November 22, 2024
Homeಅಂತಾರಾಷ್ಟ್ರೀಯ | Internationalಭಾರತದ ಚುನಾವಣೆಯನ್ನು ಹಾಡಿಹೊಗಳಿದ ಅಮೆರಿಕ

ಭಾರತದ ಚುನಾವಣೆಯನ್ನು ಹಾಡಿಹೊಗಳಿದ ಅಮೆರಿಕ

ವಾಷಿಂಗ್ಟನ್‌, ಜೂ.14 (ಪಿಟಿಐ) ಭಾರತದ ಚುನಾವಣೆಯನ್ನು ಹೊಗಳಿರುವ ಅಮೆರಿಕ ಇತಿಹಾಸದಲ್ಲಿ ಯಾವುದೇ ಸಮಯದಲ್ಲಿ ಯಾವುದೇ ದೇಶದಲ್ಲಿ ಚುನಾವಣಾ ಆಯೋಗ ನಡೆಸಿರುವ ಅತಿದೊಡ್ಡ ಕಸರತ್ತು ಎಂದು ಬಣ್ಣಿಸಿದೆ.

ಲೋಕಸಭೆಯ ಎಲ್ಲಾ 543 ಸದಸ್ಯರನ್ನು ಆಯ್ಕೆ ಮಾಡಲು ಏಳು ಹಂತಗಳಲ್ಲಿ ಏಪ್ರಿಲ್‌ 19 ರಿಂದ ಜೂನ್‌ 1 ರವರೆಗೆ ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲಾಯಿತು. ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತತ್ವದ ರಾಷ್ಟ್ರೀಯ ಪ್ರಜಾಸತ್ತಾತಕ ಒಕ್ಕೂಟ (ಎನ್‌ಡಿಎ) ಚುನಾವಣೆಯಲ್ಲಿ ಜಯಗಳಿಸಿತು ಮತ್ತು ನರೇಂದ್ರ ಮೋದಿ ಅವರು ಜೂನ್‌ 9 ರಂದು ದಾಖಲೆಯ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಭಾರತದಲ್ಲಿ ನಡೆದ ಚುನಾವಣೆಯನ್ನು ನಾವು ಸಂಭ್ರಮಿಸುತ್ತೇವೆ; ಇದು ಇತಿಹಾಸದಲ್ಲಿ ಯಾವುದೇ ದೇಶದಲ್ಲಿ ಚುನಾವಣಾ ಫ್ರಾಂಚೈಸಿ ನಡೆಸುವ ಅತಿದೊಡ್ಡ ಕಸರತ್ತು ಎಂದು ವಿದೇಶಾಂಗ ಇಲಾಖೆ ವಕ್ತಾರ ವ್ಯಾಥ್ಯೂ ಮಿಲ್ಲರ್‌ ತಮ ದೈನಂದಿನ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇತ್ತೀಚಿನ ಚುನಾವಣಾ ಫಲಿತಾಂಶಗಳು ಮತ್ತು ಭಾರತೀಯ ಸಂಸತ್ತಿನಲ್ಲಿ ಮುಸ್ಲಿಮರ ಪ್ರಾತಿನಿಧ್ಯದ ಪ್ರಶ್ನೆಗೆ ಅವರು ಅದನ್ನು ಭಾರತದ ಜನರು ನಿರ್ಧರಿಸಬೇಕು ಎಂದು ಪ್ರತಿಪಾದಿಸಿದರು.ಈ ವರ್ಷ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ 24 ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದಾರೆ, ಆದರೆ ಯಾರೂ ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಗೆದ್ದಿಲ್ಲ.

RELATED ARTICLES

Latest News