ಬೆಂಗಳೂರು,ಅ.17- ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಸ ವಿಲೇವಾರಿ ಘಟಕಗಳ ಸ್ಥಾಪನೆಗೆ ಬಿಬಿಎಂಪಿ ಹುಡುಕಾಟ ನಡೆಸಿದ್ದಾರೆ. ಬಿಬಿಎಂಪಿಯ ಈ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ನಗರದಲ್ಲಿ ದಿನೇ ದಿನೇ ಕಸದ ಸಮಸ್ಯೆ ಉಲ್ಬಣಗೊಳ್ಳುತ್ತಿರುವುದರಿಂದ ಬೆಂಗಳೂರಿನ ಅಕ್ಕಪಕ್ಕದ ತಾಲೂಕುಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಜಾಗ ಹುಡುಕಾಟ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಪ್ರತಿ ನಿತ್ಯ ನಗರದಲ್ಲಿ 1600 ರಿಂದ 1700 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಕಸ ವಿಲೇವಾರಿಗೆ ಸಮಸ್ಯೆ ಉಂಟಾಗಿರುವುದರಿಂದ ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಹುಡುಕಾಟ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಿಂತಿದ್ದ ಬೈಕ್‍ಗೆ ಟ್ಯಾಂಕರ್ ಡಿಕ್ಕಿ, ಅವಳಿ ಸಹೋದರಿಯರ ಸಾವು
ಬಿಬಿಎಂಪಿಯ ಈ ನಿರ್ಧಾರಕ್ಕೆ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ರಾಜಧಾನಿ ಕಸವನ್ನು ನಮ್ಮ ಪ್ರದೇಶಗಳಿಗೆ ತರಬೇಡಿ ತಂದರೆ ಭಾರಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸದ್ಯ ಬೆಂಗಳೂರಿನ ಏಳು ಸಂಸ್ಕರಣ ಘಟಕಗಳಿವೆ ಇದರ ಜತೆ ನಗರದ 2ಎರಡು ಭಾಗದಲ್ಲಿ ಲ್ಯಾಂಡ್ ಫಿಲಿಂಗ್ ಸಹ ಮಾಡಲಾಗುತ್ತಿದೆ.
ಮಿಟಗಾನ ಹಳ್ಳಿ ಹಾಗೂ ಬೆನ್ನಿಗಾನ ಹಳ್ಳಿಯಲ್ಲಿ ಕಸವನ್ನು ಡಂಪ್ ಮಾಡಲಾಗುತ್ತಿದೆ. ಇದೀಗಾ ಹೊಸದಾಗಿ ನಗರದ ಹೊರ ವಲಯದ ನಾಲ್ಕು ಭಾಗದಲ್ಲಿ ಹೊಸ ಜಾಗ ಹುಡುಕಾಟಕ್ಕೆ ಬಿಬಿಎಂಪಿ ಮುಂದಾಗಿದೆ. ನೆಲಮಂಗಲ, ಯಲಹಂಕ, ಬಿಡದಿ ಹಾಗೂ ರಾಮನಗರದಲ್ಲಿ ಕಸ ಸಂಸ್ಕರಣ ಘಟಕ ನಿರ್ಮಾಣಕ್ಕೆ ಬಿಬಿಎಂಪಿ ಲೆಕ್ಕಚಾರ ಹಾಕಿರುವ ವಿಚಾರ ತಿಳಿದಿರುವ ಅಲ್ಲಿನ ಸ್ಥಳೀಯರು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸದ್ಯ ಇರುವ ಏಳು ಸಂಸ್ಕರಣ ಘಟಕಗಳ ಸಂಸ್ಕರಣ ಸಾಮಥ್ರ್ಯ ಕಡಿಮೆಯಾಗಿದೆ ಈ ಸಂಸ್ಕರಣ ಘಟಕಗಳು ಸಾರ್ವಜನಿಕ ವಲಯದಲ್ಲಿದ್ದು ಸಾರ್ವಜನಿಕರಿಂದ ಘಟಕಗಳ ತೆರವಿಗೆ ಆಕ್ರೋಶ ಹೆಚ್ಚಾಗಿದೆ ಹೀಗಾಗಿ ಮುಂದಿನ ದಿನಗಳಲ್ಲಿ ಕಸ ಉತ್ಪಾದನೆ ಹೆಚ್ಚಾಗುವುದನ್ನು ಗಮನವಿರಿಸಿ ಹೊರವಲಯಗಳಲ್ಲಿ ಹೊಸ ಘಟಕಗಳ ಸ್ಥಾಪನೆಗೆ ಬಿಬಿಎಂಪಿ ಮುಂದಾಗಿದೆ. ಆದರಲ್ಲೂ ನೆಲಮಂಗಲ, ಬಿಡದಿ, ರಾಮನಗರ, ಯಲಹಂಕ ಭಾಗದಲ್ಲಿ ಸಂಸ್ಕರಣ ಘಟಕ ಸ್ಥಾಪಿಸಿ ಪ್ರತಿ ಘಟಕದಲ್ಲಿ 1000 ಟನ್ ಸಾಮಥ್ರ್ಯದ ಕಸ ಸಂಸ್ಕರಣೆ ಮಾಡುವ ಉದ್ದೇಶವನ್ನು ಬಿಬಿಎಂಪಿ ಹೊಂದಿದೆ ಎನ್ನಲಾಗಿದೆ.
ಈ ಘಟಕಗಳಲ್ಲಿ ಲ್ಯಾಂಡ್ ಫಿಲಿಂಗ್ ಮಾಡಲ್ಲ ಸಂಸ್ಕರಣ ಘಟಕ ಮಾಡ್ತಿವಿ. ಕಸವನ್ನು ಡಂಪ್ ಮಾಡೋದಿಲ್ಲ ಕಸವನ್ನು ವೇಸ್ಟ್ ಟೂ ಎನರ್ಜಿಯಾಗಿ ಸಂಸ್ಕರಣೆ ಮಾಡ್ತಿವಿ. ಒಂದೇ ಕಡೆ ಸಂಸ್ಕರಣ ಘಟಕ ಮಾಡಿದ್ರೆ ಸಾಗಾಣಿಕೆ ವೆಚ್ಚ ಹೆಚ್ಚಾಗುತ್ತೆ ಎನ್ನುತ್ತಾರೆ ತುಷಾರ್ ಗಿರಿನಾಥ್.
ವಿಷ ಅನಿಲ ಉತ್ಪಾದನೆ ಮಾಡದ, ನೆಲ ಜಲಕ್ಕೆ ಹಾನಿ ಮಾಡದ ಡ್ರೈ ಕಸ ಮಾತ್ರ ಲ್ಯಾಂಡ್ ಫಿಲಿಂಗ್ ಮಾಡಲು ನಿರ್ಧಾರ ಮಾಡಿದ್ದೇವೆ ಎನ್ನುತ್ತಾರೆ ಅವರು ಆದರೆ ಅವರ ಮಾತನ್ನು ನಂಬಲು ಸಾಧ್ಯವಿಲ್ಲ. ನಮ್ಮ ಭಾಗದಲ್ಲಿ ಯಾವುದೆ ಘಟಕ ಬೇಡ ಎನ್ನುತ್ತಿದ್ದಾರೆ ನಗರದ ಸುತ್ತಮುತ್ತಲಿನ ಜನ. ಇದೀಗ ಎದುರಾಗಿರುವ ಈ ಸಮಸ್ಯೆಗೆ ಸರ್ಕಾರ ಯಾವ ರೀತಿ ಬಗೆಹರಿಸಿ ನಗರದ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದೋ ಕಾದು ನೋಡಬೇಕಿದೆ.