Friday, November 22, 2024
Homeರಾಷ್ಟ್ರೀಯ | Nationalಕೇರಳದಲ್ಲಿ ಭೂ ಕಂಪನ

ಕೇರಳದಲ್ಲಿ ಭೂ ಕಂಪನ

ತ್ರಿಶೂರ್‌, ಜೂ. 15 (ಪಿಟಿಐ) ತ್ರಿಶೂರ್‌ ಮತ್ತು ಪಾಲಕ್ಕಾಡ್‌ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಇಂದು ಭೂಮಿ ಕಂಪಿಸಿದೆ. ರಿಕ್ಟರ್‌ ಮಾಪಕದಲ್ಲಿ 3.0 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ ಎಂದು ಅಧಿಕತ ಮೂಲಗಳು ತಿಳಿಸಿವೆ.

ಇಂದು ಬೆಳಗ್ಗೆ 8.15ಕ್ಕೆ ಈ ಪ್ರದೇಶದಲ್ಲಿ 3.0 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ವರದಿ ಮಾಡಿದೆ.ನಾಲ್ಕು ಸೆಕೆಂಡುಗಳ ಕಾಲ ಕಂಪನದ ಅನುಭವವಾಗಿದೆ ಎಂದು ತ್ರಿಶೂರ್‌ ಜಿಲ್ಲಾ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ಆದಾಗ್ಯೂ, ಹಾನಿ ಅಥವಾ ಗಾಯಗಳ ತಕ್ಷಣದ ವರದಿಗಳಿಲ್ಲ.

ದೇಶದಲ್ಲಿ ಭೂಕಂಪದ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವ ಭಾರತ ಸರ್ಕಾರದ ನೋಡಲ್‌ ಏಜೆನ್ಸಿಯಾದ ಎನ್‌ಸಿಎಸ್‌‍ ಎಕ್‌್ಸ ನಲ್ಲಿ ಭೂಕಂಪದ ಕೇಂದ್ರಬಿಂದು ಅಕ್ಷಾಂಶ 10.55 ಎನ್‌ ಮತ್ತು ರೇಖಾಂಶ 76.05 ಈ ನಲ್ಲಿ ಏಳು ಕಿಮೀ ಆಳದಲ್ಲಿದೆ ಎಂದು ಪೋಸ್ಟ್‌ ಮಾಡಿದೆ.

ಏತನಧ್ಯೆ, ಕುನ್ನಂಕುಲಂ, ಎರುಮಪ್ಪೆಟ್ಟಿ ಮತ್ತು ಪಜ್ಜಂಜಿ ಪ್ರದೇಶಗಳು ಮತ್ತು ಪಾಲಕ್ಕಾಡ್‌ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಮತ್ತು ಇತರರು ಘಟನೆಯನ್ನು ಮತ್ತಷ್ಟು ಅಧ್ಯಯನ ಮಾಡಲು ಪ್ರದೇಶಗಳಿಗೆ ತೆರಳಿದ್ದಾರೆ.

RELATED ARTICLES

Latest News