Thursday, April 10, 2025
Homeರಾಷ್ಟ್ರೀಯ | Nationalನಿದ್ರಾಜನಕ ಪಾನೀಯ ನೀಡಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಇನ್‌ಸ್ಟಾಗ್ರಾಮ್‌ ಸ್ನೇಹಿತ

ನಿದ್ರಾಜನಕ ಪಾನೀಯ ನೀಡಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಇನ್‌ಸ್ಟಾಗ್ರಾಮ್‌ ಸ್ನೇಹಿತ

ಶಾಮ್ಲಿ,ಜೂ.17- ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಿತನಾದ ವ್ಯಕ್ತಿಯೊಬ್ಬ ತನ್ನ ಸ್ನೇಹಿತನೊಂದಿಗೆ ನಿದ್ರಾಜನಕ ಬೆರೆಸಿದ ತಂಪು ಪಾನೀಯ ನೀಡಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.

ಬ್ಯಾಂಕ್‌ನಲ್ಲಿ ಕೆಲಸ ಮಾಡುವುದಾಗಿ ತಿಳಿಸಿದ ವ್ಯಕ್ತಿಯೊಬ್ಬ ನನ್ನನ್ನು ಭೇಟಿಯಾಗಲು ಬಂದಾಗ ನಿದ್ರಾಜನಕ ಬೆರೆಸಿದ ತಂಪು ಪಾನೀಯ ನೀಡಿ ನಂತರ ಹೋಟೆಲ್‌ಗೆ ಕರೆದೊಯ್ದು ತನ್ನ ಸ್ನೇಹಿತನ ಜತೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾನೆ ಎಂದು ಮೀರತ್‌ ಮೂಲದ ಸಂತ್ರಸ್ಥೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಿತನಾದ ವ್ಯಕ್ತಿ ನನಗೆ ಬ್ಯಾಂಕ್‌ ಒಂದರಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನನ್ನನ್ನು ಕರೆಸಿಕೊಂಡು ಈ ರೀತಿಯ ಅತ್ಯಾಚಾರ ನಡೆಸಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಯು ತನ್ನ ಸ್ನೇಹಿತನನ್ನು ಕಳುಹಿಸಿ ಉದ್ಯೋಗ ಕೊಡಿಸುವ ಭರವಸೆಯ ಮೇರೆಗೆ ಮಹಿಳೆಯನ್ನು ತನ್ನೊಂದಿಗೆ ಡೆಹ್ರಾಡೂನ್‌ಗೆ ಬರುವಂತೆ ಹೇಳಿದ್ದ ಎನ್ನಲಾಗಿದೆ. ಆದರೆ ಅಲ್ಲಿ ಅವಳನ್ನು ಭೇಟಿಯಾಗಲಿಲ್ಲ. ನಂತರ ಆಕೆಯನ್ನು ಶಾಮ್ಲಿ ಜಿಲ್ಲೆಯ ಥಾನಭವನಕ್ಕೆ ಕರೆಸಿಕೊಂಡರು.

ಈ ಸಂದರ್ಭದಲ್ಲಿ ತನಗೆ ನಿದ್ರಾಜನಕ ಬೆರೆಸಿದ ತಂಪು ಪಾನೀಯವನ್ನು ನೀಡಿ ನಂತರ ಹೋಟೆಲ್‌ಗೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ

RELATED ARTICLES

Latest News