Sunday, October 6, 2024
Homeಕ್ರೀಡಾ ಸುದ್ದಿ | Sportsನೇಪಾಳ ವಿರುದ್ಧ ಗೆದ್ದು ಸೂಪರ್‌-8ಗೆ ಲಗ್ಗೆಯಿಟ್ಟ ಬಂಗ್ಲಾ

ನೇಪಾಳ ವಿರುದ್ಧ ಗೆದ್ದು ಸೂಪರ್‌-8ಗೆ ಲಗ್ಗೆಯಿಟ್ಟ ಬಂಗ್ಲಾ

ಕಿಂಗ್‌ಸ್ಟೌನ್‌,ಜೂನ್‌.17-ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಡಿ ಗುಂಪಿನ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ನೇಪಾಳ ವಿರುದ್ಧ 21 ರನ್‌‍ಗಳ ಜಯ ದಾಖಲಿಸಿ ಸೂಪರ್‌-8 ಹಂತಕ್ಕೆ ಲಗ್ಗೆ ಇಟ್ಟಿದೆ.

ಟಾಸ್‌‍ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶಕ್ಕೆ ಉತ್ತಮ ಆರಂಭ ಸಿಗಲಿಲ್ಲ.ವಿಕೆಟ್‌ ಕಳೆದುಕೊಳ್ಳುತ್ತಲೇ ಹೋಗಿ ಕೊನೆಗೆ ಶಕಿಬ್‌ ಉಲ್‌ ಹಸನ್‌(17) ಆಸರೆಯಾದರೂ ಇನ್ನುಳಿದಂತೆ ಆರಂಭಿಕ ಆಟಗಾರ ಲಿಟನ್‌ ದಾಸ್‌‍ 10, ಮೊಹಮುದುಲ್ಲಾ 13, ಜಕರ್‌ ಅಲಿ 12, ರಿಶದ್‌ ಹೊಸೇನ್‌( 13) ಹಾಗೂ ಟಸ್ಕಿನ್‌ ಅಹದ್‌ಕೊನೆಗೆ ಔಟ್‌ ಆಗದೆ 12 ರನ್‌ ಗಳಿಸಿ ತಂಡವನ್ನು 100ರರ ಗಡಿ ದಾಟಿಸಿದರು.

ಆರಂಭಿಕ ಆಟಗಾರ ತಂಜಿದ್‌ ಹಸನ್‌ (0) ಖಾತೆ ತೆರೆಯದೇ ಔಟಾದರೆ, ನಾಯಕ ಶಾಂಟೊ 4, ತೊವ್ಹಿದ್‌ ಹದೋಯ್‌ 9, ಹಸನ್‌ ಶಕೀಬ್‌ 3 ಹಾಗೂ ಮುಸ್ತಾಫಿರ್ಜ 3 ರನ್‌ಗೆ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ ಬಾಂಗ್ಲಾದೇಶ 19.3 ಓವರ್‌ಗಳಲ್ಲಿ ಕೇವಲ 106 ರನ್‌ಗಳಿಗೆ ಆಲೌಟ್‌ ಆಯಿತು. ನೇಪಾಳ ಪರ ಸೋಂಪಾಲ್‌ ಕಾಮಿ, ದಿಪೆಂದ್ರ ಸಿಂಗ್‌, ರೋಹಿತ್‌ ಪೌಡೆಲ್‌ ಹಾಗೂ ಸಂದೀಪ್‌ ಲಮಿಶಾನೆ ತಲಾ 2 ವಿಕೆಟ್‌ ಕಬಳಿಸಿದರು.

ಕಡಿಮೆ ಮೊತ್ತದ (107 ರನ್‌) ಗುರಿ ಬೆನ್ನಟ್ಟಿದ ನೇಪಾಳದ ಇನ್ನಿಂಗ್‌್ಸ ಕೂಡ ಬಿನ್ನವಾಗಿರಲಿಲ್ಲ ಕೇವಲ26 ರನ್‌ ಆಗುವಷ್ಟರಲ್ಲೇ ತಂಡದ ಅರ್ಧ ಬ್ಯಾಟ್‌್ಸಮನ್‌ಗಳು ಪೆವಿಲಿಯನ್‌‍ಗೆ ಮರಳಿದ್ದರು. ಕುಶಾಲ್‌ ಭುರ್ಟೆಲ್‌ (4), ಆಸಿಫ್‌ ಶೇಖ್‌( 17),ನಾಯಕ ರೋಹಿತ್‌ ಪೌಡೆಲ್‌ (1), ಅನಿಲ್‌ ಸಾಹ್‌( 0), ಸಂದೀಪ್‌ ಜೊರಾ 1 ರನ್‌ಗೆ ಔಟಾಗಿ ನಿರಾಸೆ ಮೂಡಿಸಿದರು.

ಈ ಹಂತದಲ್ಲಿ ಕುಶಾಲ್‌ ಮಲ್ಲಾ (27) ಹಾಗೂ ದಿಪೆಂದ್ರ ಸಿಂಗ್‌ (25) ಒಂದಾದ 6ನೇ ವಿಕೆಟ್‌‍ಗೆ 52 ರನ್‌ ಜೊತೆಯಾಟವಾಡಿ ನೇಪಾಳಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಆದರೆ, ಈ ವೇಳೆ ದಾಳಿಗಿಳಿದ ವೇಗಿ ಮುಸ್ತಾಫಿಜರ್‌ ಈ ಇಬ್ಬರನ್ನೂ ಔಟ್‌ ಮಾಡುವ ಮೂಲಕ ನೇಪಾಳಕ್ಕೆ ಡಬಲ್‌ ಶಾಕ್‌ ನೀಡಿದರು. ಬಳಿಕ ಕೆಳ ಕ್ರಮಾಂಕದಲ್ಲಿ ಬಂದ ಮೂವರು ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದರಿಂದ ಕೊನೆಗೆ ನೇಪಾಳ 85 ರನ್‌ಗೆ ಆಲೌಟ್‌ಆಯಿತು.

ಆಈ ಹಿಂದಿನ ಪಂದ್ಯದಲ್ಲಿಯೂ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 1 ರನ್‌ ಅಂತರದಿಂದ ಸೋತಿತ್ತು.ಬೌಲಿಂಗ್‌ನಲ್ಲಿ ಮಿಂಚಿದರೂ ಬ್ಯಾಟಿಂಗ್‌ ವೈಫಲ್ಯ ನೇಪಾಳ ತಂಡವನ್ನು ಕಾಡಿತು.ಬಾಂಗ್ಲಾ ಪರ ತಂಜಿಮ್‌ ಹಸನ್‌ ಶಕಿಬ್‌ (7 ರನ್‌ಗೆ 4), ಮುಸ್ತಾಫಿರ್ಜ ರಹಾನ್‌ (7ಕ್ಕೆ 3) ಹಾಗೂ ಶಕಿಬ್‌ ಉಲ್‌ ಹಸನ್‌ 2 ವಿಕೆಟ್‌ ಪಡೆದರು. ಈ ಗೆಲುವಿನೊಂದಿಗೆ ಬಾಂಗ್ಲಾದೇಶ ತಂಡ ಸೂರ್‌- 8 ಹಂತಕ್ಕೇರಿದ್ದು ಮುಂದೆ ಭಾರತ, ಅಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸೆಣೆಸಲಿದೆ

RELATED ARTICLES

Latest News