Sunday, October 6, 2024
Homeರಾಜಕೀಯ | Politicsತಕ್ಷಣವೇ ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ ಹಿಂಪಡೆಯದಿದ್ದರೆ ಉಗ್ರ ಹೋರಾಟ : ವಿಜಯೇಂದ್ರ ವಾರ್ನಿಂಗ್

ತಕ್ಷಣವೇ ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ ಹಿಂಪಡೆಯದಿದ್ದರೆ ಉಗ್ರ ಹೋರಾಟ : ವಿಜಯೇಂದ್ರ ವಾರ್ನಿಂಗ್

ಬೆಂಗಳೂರು,ಜೂ.17- ಏರಿಕೆ ಮಾಡಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಸರ್ಕಾರ ತಕ್ಷಣವೇ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು. ವರ್ತಿಸುತ್ತಿರುವ ಕಾಂಗ್ರೆಸ್‌‍ ಸರ್ಕಾರಕ್ಕೆ ಅಹಂಕಾರ ಮತ್ತು ದರ್ಪವನ್ನು ಇಳಿಸುವುದು ಜನರಿಗೆ ಗೊತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಪಕ್ಷದ ವತಿಯಿಂದ ನಗರದ ಫ್ರೀಡಂಪಾರ್ಕ್‌ನಲ್ಲಿ ಹಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್‌‍ ಅಹಂಕಾರ ಮತ್ತು ದರ್ಪದಿಂದ ವರ್ತಿಸುತ್ತಿದೆ. ಮುಂದಿನ ವಾರ ನಾವು ಮತ್ತು ಜೆಡಿಎಸ್‌‍ನವರು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರಸ್ತೆ ತಡೆ ನಡೆಸಲಿದ್ದೇವೆ. ಬೆಲೆ ಹಿಂತೆಗೆದುಕೊಳ್ಳುವವರೆಗೂ ನಮ ಹೋರಾಟ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ. ನಮ ಹೋರಾಟ ಉಗ್ರ ಸ್ವರೂಪ ಪಡೆಯುತ್ತದೆ ಎಂದು ಎಚ್ಚರಿಕೆ ಕೊಟ್ಟರು.

ರೈತರು, ಬಡವರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ ಗ್ಯಾರಂಟಿ ಮೂಲಕ ಜನರಿಗೆ ಬೆಲೆ ಏರಿಕೆಯ ಗ್ಯಾರಂಟಿ ಕೊಡಲು ಹೊರಟಿದೆ. ಒಬ್ಬ ಅನುಭವಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಲೋಕಸಭೆ ಚುನಾವಣೆಯಲ್ಲಿ ಸೋತಿದ್ದೇವೆ ಎಂಬ ಕಾರಣಕ್ಕೆ ಜನರಿಗೆ ಬೆಲೆ ಏರಿಕೆ ಮಾಡಿದ್ದಾರೆ. ಇದು ಜನ ವಿರೋಧಿ ಸರ್ಕಾರವಲ್ಲವೇ ಎಂದು ಪ್ರಶ್ನಿಸಿದರು.

ಸರ್ಕಾರ ತೆಗೆದುಕೊಂಡಿರುವುದು, ಅವಿವೇಕದ ನಿರ್ಧಾರ. ಲೋಕಸಭಾ ಚುನಾವಣೆ ಮುಂಚೆ ಕಾಂಗ್ರೆಸ್‌‍ ನಾಯಕರೇ ಹೇಳುತ್ತಿದ್ದರು. ರಾಜ್ಯದಲ್ಲಿ 18-19 ಸಂಸದರು ಗೆಲ್ಲದಿದ್ದರೆ ಗ್ಯಾರಂಟಿ ನಿಲ್ಲಿಸುತ್ತೇವೆ ಎಂದು ಅವರೇ ಹೇಳುತ್ತಿದ್ದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಮುಖಭಂಗ ಆಯ್ತು. ಅದಕ್ಕಾಗಿ ಗ್ಯಾರಂಟಿ ನಿಲ್ಲಿಸಿದರೆ ಜನ ದಂಗೆ ಏಳುತ್ತಾರೆ ಎಂದು ಸಿಎಂ ಅವರು ಪಿತೂರಿ ಮಾಡಿ ಗ್ಯಾರಂಟಿ ನಿಲ್ಲಿಸುವ ಬದಲು ಪೆಟ್ರೋಲ್‌,ಡೀಸೆಲ್‌ ಬೆಲೆ ಹೆಚ್ಚಳ ಮಾಡುವ ಅನ್ನೋ ತೀರ್ಮಾನ ತಗೊಂಡಿದ್ದಾರೆ.

ವಿಪಕ್ಷ ನಾಯಕರಾಗಿದ್ದಾಗ ಇದ್ದ ಜನಪರ ಕಾಳಜಿಮುಖ್ಯಮಂತ್ರಿ ಆದೇಲೆ ಎಲ್ಲಿ ಕಳೆದೋಯಿತು? ನಿಮ ಪಕ್ಷದ ಶಾಸಕರಾದ ನಾಡಗೌಡರೇ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಜನರ ಮುಂದೆ ತಲೆ ಎತ್ತಿಕೊಂಡು ಓಡಾಡೋಕೆ ಆಗುತ್ತಿಲ್ಲ ಎಂದಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಕ್ಷೇತ್ರದಲ್ಲಿ ತಲೆ ಎತ್ತಿಕೊಂಡು ಓಡಾಡೋಕೆ ಆಗುತ್ತಿಲ್ಲ. ಬೊಮ್ಮಾಯಿ ಸಿಎಂ ಸ್ಥಾನದಿಂದ ಇಳಿದಾಗ ರೆವಿನ್ಯೂ ಸರ್‌ ಫ್ಲೆಸ್‌‍ ಇತ್ತು. ಒಂದೇ ವರ್ಷದಲ್ಲಿ ರಾಜ್ಯ ದಿವಾಳಿಯ ಅಂಚಿನಲ್ಲಿ ಹೋಗುತ್ತಿದೆ. ಯಾವ ಪುರುಷಾರ್ಥಕ್ಕೆ ಅಧಿಕಾರ ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಅಶ್ವಥ್‌ ನಾರಾಯಣ ಮಾತನಾಡಿ, ಕಾಂಗ್ರೆಸ್‌‍ ಅಧಿಕಾರಕ್ಕೆ ಬಂದ ದಿನದಿಂದಲೂ ಬರೀ ಅನ್ಯಾಯ ಮಾಡುತ್ತಿದ್ದಾರೆ. ಎಲ್ಲಾ ದರ ಏರಿಕೆ ಮಾಡುತ್ತಿದ್ದಾರೆ. ಆರ್ಥಿಕ ತಜ್ಞರ ನಾಯಕತ್ವದಲ್ಲಿ ಹಣದುಬ್ಬರದ ಆಗಿದೆ. ನಾವು ಎಷ್ಟು ಪ್ರತಿಭಟನೆ ಮಾಡಿದ್ರು ದಪ್ಪ ಚರ್ಮದವರು ಕ್ಯಾರೆ ಎನ್ನಿತ್ತಿಲ್ಲಅವರು ಅಕ್ಕಪಕ್ಕದ ರಾಜ್ಯಗಳಿಗೆ ಬೆಲೆ ಹೋಲಿಕೆ ಮಾಡ್ತಿದ್ದಾರೆನಾವು ಕೋವಿಡ್‌ ಟೈಮ್‌ ನಲ್ಲಿ 1 ರೂ. ಏರಿಕೆ ಮಾಡಿದಾಗ ಸಿದ್ದರಾಮಯ್ಯನವರು ಎಷ್ಟೆಲ್ಲಾ ಮಾತಾಡಿದ್ದರು. ತಿಳುವಳಿಕೆ ಕೊಟ್ಟ ಮಹಾಪುರುಷರ ಕ್ರಮ ಯಾವ ನ್ಯಾಯ ಎಂದು ಆಕ್ರೋಶ ಹೊರಹಾಕಿದರು.

ನಮ್ಮ ರಾಜ್ಯದಲ್ಲಿ ಹಣದ ಕೊರತೆ ಇಲ್ಲ ಎಂದವರು, ಏಕೆ ಬೆಲೆ ಏರಿಕೆ ಮಾಡಿದ್ದಾರೆ.ಜನಪರ ಕೆಲಸ ಮಾಡದೆ, ಬರೀ ಲೂಟಿ ಹೊಡಿತಿದ್ದಾರೆಜೈಲಲ್ಲಿ ಇರಬೇಕಾದ ಸರ್ಕಾರ ಇದುಸ್ವಾತಂತ್ರ್ಯ ಬಂದ ಕಾಲದಿಂದಲೂ ನಾವು ಇಷ್ಟು ವೀಕ್‌‍, ಚೀಪ್‌ ಮುಖ್ಯಮಂತ್ರಿ ನಾವು ಕಂಡಿಲ್ಲಮಂತ್ರಿಮಂಡಲದ ಒಬ್ಬ ಸಚಿವರು ಸಿಎಂ ಮಾತು ಕೇಳುತ್ತಿಲ್ಲವಲ್ಲಾ, ಸಚಿವರು ಸಿಎಂ ಆಗೋಕೆ ಹೊತಟಿದ್ದಾರೆ, ಸಿಎಂ ಸಚಿವರ ಎದುರು ಧಮಯ್ಯ ಅಂತಿದ್ದಾರೆ. ಬೆಂಬಲ ಕೊಡಿ ಎಂದು ಭಿಕ್ಷೆ ಬೇಡುತ್ತಿದ್ದಾರೆ. ಇಂತಹ ಅಸಹಾಯಕ ಸಿಎಂ ಸಿದ್ದರಾಮಯ್ಯ ಬೆಲೆ ಏರಿಕೆ ಹಿಂಪಡೆಯುವವರೆಗೆ ನಾವು ಪ್ರತಿಭಟನೆ ನಿಲ್ಲಿಸಲ್ಲ. ಎಲ್ಲಾ ಸಂಘಟನೆಗಳ ಬೆಂಬಲ ಪಡೆದು ಸರ್ಕಾರಕ್ಕೆ ಬುದ್ದಿ ಕಲಿಸುತ್ತೇವೆ ಎಂದು ಗುಡುಗಿದರು.

ದರ ಹಿಂಪಡೆಯುವವರೆಗೂ ಹೋರಾಟ :
ಪೆಟ್ರೋಲ್‌- ಡೀಸೆಲ್‌ಗಳ ಮೇಲೆ ಹೆಚ್ಚಿಸಿರುವ ದರವನ್ನು ವಾಪಾಸ್‌‍ ಪಡೆಯದಿದ್ದರೆ ದರ ಹಿಂಪಡೆಯುವವರೆಗೂ ಹೋರಾಟವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರಕ್ಕೆ ನೇರ ಎಚ್ಚರಿಕೆ ಕೊಟ್ಟಿದ್ದಾರೆ.

ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇಂದಿನ ಸರ್ಕಾರದಷ್ಟು ಜನ ವಿರೋಧಿ ಸರ್ಕಾರವನ್ನು ರಾಜ್ಯದ ಜನತೆ ಎಂದೂ ಕಂಡಿಲ್ಲ. ಸುಳ್ಳು ಭರವಸೆಗಳು ಹಾಗೂ ಯೋಜನೆಗಳನ್ನು ಪೂರೈಸಲಾಗದೇ ರಾಜ್ಯದ ಖಜಾನೆಯನ್ನು ಬರಿದು ಮಾಡಿಕೊಂಡಿರುವ ಈ ಸರ್ಕಾರ ಜನಕಲ್ಯಾಣವನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೆಟ್ರೋಲ್‌‍-ಡೀಸೆಲ್‌ ದರ ಆರಂಭವಷ್ಟೇ ಇನ್ನು ಈ ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಗಳೂ ಗಗನಕ್ಕೇರಲಿವೆ, ಜನಸಾಮಾನ್ಯರು, ಕಾರ್ಮಿಕರು, ಬಡವರು ಹಾಗೂ ಮಧ್ಯಮ ವರ್ಗದವರು ಬೆಲೆ ಏರಿಕೆಯ ಚಕ್ರವ್ಯೂಹದಲ್ಲಿ ಸಿಲುಕಿ ನಲುಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದಿದ್ದಾರೆ.

ಈ ಬೆಲೆ ಏರಿಕೆಯ ಬಿಸಿ ಪಂಪ್‌ಸೆಟ್‌, ಟ್ರಾಕ್ಟರ್‌ ಸೇರಿದಂತೆ ಇತರ ಕೃಷಿ ಉಪಕರಣಗಳನ್ನು ಬಳಸುವ ರೈತರ ಕೈ ಸುಡಲಿದೆ. ಅದರ ಜೊತೆಗೆ ವಾಹನವನ್ನು ಆಶ್ರಯಿಸಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ಕೂಡ ಇದರ ಬಿಸಿ ತಟ್ಟಲಿದೆ. ಒಟ್ಟಾರೆಯಾಗಿ ಎಲ್ಲ ಕ್ಷೇತ್ರಗಳಿಗೂ ಬೆಲೆ ಏರಿಕೆಯ ಬಿಸಿತಟ್ಟಿಸುವ ನಿರ್ಧಾರವನ್ನು ಈ ಕೂಡಲೇ ಕೈಬಿಡಬೇಕೆಂದು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಸಂಪನೂಲವನ್ನು ಬಳಸಿಕೊಳ್ಳುವ ಯಾವ ಕಾಳಜಿಯೂ ಸರ್ಕಾರಕ್ಕಿಲ್ಲ, ಬದಲಾಗಿ ರಾಜ್ಯದ ಸಂಪನೂಲವನ್ನು ಕೊಳ್ಳೆ ಹೊಡೆಯುವವರಿಗೆ ಆಥಿತ್ಯ ನೀಡುವ ತಾಣವನ್ನಾಗಿಸುತ್ತಿದೆ, ಕಾಂಗ್ರೆಸ್‌‍ ಕರ್ನಾಟಕದಲ್ಲಿ ಅರಾಜಕತೆ ಸೃಷ್ಟಿ ಮಾಡಿಯೇ ಅಧಿಕಾರದಿಂದ ಕೆಳಗಿಳಿಯುವ ಶಪಥ ಮಾಡಿದಂತೆ ಕಾಣುತ್ತಿದೆ ಎಂದು ಗುಡುಗಿದ್ದಾರೆ.

RELATED ARTICLES

Latest News