Tuesday, December 3, 2024
Homeರಾಜ್ಯಹುಬ್ಬಳ್ಳಿಯಲ್ಲಿ ಸಿಟಿ ರವಿ ವಿರುದ್ಧ ದೂರು ದಾಖಲು

ಹುಬ್ಬಳ್ಳಿಯಲ್ಲಿ ಸಿಟಿ ರವಿ ವಿರುದ್ಧ ದೂರು ದಾಖಲು

ಹುಬ್ಬಳ್ಳಿ,ಜೂ.19-ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿ.ಟಿ.ರವಿ ವಿರುದ್ಧ ಹುಬ್ಬಳ್ಳಿ ಉಪನಗರ ಪೊಲೀಸ್‌‍ ಠಾಣೆಗೆ ದೂರು ಸಲ್ಲಿಕೆ ಆಗಿದೆ. ತೈಲದರ ಏರಿಕೆ ಖಂಡಿಸಿ ನಿನ್ನೆ ಬಿಜೆಪಿ ನಾಯಕರು ಧರಣಿ ನಡೆಸಿದ್ದರು.

ಈ ವೇಳೆ ಪ್ರತಿಭಟನೆಯಲ್ಲಿ ಸಿ.ಟಿ ರವಿ ಅವರು ಸಿದ್ದರಾಮಯ್ಯರವರನ್ನು ಟೀಕಿಸಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯಗೆ ಅಗೌರವ ತೋರಿದ್ದಾರೆ ಎಂದು ರಾಜ್ಯ ಬಾಲವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ವೇದವ್ಯಾಸ ಕೌಲಗಿ ಅವರು ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದಾರೆ.

ರಾಜ್ಯದಲ್ಲಿ ಪೆಟೋಲ್‌ ಹಾಗೂ ಡೀಸೆಲ್‌ ದರ ಏರಿಕೆಗೆ ಬಿಜೆಪಿ ಆಕೋಶ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಈ ಮಧ್ಯೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ನಾಯಕರು ಹೋರಾಟ ನಡೆಸಿದ್ದರು. ಈ ವೇಳೆ ಮಾತನಾಡಿದ್ದ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ, ಮೂರು ಬಿಟ್ಟವರು ಭಂಡತನದ ಸಮರ್ಥನೆ ಮಾಡೋದು.

ಭಂಡತನದ ಸಮರ್ಥನೆ ಬಿಟ್ಟು ಯಾಕೆ ಸೆಸ್‌‍ ಹಾಕೀರೋದು ಎಂದು ಹೇಳಲಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದರು. ಈ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್‌. ಅಶೋಕ್‌, ಸಿ.ಟಿ ರವಿ, ಅಶ್ವತ್ಥನಾರಾಯಣ್‌ ಸೇರಿದಂತೆ ಶಾಸಕರು, ಪರಿಷತ್‌ ಸದಸ್ಯರು ಭಾಗಿಯಾಗಿದ್ದರು.

RELATED ARTICLES

Latest News