Friday, November 22, 2024
Homeರಾಷ್ಟ್ರೀಯ | Nationalಕಾಂಗ್ರಸ್‌‍ ನಾಯಕ ಕಿರಣ್‌ ಚೌಧರಿ ಮತ್ತು ಅವರ ಪುತ್ರಿ ಬಿಜೆಪಿ ಸೇರ್ಪಡೆ

ಕಾಂಗ್ರಸ್‌‍ ನಾಯಕ ಕಿರಣ್‌ ಚೌಧರಿ ಮತ್ತು ಅವರ ಪುತ್ರಿ ಬಿಜೆಪಿ ಸೇರ್ಪಡೆ

ನವದೆಹಲಿ, ಜೂನ್‌ 19 – ಹರಿಯಾಣದ ಮಾಜಿ ಕಾಂಗ್ರೆಸ್‌‍ ನಾಯಕರಾದ ಕಿರಣ್‌ ಚೌಧರಿ ಮತ್ತು ಅವರ ಪುತ್ರಿ ಶ್ರುತಿ ಚೌಧರಿ ಅವರು ತಮ ಬೆಂಬಲಿಗರೊಂದಿಗೆ ಇಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.ವರ್ಷಾಂತ್ಯದಲ್ಲಿ ಹರಿಯಾಣದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರಸ್‌‍ ಹಲವು ನಾಯಕರು ಪಕ್ಷ ತ್ಯಜಿಸುತ್ತಿದ್ದಾರೆ.

ಕಿರಣ್‌ ಚೌಧರಿ ಮತ್ತು ಶ್ರುತಿ ಚೌಧರಿ ಇಬ್ಬರೂ ನಿನ್ನೆ ಕಾಂಗ್ರೆಸ್‌‍ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು, ಪಕ್ಷದ ರಾಜ್ಯ ಘಟಕ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.ಕಿರಣ್‌ ಚೌಧರಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಬನ್ಸಿ ಲಾಲ್‌ ಕುಟುಂಬದವರು,ಮತ್ತು ಸದ್ಯ ಭಿವಾನಿ ಜಿಲ್ಲೆಯ ತೋಷಮ್‌ನಿಂದ ಹಾಲಿ ಶಾಸಕರಾಗಿದ್ದಾರೆ. ಶತಿ ಚೌಧರಿ ಅವರು ಹರಿಯಾಣ ಕಾಂಗ್ರೆಸ್‌‍ ಘಟಕದ ಕಾರ್ಯಾಧ್ಯಕ್ಷರಾಗಿದ್ದರು.

ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಬಿಜೆಪಿ ನಾಯಕರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಿರಣ್‌ ಚೌಧರಿ, ಈಗ ನನಗೂ ಕೇಸರಿ ಬಣ್ಣವಿದೆ, ಆದರೆ ಈ ಬಣ್ಣವು ಚೌಧರಿ ಬನ್ಸಿ ಲಾಲ್‌ ಅವರ ಬಣ್ಣವೂ ಆಗಿತ್ತು ಎಂದು ಹೇಳಿದರು.

ನಾವು 20 ವರ್ಷಗಳ ಹಿಂದೆ ಹರಿಯಾಣ ವಿಕಾಸ್‌‍ ಪಕ್ಷವನ್ನು ಕಾಂಗ್ರೆಸ್‌‍ಗೆ ವಿಲೀನಗೊಳಿಸಿದ್ದೇವೆ, ಇಂದು ನಾನು ನಮ ಕೈಯಲ್ಲಿ ಬಿಜೆಪಿಯ ಧ್ವಜವನ್ನು ಹಿಡಿದಿದ್ದೇವೆ ಕೊನೆಯ ಕ್ಷಣದವರೆಗೂ ಇಲ್ಲಿರುತ್ತೇನೆ ಮುಂದೆ ಬಿಜೆಪಿಯ ಪ್ರಚಂಡ ವಿಜಯ ಖಚಿತ ಎಂದು ಹೇಳಿದರು.

ಇಂದಿನಿಂದ ನಮ ಕೆಲಸ ಶುರುವಾಗಿದೆ. ಚೌಧರಿ ಬನ್ಸಿ ಲಾಲ್‌ ಅವರ ಹೆಸರನ್ನು ತೆಗೆದುಕೊಂಡು ಬಿಜೆಪಿಯ ನೀತಿಗಳ ಬಗ್ಗೆ ಕೆಲಸ ಮಾಡಲು ಪ್ರಾರಂಭಿಸಿ, ಬಿಜೆಪಿಯ ಉನ್ನತ ನಾಯಕತ್ವವನ್ನು ಶ್ಲಾಘಿಸಿ, ಹರಿಯಾಣದ ಮೂಲೆ ಮೂಲೆಗಳಿಗೆ ಭೇಟಿ ನೀಡಿ. ಇದು ಚೌಧರಿ ಬನ್ಸಿ ಲಾಲ್‌ ಮತ್ತು ಚೌಧರಿ ಸುರೇಂದ್ರ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದರು.

ಪಕ್ಷದ ನೀತಿ ಮತ್ತು ಪ್ರಧಾನಿ ಮೋದಿ ಅವರ ಕಳೆದ ಹತ್ತು ವರ್ಷಗಳ ಸರ್ಕಾರದಲ್ಲಿ ತೆಗೆದುಕೊಂಡ ಐತಿಹಾಸಿಕ ನಿರ್ಧಾರಗಳಿಂದ ಸ್ಫೂರ್ತಿಗೊಂಡು ಬಿಜೆಪಿಗೆ ಸೇರ್ಪಡೆಗೊಂಡಿರುವುದಾಗಿ ಶ್ರುತಿ ಚೌಧರಿ ಹೇಳಿದ್ದಾರೆ.

RELATED ARTICLES

Latest News